ಮುಖ್ಯ್ಯೊಪಾಧ್ಯಾಯರ ಸಭೆ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಗಳೇನು ಗೊತ್ತಾ…..

Suddi Sante Desk
ಮುಖ್ಯ್ಯೊಪಾಧ್ಯಾಯರ ಸಭೆ  ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಗಳೇನು ಗೊತ್ತಾ…..

ಬೆಳಗಾವಿ

 

ಹೌದು ಬೆಳಗಾವಿ ನಗರದ ಫುಲಭಾಗ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನo,7 ರಲ್ಲಿ  ಕರ್ನಾಟಕ ರಾಜ್ಯ ಹಿರಿಯ ಹಾಗೂ ಪದವಿ ಧೆರೇತರ ಪ್ರಾಥಮಿಕ ಶಾಲಾ ಮುಖ್ಯ್ಯೊಪಾದ್ಯಾ ಯರ ಸಂಘದ ಖಾನಾಪುರ,ಬೆಳಗಾವಿ ನಗರ, ಬೆಳಗಾವಿ ತಾಲೂಕು ಸಂಘಗಳ ಪದಾಧಿಕಾರಿಗಳ ಸಭೆಯು ಬೆಳಗಾವಿ ನಗರ ಸಂಘದ ಗೌರವ ಅಧ್ಯಕ್ಷರಾದ ಡಿ ಎಸ್ ಪೂಜಾರ ರವರ ಅಧ್ಯಕ್ಷತೆ ಯಲ್ಲಿ ಜರುಗಿತು ಅವರು ಸಂಘಟನೆ ಬಲ ಗೊಳಿ ಸುವ ಅಗತ್ಯತೆ ವಿವರಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವ ರಾಜ ಸುಣಗಾರ ಯವರು ಮಾತನಾಡಿ ಸಂಘದ ಕಾರ್ಯಚಟುವಟಿಕೆ ವಿವರಿಸಿ ಮುಂದಿನ ಕಾರ್ಯಕ್ರಮಗಳಿಗೆ ಸರ್ವರ ಸಹಕಾರ ಬಯಸಿ ದರು,ಜಿಲ್ಲೆಯಲ್ಲಿ ಶಿಸ್ತು ಬದ್ಧ ರೀತಿಯಲ್ಲಿ ಸಂಘದ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ನಿರ್ಧರಿಸ ಲಾಗಿದೆ ಎಂದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗಿರೀಶ ಜಗಜಂಪಿ,ರಸೂಲ್ ಖಾನ, ಖಾನಾಪುರ ದಎಸ್ ಬಿ ಜಕಾತಿ,ಕಿತ್ತೂರಿನ ಬಾಬು ವಿ ಹಿರೇ ಮಠ,ಶ್ರೀಮತಿ ಎನ್ ಆರ್ ಮೇಳವಂಕಿ, ಶ್ರೀಮತಿ ಎನ್ ಬಿ ತಳವಾರ, ಶ್ರೀಮತಿ ಎ ಎಮ್ ಹುಲಗ ಬಾಳಿ, ಶ್ರೀಮತಿ ಶೇಖಮ್ಮ ನವರ, ಶಿವಾನಂದ ಹಿತ್ತಲಮನಿ, ಆಯ್ ಜಿ ಕಂಚಿಮಠ, ಬಿ ವಾಯ್ ಮಡಿವಾಳರ,ಎಸ್ ಟಿ ಕೋಲಕಾರ, ಜೆ ಬಿ ಪರ ಮಾಜ,ಪಿ ಜಿ ಕಾಂಬಳೆ, ಎಮ್,ವಾಯ್, ಕೊರ್ಡೇ ಸೇರಿದಂತೆ ಹಲವರು ಮಾತನಾಡಿದರು.

ಸಭೆಯಲ್ಲಿ ವಾರ್ಷಿಕ ಸದಸ್ಯತ್ವ ಸಂಗ್ರಹಣೆ ಅಭಿಯಾನ ಆರಂಭಿಸಲಾಯಿತು, ಮುಖ್ಯೋ ಪಾದ್ಯಾಯರ ಸಮಸ್ಯೆ ಕುರಿತು ಸುದೀರ್ಘ ಚರ್ಚಿಸಿ ಅವುಗಳ ಪರಿಹಾರಕ್ಕಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಲಾ ಯಿತು.ವಿಷಯ ಸನ್ 2022-23 ನೆಯ ಸಾಲಿನ ಕ್ರಿಯಾಯೋಜನೆ ತಯಾರಿಸಲಾಯಿತು, ಮುಖ್ಯೋದ್ಯಾರಿಗೆ ಪ್ರತ್ಯೇಕ ವೇತನ ಶ್ರೇಣಿ, ವಾರ್ಷಿಕ ಗಳಿಕೆ ರಜೆ ಮುಂಜೂರ ಮಾಡುವಂತೆ ಅಗ್ರಹಿಸಿ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳ ಗಮನ ಸೆಳೆಯಲು ಬೆಂಗಳೂರಿಗೆ ನಿಯೋಗ ತೆಗೆದುಕೊಂಡು ಹೋಗಲು ಸಮ್ಮತಿಸಲಾಯಿತು,

ಪ್ರಾರಂಭದಲ್ಲಿ ಮುಖ್ಯ ಶಿಕ್ಷಕರಾದ ಎಸ್ ಎ ನದಾಫ ಪ್ರಾರ್ಥಿಸಿದರು,ನಗರ ಘಟಕದ ಅಧ್ಯಕ್ಷ ರಾದ ಅರ್ಜುನ ಡಿ ಸಾಗರ ಸ್ವಾಗತಿಸಿದರು, ಪ್ರಧಾನಕಾರ್ಯದರ್ಶಿ ಬಸವರಾಜ ಹಟ್ಟಿಹೋಳಿ ಕಾರ್ಯಕ್ರಮ ನಿರ್ವಹಿಸಿದರು,ಮುಖ್ಯ ಶಿಕ್ಷಕರಾದ ಎಸ್ ಜಿ ಚವಲಗಿ ವಂದಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.