ಬೆಂಗಳೂರು –

ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಬಿಟ್ಟು ಬೇರೆ ಕಾರ್ಯಗಳಿಗೆ ನಿಯೋಜನೆಗೊಂಡಿರುವ ಮತ್ತು ಕಾನೂನು ಬಾಹಿರವಾಗಿ ಶಿಕ್ಷಕರನ್ನು ಮತ್ತು ಅಧಿಕಾರಿಗಳನ್ನು ನೇಮಕ ಮಾಡಿರುವ ವಿಚಾರ ವನ್ನು ಸಾರ್ವಜನಿಕರ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರಾದ ಡಾ ರೂಪಶ್ರೀ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಡಿಪಿಐ ಅವರಿಗೆ ಪತ್ರವನ್ನು ಬರೆದು ಕಾನೂನು ಬಾಹಿರ ವಾಗಿ ಶಿಕ್ಷಕರನ್ನು ಮತ್ತು ಅಧಿಕಾರಿಗಳನ್ನು ಬೇರೆ ಬೇರೆ ಕಡೆಗಳಲ್ಲಿ ನಿಯೋಜನೆ ಮಾಡಿದ್ದು ಗಮನಕ್ಕೆ ಬಂದಿದ್ದು ಕೂಡಲೇ ಅವರನ್ನು ಕರ್ವತ್ಯದಿಂದ ಬಿಡುಗಡೆ ಮಾಡಿ ಕೂಡಲೇ ಮರಳಿ ಅವರ ಶಾಲೆಗಳಿಗೆ ನಿಯೋಜನೆ ಮಾಡುವಂತೆ ಆದೇಶವನ್ನ ಮಾಡಿದ್ದಾರೆ

ಕೂಡಲೇ ಇವರನ್ನು ನಿಯೋಜನೆ ಮಾಡುವಂತೆ ಆದೇಶ ಮಾಡಿದ್ದಾರೆ.ಈ ಕುರಿತಂತೆ ಮಾಡದಿದ್ದರೆ ಅವರಿಗೆ ಸೂಚನೆ ನೀಡದಿದ್ದರೆ ತಪ್ಪಿತಸ್ಥ ಅಧಿಕಾರಿ ಗಳ ಮೇಲೆ ಸೂಕ್ತವಾದ ಶಿಸ್ತು ಕ್ರಮವನ್ನು ಕೈಗೊಳ್ಳು ವುದಾಗಿ ಆದೇಶ ಮಾಡಿ ಖಡಕ್ ಸಂದೇಶವನ್ನು ನೀಡಿದ್ದಾರೆ.