ಸ್ವ ಪಕ್ಷ ಮತ್ತು ಸರ್ಕಾರದ ವಿರುದ್ಧ Mlc ಕೆ‌.ಪಿ‌. ನಂಜುಂಡಿ ಆಕ್ರೋಶ ವಿಶ್ವಕರ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ನಮ್ಮನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಂಡಿದ್ದಾರೆ ಎನ್ನುತ್ತಾ ಅಸಮಾಧಾನ ವ್ಯಕ್ತಪಡಿಸಿದ ಕೆ ಪಿ ನಂಜುಂಡಿ

Suddi Sante Desk
ಸ್ವ ಪಕ್ಷ ಮತ್ತು ಸರ್ಕಾರದ ವಿರುದ್ಧ Mlc ಕೆ‌.ಪಿ‌. ನಂಜುಂಡಿ ಆಕ್ರೋಶ ವಿಶ್ವಕರ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ನಮ್ಮನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಂಡಿದ್ದಾರೆ ಎನ್ನುತ್ತಾ ಅಸಮಾಧಾನ ವ್ಯಕ್ತಪಡಿಸಿದ ಕೆ ಪಿ ನಂಜುಂಡಿ

ಧಾರವಾಡ

ಸ್ವ ಪಕ್ಷ ಮತ್ತು ಸರ್ಕಾರದ ವಿರುದ್ಧ ಎಂಎಲ್‌ಸಿ ಕೆ‌.ಪಿ‌. ನಂಜುಂಡಿ ಆಕ್ರೋಶವನ್ನು ವ್ಯಕ್ತಪಡಿಸಿ ದರು.ಧಾರವಾಡದಲ್ಲಿ ಮಾತನಾಡಿದ ನಂಜುಂಡಿ ಅವರು ಎಂಎಲ್‌ಸಿ  ಅನ್ನೋದು ಅಧಿಕಾರವಲ್ಲ ಒಂದು ಗೌರವ ಅಷ್ಟೆ ಇಟ್ಟುಕೊಂಡಿದ್ದೆ ನಷ್ಟೇ ಬದಲಾವಣೆ ಏನೂ ಇಲ್ಲ ಎಂದರು.ಒಂದು ಮನೆ ಕೊಡಿಸಿ ಅಂದರೂ ಆಗುವುದಿಲ್ಲ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಬೇಕು ಎಂದರು.

ನಮ್ಮದು ಸಂಘಟನೆ ಮಾಡೋದು ಒಂದಲ್ಲ‌ ಒಂದು ದಿನ ಸತ್ತು ಹೋಗೋದಷ್ಟೇ ಆಗಿದೆ.ಈಗ ಏನನ್ನು ನಾನು ಸರ್ಕಾರ ಪಕ್ಷದಲ್ಲಿ ಕೇಳುತ್ತಿಲ್ಲ ಕೇಳಿ,ಕೇಳಿ ನಮಗೆ ನಾಚಿಕೆ, ಅವಮಾನ ಆಗುತ್ತಿದೆ ದೇವೇಗೌಡರು, ಸಿದ್ದರಾಮಯ್ಯ,ಯಡಿಯೂರಪ್ಪ ಎಲ್ಲರೂ ನನ್ನ ಸಮಾಜ ಸಂಘಟಕ ಅಂತಾ ಹೊಗ ಳಿದ್ದಾರೆ.ಯಡಿಯೂರಪ್ಪ ಮನೆಗೆ ಬಂದು ಕರೆದು ಕೊಂಡರು ಎಂದರು.ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಜೊತೆ 224 ಕ್ಷೇತ್ರ ಸುತ್ತಿದ್ದೇನೆ ಇಡೀ ಸಮಾಜವನ್ನು ಪ್ರಾಮಾಣಿಕವಾಗಿ ಪಕ್ಷಕ್ಕೆ ತೆಗೆದುಕೊಂಡು ಹೋಗಿದ್ದೆ ಎಂದರು.ಈಗ ಎದೆ ಬಗೆದು ಅದನ್ನು ತೋರಿಸಲು ಆಗೋ ದಿಲ್ಲ. ತುಂಬಾ ನೊಂದಿದ್ದೇವೆ.ನಮ್ಮನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಂಡಿದ್ದಾರೆ  ಎನ್ನುತ್ತಾ ಅಸಮಾಧಾನ ವ್ಯಕ್ತಪಡಿಸಿದರು.

 

 

ವಿಶ್ವಕರ್ಮರು ಸೌಲಭ್ಯದಿಂದ ವಂಚಿತರಾಗಿರೋ ಹಿನ್ನೆಲೆ.ಸೌಲಭ್ಯ ಸಿಗದಕ್ಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ.ವಿಶ್ವಕರ್ಮರು ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಹೋಗುತ್ತಿದ್ದಾರೆ ಎಂಬ ಆಘಾತಕಾರಿಯಾದ ವಿಚಾರವನ್ನು ಕೆ.ಪಿ ನಂಜುಂಡಿ ಅವರು ಹೇಳಿದರು.ಎಷ್ಟೋ ಕಡೆ ನಮ್ಮ ಸಮಾಜದವರು ಬೇರೆ ಬೇರೆ ಧರ್ಮಕ್ಕೆ ಹೋಗುತ್ತಿದ್ದಾರೆ.ದಕ್ಷಿಣ ಕನ್ನಡದಲ್ಲಿ ಮತಾಂತರ ಆಗುತ್ತಿದ್ದಾರೆ.ನಾನು ಎಂಎಲ್‌ಸಿ ಆಗಿ ಏನಿದೆ ಅಂತಾ ಅವರನ್ನು ಹಿಡಿದುಕೊಳ್ಳಲಿ.ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕಾಗಿ ಹೋರಾಟ ಮಾಡಿದ್ವಿ ಐದು ತಿಂಗಳಿನಿಂದ ನಿಗಮ ಖಾಲಿ ಇದೆ.ಭರ್ತಿ ಮಾಡುತ್ತಿಲ್ಲವೆಂದರು.

ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಹೋಗುತ್ತಿದ್ದಾರೆ ಅವರನ್ನು ತಡೆಯಲು ಆಗುತ್ತಿಲ್ಲ ಕೇಳಿದ್ರೆ- ತಿನ್ನೋಕೆ‌ ಗತಿ ಇಲ್ಲ ನಿಮ್ಮ ಸರ್ಕಾರ ತಂದು ಕೊಡುತ್ತಾ? ಅಂತಾ ಕೇಳ್ತಾರೆ ಏನು ಹೇಳಲಿ ಎನ್ನುತ್ತಾ ಅಸಮಾಧಾನ ತೋಡಿಕೊಂಡರು. ಬದುಕಲು, ಊಟಕ್ಕೆ ಜಾತಿ ಇಲ್ಲ ಅದು ಇಲ್ಲದೇ‌ ಇದ್ದಾಗಲೇ ಅಲ್ವೇ ಬೇರೆ ಕಡೆ ಹೋಗೋದು ಕಸುಬುಗಳನ್ನು ನಂಬಿ ಶೋಚನೀಯವಾಗಿದ್ದೇವೆ ಎಂದರು.ಸಾಮಾಜಿಕ ನ್ಯಾಯದಿಂದ ವಂಚಿತ ವಾದ ಸಮಾಜ ವಿಶ್ವಕರ್ಮರದ್ದಾಗಿದೆ ಎಂದರು

ಚಕ್ರವರ್ತಿ ಜೊತೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.