ಬೆಂಗಳೂರು –
ಅಂತೂ ಇಂತೂ ಕರೋನಾ ಕಡಿಮೆಯಾಗುತ್ತಿದೆ ನಿರೀಕ್ಷೆಯಂತೆ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಈಗಾಗಲೇ ನಾಡಿನಾಧ್ಯಂತ ಶಿಕ್ಷಕರು ಶಾಲೆಗಳತ್ತ ಮುಖ ಮಾಡಿದ್ದಾರೆ.ಮಕ್ಕಳು ಇನ್ನೂ ಬರದಿದ್ದರೂ ಕೂಡಾ ಶಿಕ್ಷಕರು ಕಾಯಕವೇ ಕೈಲಾಸ ಎಂದುಕೊಂ ಡು ಬಿಡುವಿಲ್ಲದೇ ಶೈಕ್ಷಣಿಕ ಚಟುವಿಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಇನ್ನೂ ಒಂದನೇಯ ಅಲೆಗಿಂತ ರಾಜ್ಯದಲ್ಲಿ ಎರಡ ನೇಯ ಅಲೆ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವ ನ್ನುಂಟು ಮಾಡಿದ್ದು ಅದರಲ್ಲೂ ಶಿಕ್ಷಣ ಇಲಾಖೆ ಯಲ್ಲಿ ಅತಿ ಹೆಚ್ಚು ಸಾವುಗಳಾಗಿದ್ದು ಶಿಕ್ಷಕರು ಅತಿ ಹೆಚ್ಚು ದಾಖಲೆಯ ಪ್ರಮಾಣದಲ್ಲಿ ಸಾವಿಗೀಡಾಗಿ ದ್ದಾರೆ.
ಒಂದನೇಯ ಅಲೆಯಲ್ಲಿ ಮೃತರಾದ ಶಿಕ್ಷಕರಿಗೆ ಇನ್ನೂ ಈವರೆಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು ಇನ್ನೂ ಇದರ ನಡುವೆ ಎರಡನೇಯ ಅಲೆಯಲ್ಲೂ ಕೂಡಾ ಮೃತರಾದವರಿಗೂ ಪರಿಹಾರ ಯಾವಾಗ ಸಿಗುತ್ತದೆ ಎಂಬ ಮಾತು ಹಾಗೇ ಉಳಿದುಕೊಂಡಿದ್ದು ಒಂದಂ ತೂ ನಿಜ ಮೃತರಾದ ಕುಟುಂಬಗಳಿಗೆ ಬೆರಳಣಿಕೆಯ ಪ್ರಮಾಣದಲ್ಲಿ ಮಾತ್ರ ಅಲ್ಲಲ್ಲಿ ಸೂಕ್ತವಾದ ಪರಿಹಾ ರ ನೀಡಿದ್ದು ಇದರ ನಡುವೆ ಮೃತರಾದ ನೌಕರರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಉದ್ಯೋಗ ವನ್ನು ನೀಡಿದ್ದು ಒಂದೆಡೆಯಾದರೆ ಇನ್ನೂ ಬಹುತೇಕ ಪ್ರಮಾಣದಲ್ಲಿ ಪರಿಹಾರದ ಮಾತು ಮರಿಚಿಕೆಯಾಗಿ ಉಳಿದಿದೆ.
ಇದು ಒಂದು ವಿಚಾರವಾದರೆ ಇನ್ನೂ ನಾಡಿನ ಶಿಕ್ಷಕ ರಿಗೆ ದೊಡ್ಡ ತಲೆನೋವಾಗಿದ್ದು ಶಿಕ್ಷಕರ ವರ್ಗಾವಣೆ ವಿಚಾರ. ಕಳೆದ ಹಲವಾರು ವರಷಗಳಿಂದ ಆವಾಗ ಈವಾಗ ಆಗುತ್ತದೆ ವರ್ಗಾವಣೆಯಾದರೆ ನಾವು ಕೂಡಾ ನಮ್ಮ ಕುಟುಂಬದವರೊಂದಿಗೆ ತಂದೆ ತಾಯಿ ಬಂಧು ಬಳಗ ನಮ್ಮೂರಿನಲ್ಲಿ ಇಲ್ಲವೇ ಅಕ್ಕ ಪಕ್ಕದಲ್ಲಿಯೇ ಇದ್ದುಕೊಂಡು ನೆಮ್ಮದಿಯಿಂದ ಕೆಲಸ ಮಾಡಬಹುದು ಎಂಬ ದೊಡ್ಡ ಕನಸನ್ನು ನಾಡಿನ ಬಹುತೇಕ ಶಿಕ್ಷಕರು ಇಟ್ಟುಕೊಂಡಿದ್ದಾರೆ.
ಆದರೆ ಇವರ ಕನಸು ಆಸೆಗಳು ಅದ್ಯೋಕೋ ಈಡೇರುತ್ತಿಲ್ಲ ಶಿಕ್ಷಕರ ಧ್ವನಿಯಾಗಿರುವ ದೊಡ್ಡ ದೊಡ್ಡ ಬಲಾಡ್ಯ ಶಿಕ್ಷಕರ ಸಂಘಟನೆಯ ನಾಯಕರು ವರ್ಗಾವಣೆ ವಿಚಾರದಲ್ಲಿ ಕೇವಲ ವಾಟ್ಸ್ ಆಪ್ ಸಂದೇಶಕ್ಕೆ ಮೀಸಲಾದಂತೆ ಕಾಣುತ್ತಿದ್ದು ಕಳೆದ ಹಲವು ದಿನಗಳಿಂದ ವರ್ಗಾವಣೆ ವಿಚಾರ ಕುರಿತಂತೆ ಭರವಸೆಯನ್ನು ಹೇಳುತ್ತಿದ್ದು ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ ಆವಾಗ ಇವಾಗ, ಬೆಳಿಗ್ಗೆ, ನಾಳೆ ಸಂಜೆ, ಇವತ್ತು, ಬಂದೇ ಬಿಡುತ್ತದೆ, ಸಧ್ಯ ಪೈಲ್ ಹೋಗಿದೆ, ನಾವು ಕೂಡಾ ಭೇಟಿಯಾಗಿ ಬಂದಿದ್ದೇವೆ ಇವಾಗ ಬರುತ್ತದೆ, ನೋಡಿ ಇಂತಹ ಭರವಸೆಯ ಸಂದೇಶಗಳನ್ನು ನೋಡಿ ಕೇಳಿ ಕೇಳಿ ಫಾರ್ ವರ್ಡ್ ಮಾಡಿ ಮಾಡಿ ಕಾದು ಕಾದು ನಮ್ಮ ಶಿಕ್ಷಕರು ಬೇಸತ್ತಿದ್ದಾರೆ.
ಸಧ್ಯ ಇಂತಹ ಭರವಸೆಯ ಸಂದೇಶಗಳನ್ನು ಹಾಕ ಬೇಡಿ ಎಂಬ ಖಡಕ್ ಸೂಚನೆಯನ್ನು ನೀಡಿದ್ದಾರೆ ಆದ್ರೂ ಕೂಡಾ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡು ತ್ತಿರುವ ಸಂಘಟನೆಯ ನಾಯಕರು ಯಾಕೇ ಹೀಗೆ ಮಾಡತಾಇದ್ದಾರೆ ಶಿಕ್ಷಕರೊಂದಿಗೆ ಯಾಕೇ ಚಲ್ಲಾಟ ವಾಡುತ್ತಿದ್ದಾರೆ ಎಂಬ ಮಾತು ಅರ್ಥವಾಗುತ್ತಿಲ್ಲ ಏನಾದರೂ ಮಾಡಿ ನಮಗೆ ವರ್ಗಾವಣೆ ಭಾಗ್ಯ ಯಾವಾಗ ಎಂದು ಕೇಳಿ ಕೇಳಿ ಸಧ್ಯ ಬೇಸತ್ತಿದ್ದು ಸಿಡಿದೆಳುತ್ತಿದ್ದಾರೆ ಇದಕ್ಕೂ ಮುನ್ನ ಇನ್ನಾದರೂ ಇವರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯಕರು ಗಂಭೀರವಾಗಿ ತಗೆದುಕೊಂಡು ವರ್ಗಾ ವಣೆಯನ್ನು ಆರಂಭ ಮಾಡಬೇಕು ಇಲ್ಲವಾದರೆ ಅಲ್ಪ ಸ್ವಲ್ಪು ಪ್ರಮಾಣದಲ್ಲಿ ನಿಮ್ಮ ಮೇಲೆ ಇಟ್ಟು ಕೊಂಡಿರುವ ನಂಬಿಕೆ ಭರವಸೆಯನ್ನು ಕಳೆದುಕೊ ಳ್ಳುತ್ತಾರೆ ಅದಕ್ಕೂ ಮುನ್ನ ನಿವೇ ಈ ಒಂದು ದೊಡ್ಡ ಕೆಲಸವನ್ನು ಮಾಡಿ ಅದನ್ನು ಉಳಿಸಿಕೊಳ್ಳಿ.
ಇನ್ನೂ ಪ್ರಮುಖವಾಗಿ ವರ್ಗಾವಣೆ ವಿಚಾರ ಏನೋ ದೊಡ್ಡ ಸಮಸ್ಯೆಯಲ್ಲ ಸಂಘಟನೆಯ ನಾಯಕರು ಮನಸ್ಸು ಮಾಡಿದರೆ ಒಂದೇ ಒಂದು ದಿನದಲ್ಲಿ ಆರಂಭ ಮಾಡಬಹುದು ಆದರೆ ಅದ್ಯಾಕೋ ಏನೋ ಇದರಲ್ಲಿ ಏನೋ ಒಂದು ದೊಡ್ಡ ಮಿಲಾಪಿ ಕುಸ್ತಿ ಕಂಡು ಬರುತ್ತಿದೆ
ನಮ್ಮ ಸಮಸ್ಯೆ ಗಳ ಧ್ವನಿಯಾಗಿ ಹೋರಾಟಕ್ಕೆ ಅಂತಾ ಒಂದು ರಾಜ್ಯ ಮಟ್ಟದ ಸಂಘಟನೆ ಅದಕ್ಕೆ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಸದಸ್ಯರು ಇವರೆಲ್ಲರೂ ಸೇರಿ ಶಿಕ್ಷಣ ಸಚಿವರ ಮುಖ್ಯಮಂತ್ರಿ ಬಳಿ ಹೋಗಿ ಮಾತನಾಡಬಹುದು ಆದರೆ ಸಾಮಾನ್ಯ ಶಿಕ್ಷಕ ಹೋಗಲು ಸಾಧ್ಯವಿಲ್ಲ