ಮೂರು ವರ್ಷಗಳಿಂದ ಒಂದೇ ಕಡೆ ಠಿಕಾಣೆ ಹೂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ – ಕೇಂದ್ರ ಚುನಾವಣೆ ಆಯೋಗದಿಂದ ರಾಜ್ಯ ಚುನಾವಣೆಯ ಆಯೋಗಕ್ಕೆ ಪತ್ರ ರಾಜ್ಯದಲ್ಲಿ ಆರಂಭಗೊಂಡವು ವಿಧಾನ ಸಭೆಯ ಚುನಾವಣೆಯ ಪ್ರಕ್ರಿಯೆಗಳು

Suddi Sante Desk
ಮೂರು ವರ್ಷಗಳಿಂದ ಒಂದೇ ಕಡೆ ಠಿಕಾಣೆ ಹೂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ – ಕೇಂದ್ರ ಚುನಾವಣೆ ಆಯೋಗದಿಂದ ರಾಜ್ಯ ಚುನಾವಣೆಯ ಆಯೋಗಕ್ಕೆ ಪತ್ರ ರಾಜ್ಯದಲ್ಲಿ ಆರಂಭಗೊಂಡವು ವಿಧಾನ ಸಭೆಯ ಚುನಾವಣೆಯ ಪ್ರಕ್ರಿಯೆಗಳು

ಬೆಂಗಳೂರು

ಇನ್ನೇನು ಎರಡು ಮೂರು ತಿಂಗಳು ಕಳೆದರೆ ಸಾಕು ರಾಜ್ಯದಲ್ಲಿ ವಿಧಾನಸಭೆ ಸಾಮೂಹಿಕ ಚುನಾವಣೆಗಳು ಬರಲಿದ್ದು ಹೀಗಾಗಿ ಈಗಲೇ ಕೆಲ ಸಿದ್ದತೆಗಳು ಆರಂಭಗೊಂಡಿದ್ದು ಇದರ ನಡುವೆ ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ ಒಂದೇ ಕಡೆ ಯಲ್ಲಿ ಠಿಕಾಣೆ ಹೂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣೆ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದೆ.

ಹೌದು ರಾಜ್ಯ ವಿಧಾನಸಭೆ ಚುನಾವಣೆಗೆ ದಿನ ಗಳು ಹತ್ತಿರವಾಗುತ್ತಿರುವಂತೆ ಚುನಾವಣೆ ಯ ಪ್ರಕ್ರಿಯೆಗಳನ್ನು ಚುರುಕುಗೊಳಿಸಿರುವ ಕೇಂದ್ರ ಚುನಾವಣಾ ಆಯೋಗವು ಅಧಿಕಾರಿಗಳ ವರ್ಗಾ ವಣೆ ನೀತಿಯನ್ನು ಹೊರಡಿಸಿದೆ.ಸ್ವಂತ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಮೂರು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ವರ್ಗಾಯಿಸುವಂತೆ

.

ಕರ್ನಾಟಕ ವಿಧಾನಸಭೆಯ ಅವಧಿ 2023ರ ಮೇ 24 ರಂದು ಮುಕ್ತಾಯಗೊಳ್ಳಲಿದೆ.ಅದರೊಳಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ನೀತಿಯನ್ನು ಹೊರಡಿಸಿದ್ದು ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆಯಲಾಗಿದೆ.

ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದ ನೀತಿಯನ್ನು ಅನುಷ್ಠಾನಗೊಳಿಸಿ ರುವ ಬಗ್ಗೆ 2023ರ ಜನವರಿ 31ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿರುವ ಆಯೋಗ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಾಕೀತು ಮಾಡಿದೆ.

ಒಂದು ವೇಳೆ ಯಾವುದೇ ಅಧಿಕಾರಿಗಳು ತವರು ಜಿಲ್ಲೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದು ಆಯೋಗದ ಗಮನಕ್ಕೆ ಬಂದರೆ ಅಂಥವರ ಮೇಲೆ ತತ್ ಕಣವೇ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.ನೇರವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ವಲಯ, ಜಿಲ್ಲಾ ಮತ್ತು ಸ್ಥಳೀಯ ಹಂತದ ಕಂದಾಯ ಅಧಿಕಾರಿ ಗಳು ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಈ ವರ್ಗಾವಣೆ ನೀತಿ ಅನ್ವಯವಾಗಲಿದೆ.

ಚುನಾವಣ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಥವಾ ಮತದಾರರ ಪಟ್ಟಿಯ ಪರಿಷ್ಕರಣೆ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳ ವರ್ಗಾವ ಣೆಗೆ ಆದೇಶಗಳನ್ನು ಹೊರಡಿಸಿದ್ದರೆ ಅಂತಹ ಆದೇಶಗಳನ್ನು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಮುಖ್ಯ ಚುನಾವಣಾಧಿಕಾ ರಿಯ ಸಮ್ಮತಿ ಬಳಿಕ ಕಾರ್ಯಗತಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ವರ್ಗಾವಣೆಗೊ ಳಿಸುವ ವಿಶೇಷ ಸನ್ನಿವೇಶ ಎದುರಾದಾಗ ಕೇಂದ್ರ ಚುನಾವಣೆ ಆಯೋಗದ ಪೂರ್ವಾನುಮತಿ ಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, 3 ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿದ್ದರೆ,ಇಲ್ಲವೇ ನಾಲ್ಕು ವರ್ಷ ಪೂರೈಸಿದ್ದರೆ ಅಂತಹ ಅಧಿಕಾರಿಗ ಳನ್ನು 2023ರ ಮೇ 31ಕ್ಕೆ ಕೊನೆಗೊಳ್ಳುವಂತೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು.ಅಧಿಕಾರಿ ಗಳನ್ನು ಅವರ ಸ್ವಂತ ಜಿಲ್ಲೆಗೆ ನಿಯೋಜಿಸಬಾ ರದು. ಜಿಲ್ಲಾ ಹಂತದ ಅಧಿಕಾರಿಗಳಾದ ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಉಪ ಡಿಇಒ, ರಿಟರ್ನಿಂಗ್‌ ಆಫೀಸರ್‌ (ಆರ್‌ಒ) ಅಸಿಸ್ಟೆಂಟ್‌ ರಿಟರ್ನಿಂಗ್‌ ಆಫಿಸರ್‌ (ಎಆರ್‌ಒ), ಚುನಾವಣ ಕೆಲಸಕ್ಕೆ ನಿಯೋಜನೆಗೊಂಡ ನೋಡಲ್‌ ಅಧಿಕಾರಿಗಳು,ಇವರಲ್ಲದೇ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌,ಉಪ ವಿಭಾಗ ಮ್ಯಾಜಿಸ್ಟ್ರೇಟ್‌, ಉಪವಿಭಾಗಾಧಿಕಾರಿ,ತಹಶೀಲ್ದಾರ್‌,ಬಿಡಿಒ ಸೇರಿ ತತ್ಸಮಾನ ದರ್ಜೆಯ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಈ ನೀತಿ ಅನ್ವಯವಾಗಲಿದೆ.

ಪೊಲೀಸ್‌ ಇಲಾಖೆಯ ವಲಯ ಐಜಿ, ಡಿಐಜಿ, ರಾಜ್ಯ ಸಶಸ್ತ್ರ ಪೊಲೀಸ್‌ ಕಮಾಂಡೆಂಟ್‌, ಎಸ್‌ಎಸ್‌ಪಿ, ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್‌ಐ, ಎಸ್‌ಐ ಅಧಿಕಾರಿಗಳಿಗೂ ವರ್ಗಾವಣೆ ನೀತಿ ಅನ್ವಯವಾಗುತ್ತದೆ.

ನೇರವಾಗಿ ಚುನಾವಣ ಕೆಲಸಕ್ಕೆ ಸಂಬಂಧ ಪಡದ ಡಾಕ್ಟರ್‌,ಎಂಜಿನಿಯರ್‌,ಪ್ರಿನ್ಸಿಪಾಲ್‌,ಶಿಕ್ಷಕರಿಗೆ ಈ ನೀತಿ ಅನ್ವಯವಾಗುವುದಿಲ್ಲ.ಆದರೆ ಈ ಅಧಿಕಾರಿಗಳ ವಿರುದ್ಧ ದೂರು,ಆರೋಪಗಳು ಕೇಳಿ ಬಂದಲ್ಲಿ ತನಿಖೆ ನಡೆಸಿ ವರ್ಗಾವಣೆಗೊಳಿ ಸುವುದರ ಜತೆಗೆ ಇಲಾಖಾ ವಿಚಾರಣೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಶಿಫಾರಸು ಮಾಡಬೇಕು.

ಯಾವುದೇ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದರೆ ಅಂಥವರನ್ನು ಚುನಾವಣ ಕರ್ತವ್ಯಕ್ಕೆ ನಿಯೋಜಿ ಸದಂತೆ ತಾಕೀತು ಮಾಡಲಾಗಿದೆ.ನಿವೃತ್ತಿಗೆ 6 ತಿಂಗಳು ಬಾಕಿ ಇದ್ದರೆ ಅಂತಹವರನ್ನು ಮೂರು ವರ್ಷದ ಸೇವೆಯ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.