ಬೆಂಗಳೂರು –
ಶಾಲೆಗಳ ಪುನಾರಂಭ ಯಾವಾಗ,ಶಿಕ್ಷಕರ ವರ್ಗಾ ವಣೆ ವಿಚಾರ,ಹಾಗೇ SSLC ಪರೀಕ್ಷೆ ಕುರಿತು ನಾಳೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ಕರೆದಿದ್ದಾರೆ. ಹೌದು ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ ಪ್ರಾರಂ ಭ ಮಾಡಬೇಕು ಈ ಒಂದು ಪುನರಾರಂಭ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಇಲಾಖೆ ಯ ಅಧಿಕಾರಿಗಳೊಂದಿಗೆ ನಾಳೆ ಅಂದರೆ ಸೋಮ ವಾರ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿ ದ್ದಾರೆ ಎನ್ನಲಾಗಿದೆ.

ಹೌದು ಜೂನ್ 1 ರಿಂದ ಶಾಲೆಗಳು ಪುನರಾರಂಭ ಆಗಲಿದೆಯೆಂದು ಈ ಹಿಂದೆ ಸಚಿವ ಸುರೇಶ್ ಕುಮಾರ್ ಹೇಳಿದ್ದು ಇನ್ನೂ ಒಂದು ಕಡೆ ಇನ್ನೂ ಶಿಕ್ಷಕರಿಗೆ ವ್ಯಾಕ್ಸಿನೇಷನ್ ಆಗಿಲ್ಲ ಜೊತೆಗೆ ಡೆಲ್ಟಾ ಪ್ಲಸ್ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಯಲ್ಲಿ ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ತಜ್ಞರ ಸಲಹೆ ಪಡೆದ ಬಳಿಕವೇ ಭೌತಿಕ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾ ಗಿ ಯಾವ ಸ್ವರೂಪದಲ್ಲಿ ಶಾಲೆ ಆರಂಭಿಸಬೇಕೆಂಬು ದರ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿ ದ್ದಾರೆ.

ಇನ್ನೂ ನಾಡಿನ ಶಿಕ್ಷಕರು ನಿರೀಕ್ಷೆ ಮಾಡುತ್ತಿರುವ ಶಿಕ್ಷಕರ ವರ್ಗಾವಣೆ ಕುರಿತು ಇದರೊಂದಿಗೆ ಪ್ರಮು ಖವಾಗಿ SSLC ಪರೀಕ್ಷೆ ಕುರಿತು ನಾಳೆಯೇ ಶಿಕ್ಷಣ ಸಚಿವರು ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದಾರೆ. ಒಂದು ಕಡೆ ಶಾಲೆಗಳ ಆರಂಭದ ಚಿತ್ರಣ ಮತ್ತೊಂ ದು ಕಡೆಗೆ ಶಿಕ್ಷಕರ ವರ್ಗಾವಣೆ ಇದರೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂತಿಮ ದಿನಾಂಕ ಹೀಗಾ ಗಿ ಪ್ರಮುಖವಾದ ಮೂರು ವಿಷಯಗಳ ಕುರಿತು ನಾಳೆ ಶಿಕ್ಷಣ ಸಚಿವರ ಸಭೆ ಮಹತ್ವ ವನ್ನು ಪಡೆದು ಕೊಂಡಿದ್ದು ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳೊಂದಿಗೆ ನಡೆಸುವ ಸಭೆ ಯಲ್ಲಿ ಶಾಲೆಗಳನ್ನು ಪ್ರಾರಂಭಿಸುವುದರ ಕುರಿತು ಶಿಕ್ಷಕರ ವರ್ಗಾವಣೆ, ಪರೀಕ್ಷಾ ಭವಿಷ್ಯ ದ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದ್ದು ಏನಾಗಲಿದೆ ಎಂಬ ಕುರಿತು ಕುತೂಹಲ ಕೆರಳಿಸಿತು