ಕೊಪ್ಪಳ –
ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಹಗುರವಾಗಿ ಮಾತನಾಡಿದ ಕನಕಗಿರಿ ಸಿಆರ್ ಪಿ ಸಂಗಮೇಶ್ ಹಿರೇಮಠ್ ವಿರುದ್ದ ಶಿಕ್ಷಕರು ಸಿಡಿದೆದ್ದಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಇವರು ಮಾತನಾಡಿದ ಮಾತುಗಳನ್ನು ಖಂಡಿಸಿರುವ ನಾಡಿನ ಶಿಕ್ಷಕರು ನಿನ್ನೇಯಿಂದ ಇವರ ವಿರುದ್ದ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ವರ್ಗಾವಣೆಯ ವಿಚಾರದಲ್ಲಿ ಇವರು ಮಾತನಾಡಿರುವ ಮಾತುಗಳಿಂದ ಸಿಡಿದೆದ್ದಿದ್ದು ಅದರಲ್ಲೂ ಬೇರೆ ಜಿಲ್ಲೆಯಿಂದ ಬಂದ ಶಿಕ್ಷಕರ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದನ್ನು ಖಂಡಿಸಿದ್ದಾರೆ.ಅಲ್ಲದೇ ಇವರ ಮೇಲೆ ಸೂಕ್ತವಾದ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಕನಕಗಿರಿಯಲ್ಲಿ ಸಿಡಿದೆದ್ದ ಶಿಕ್ಷಕರು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಮನವಿ ನೀಡಿ ಸೂಕ್ತ ವಾದ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯವನ್ನು ಮಾಡಿದರು.