KAS ಪರೀಕ್ಷೆ ಪಾಸಾದ ಕೂಲಿ ಕಾರ್ಮಿಕ – ರೈಲು ನಿಲ್ದಾಣದಲ್ಲಿ ಕೂಲಿ ಮಾಡುತ್ತಾ ಶೇ 82 ರಷ್ಟು ಅಂಕ ಪಡೆದು ಎಲ್ಲರಿಗೂ ಸ್ಪೂರ್ತಿಯಾದ ಶ್ರೀನಾಥ

Suddi Sante Desk
KAS ಪರೀಕ್ಷೆ ಪಾಸಾದ ಕೂಲಿ ಕಾರ್ಮಿಕ – ರೈಲು ನಿಲ್ದಾಣದಲ್ಲಿ ಕೂಲಿ ಮಾಡುತ್ತಾ ಶೇ 82 ರಷ್ಟು ಅಂಕ ಪಡೆದು ಎಲ್ಲರಿಗೂ ಸ್ಪೂರ್ತಿಯಾದ ಶ್ರೀನಾಥ

ಕೊಚ್ಚಿ

ಮನಸ್ಸು ಮಾಡಿದರೆ ಏನೇಲ್ಲಾ ಮಾಡಬಹುದು ಸಾಧನೆ ಮಾಡುವ ಛಲವೊಂದು ಇದ್ದರೆ ಏನೇಲ್ಲಾ ಸಾಧನೆ ಮಾಡಬಹುದು ಎಂಬೊದಕ್ಕೆ ಈ ಕೂಲಿ ಕಾರ್ಮಿಕನೇ ಸಾಕ್ಷಿ.ಹೌದು ಹೆಸರು ಶ್ರೀನಾಥ ಕೊಚ್ಚಿ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕಾರ್ಮಿಕ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲ ಆದರೆ ಕಿತ್ತು ತಿನ್ನುವ ಬಡತನ ಪರಸ್ಥಿತಿ ಹಗಲು ರಾತ್ರಿ ಎನ್ನದೇ ರೈಲ್ವೆ ನಿಲ್ದಾಣ ದಲ್ಲಿ ವಾಸ್ತವ್ಯ ಬದುಕಿಗೆ ಕೂಲಿ ಕಾರ್ಮಿಕ ಜೀವನ ನಡೆಸುತ್ತಿದ್ದ ಶ್ರೀನಾಥ ಕಷ್ಟ ಪಟ್ಟು ನಿರಂತರ ಅಧ್ಯಯನ ಓದು ಛಲ ಬಿಡದ ಸಾಧನೆ ಇವೆಲ್ಲವು ಗಳ ಪರಿಣಾಮವಾಗಿ ಸಧ್ಯ ಕೆಎಎಸ್ ಪರೀಕ್ಷೆ ಯನ್ನು ಪಾಸ್ ಮಾಡಿದ್ದಾನೆ.

ಹೌದು ರೈಲ್ವೆ ನಿಲ್ದಾಣದಲ್ಲಿಯೇ ಇದ್ದುಕೊಂಡು ಅಲ್ಲಿ ಸಿಗುವ ಸೌಲಭ್ಯಗಳಲ್ಲಿಯೇ ಇದ್ದುಕೊಂಡೇ ಕಷ್ಟ ಇದೆ ಎಂದುಕೊಂಡು ಛಲದಿಂದ ಸಾಧನೆ ಯನ್ನು ಮಾಡಿದ್ದಾರೆ.ಕೇರಳ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುವ ಈ ವ್ಯಕ್ತಿಯೊಬ್ಬರು ರೈಲು ನಿಲ್ದಾಣದಲ್ಲಿ ಲಭ್ಯವಿರುವ ಉಚಿತ ವೈಫೈ ಸೌಲಭ್ಯ ಬಳಸಿಕೊಂಡು ಅಧ್ಯಯನ ನಡೆಸಿ, ಪ್ರತಿಷ್ಠಿತ ಕೇರಳ ಸಾರ್ವಜನಿಕ ಸೇವಾ ಪರೀಕ್ಷೆ (ಕೆಎಎಸ್‌)ಯಲ್ಲಿ ಉತ್ತೀರ್ಣರಾದ ಸ್ಫೂರ್ತಿ ದಾಯಕವಾಗಿ ನಿಜ ಜೀವನದ ಕಥೆಯ ರೂಪ ದಲ್ಲಿ ಈಗ ನಮ್ಮ ಮುಂದೆ ಇದ್ದಾರೆ.

ಮುನ್ನಾರ್‌ ಮೂಲದ ಶ್ರೀನಾಥ್‌ ಕೆ. ಕೊಚ್ಚಿ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ ಕುಟುಂಬಕ್ಕೆ ಒಳ್ಳೆಯ ಭವಿಷ್ಯ ಕಲ್ಪಿಸಬೇಕು ಹಾಗೂ ತನ್ನ ಜೀವನ ಉತ್ತಮಪಡಿಸಿಕೊಳ್ಳಬೇಕು ಎಂಬ ಅಭಿಲಾಷೆಯಲ್ಲಿ ಸರ್ಕಾರಿ ಹುದ್ದೆ ಪಡೆ ಯುವ ನಿಟ್ಟಿನಲ್ಲಿ ಪರೀಕ್ಷೆಗಳಿಗೆ ತಯಾರಿ ಆರಂಭಿ ಸಿದರು. ಕೂಲಿ ಕೆಲಸದಲ್ಲಿ ಮುಳುಗಿದ ಅವರಿಗೆ ಓದಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ.

2016ರಲ್ಲಿ ಕೊಚ್ಚಿ ರೈಲು ನಿಲ್ದಾಣದಲ್ಲಿ ರೈಲ್‌ ಟೆಲ್‌ ಉಚಿತ ವೈಫೈ ಸೌಲಭ್ಯ ಪರಿಚಯಿಸಿತು. ಶ್ರೀನಾಥ್‌ ಅವರು ತಾವು ಕೂಡಿಟ್ಟಿದ್ದ ಹಣದಲ್ಲಿ ಮೊಬೈಲ್‌, ಸಿಮ್‌ ಮತ್ತು ಮೆಮೊರಿ ಕಾರ್ಡ್‌ ಖರೀದಿಸಿದರು. ವೈಫೈ ಬಳಸಿಕೊಂಡು ಸರ್ಕಾರಿ ಪರೀಕ್ಷೆಗಳಿಗೆ ಸಂಬಂಧಿಸಿದ ಆಡಿಯೋ ಬುಕ್‌ ಗಳನ್ನು ಡೌನ್‌ಲೋಡ್‌ ಮಾಡಿಕೊಂಡರು.ಕೆಲಸ ಮಾಡುವ ಸಮಯದಲ್ಲೇ ಇಯರ್‌ ಫೋನ್‌ ಹಾಕಿಕೊಂಡು ಆಡಿಯೋ ಪ್ರಶ್ನೆ-ಉತ್ತರಗಳು ಮತ್ತು ಇತರೆ ಅಗತ್ಯ ಮಾಹಿತಿಗಳನ್ನು ಆಲಿಸಿ, ನೆನಪಿನಲ್ಲಿ ಇಟ್ಟುಕೊಳ್ಳಲು ಆರಂಭಿಸಿದರು.

ವರ್ಷಗಳ ಪರಿಶ್ರಮದ ನಂತರ ವಿಲೇಜ್‌ ಅಸಿಸ್ಟೆಂಟ್‌ ಹುದ್ದೆಗಾಗಿ ಕೇರಳ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆಗೆ ಹಾಜರಾಗಿ, ಶೇ.82ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೇರಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.