7ನೇ ವೇತನ ಆಯೋಗ ರಚನೆ ಏನೋ ಆಯಿತು ಇದರಿಂದಾಗಿ ಯಾರಿಗೆ ಎಷ್ಟು ಅನುಕೂಲವಾಗಲಿದೆ ನೌಕರರ ಪ್ರಮುಖ ಬೇಡಿಕೆಗಳೇನು – ಇದು 7ನೇ ವೇತನ ಆಯೋಗದ ಈ ಕ್ಷಣದ ಅಪ್ಡೇಟ್ ನ್ಯೂಸ್

Suddi Sante Desk
7ನೇ ವೇತನ ಆಯೋಗ ರಚನೆ ಏನೋ ಆಯಿತು ಇದರಿಂದಾಗಿ ಯಾರಿಗೆ ಎಷ್ಟು ಅನುಕೂಲವಾಗಲಿದೆ ನೌಕರರ ಪ್ರಮುಖ ಬೇಡಿಕೆಗಳೇನು – ಇದು 7ನೇ ವೇತನ ಆಯೋಗದ ಈ ಕ್ಷಣದ ಅಪ್ಡೇಟ್ ನ್ಯೂಸ್

ಬೆಂಗಳೂರು

ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.ಈ ಕುರಿತಂತೆ ರಾಜ್ಯ ಸರ್ಕಾರ ಅಧ್ಯಕ್ಷರೊಂದಿಗೆ ಸಮಿತಿಗೆ ಮೂವರು ಸದಸ್ಯರನ್ನು ಇವರಿಗೆ ಆಡಳಿತಾತ್ಮಕವಾಗಿ ಸಹಾಯಕ್ಕಾಗಿ 44 ಅಧಿಕಾರಿಗಳನ್ನು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು ಇದರ ಬೆನ್ನಲ್ಲೇ ಸಮಿತಿಗೆ ಕಚೇರಿಯನ್ನು ನೀಡಿ ಆದೇಶವನ್ನು ಕೂಡಾ ಮಾಡಲಾಗಿದ್ದು ಸಧ್ಯ ಸಮಿತಿಯವರು ಕೂಡಾ ಒಂದೊಂದು ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಇದರಿಂದಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಮುಖದಲ್ಲಿ ಮಂದಹಾಸ ಮೂಡಿದೆ.

ಇದು ಒಂದು ವಿಚಾರವಾದರೆ ಇನ್ನೂ ಪ್ರಮುಖ ವಾಗಿ ಈ ಒಂದು ಆಯೋಗಕ್ಕೆ ವರದಿ ನೀಡಲು ರಾಜ್ಯ ಸರ್ಕಾರ ಕಾಲಮೀತಿಯನ್ನು ನೀಡಿದ್ದು ಇದರ ನಡುವೆ ಸಧ್ಯ ಕೆಲವೇ ದಿನಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ತಾಲ್ಲೂಕು ಜಿಲ್ಲಾ ಮತ್ತು ಸಾಮೂಹಿಕ ವಿಧಾನಸಭಾ ಚುನಾವಣೆಗಳು ಹೀಗೆ ಸಾಲು ಸಾಲು ಚುನಾವಣೆ ಗಳು ಬರಲಿದ್ದು ಹೀಗಾಗಿ ಇದನ್ನು ಗಮನದಲ್ಲಿಟ್ಟು ಕೊಂಡಿರುವ ಸಮಿತಿಯು ವರದಿಯನ್ನು ಶೀಘ್ರ ದಲ್ಲೇ ಮಾಡಲು ಪ್ಲಾನ್ ಮಾಡಿಕೊಂಡಿದೆ.ಈ ಒಂದು ವರದಿ ಬಂದ ಕೂಡಲೇ ರಾಜ್ಯ ಸರ್ಕಾರ ಶೀಘ್ರದಲ್ಲೇ ಜಾರಿಗೆ ತರುವ ಕುರಿತಂತೆ ಅಧಿಕೃತ ವಾದ ಆದೇಶವನ್ನು ಮಾಡಲಿದೆ.

ಇನ್ನೂ ಈ ಒಂದು ವೇತನ ಆಯೋಗದಿಂದ ರಾಜ್ಯ ಸರ್ಕಾರ ವರದಿ ಪಡೆದು ವೇತನ ಪರಿಷ್ಕರಣೆ ಮಾಡುವುದರಿಂದ ಸುಮಾರು 5.20 ಲಕ್ಷ ಸರಕಾರಿ ನೌಕರರು, 3.5 ಲಕ್ಷದಷ್ಟು ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ನೌಕರ ವರ್ಗ ಹಾಗೂ 4.5 ಲಕ್ಷ ನಿವೃತ್ತ ಸರಕಾರಿ ನೌಕರರಿಗೆ ಅನುಕೂಲವಾಗಲಿದೆ.ಇದರೊಂದಿಗೆ ಈ ಒಂದು ವೇತನ ಆಯೋಗದ ಸಮಿತಿಯಲ್ಲಿ ಮೂಲ ವೇತನದೊಂದಿಗೆ ತುಟ್ಟಿ ಭತ್ಯೆ (ಡಿಎ) ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ನೌಕರರ ಸಂಘದ ಬೇಡಿಕೆಯಾಗಿದೆ.

ಈ ಮೂಲಕ ಮೂಲ ವೇತನದ ಶೇ. 40ರಷ್ಟು ವೇತನ ಹೆಚ್ಚಳವನ್ನು ಸರಕಾರಿ ನೌಕರರು ನಿರೀಕ್ಷಿ ಸುತ್ತಿದ್ದಾರೆ.ಜೊತೆಗೆ 2023ರ ಏಪ್ರಿಲ್ 1ರಿಂದ ಆರ್ಥಿಕ ಅನುಕೂಲ ಸಿಗಬೇಕು ಎಂದು ಆಗ್ರಹಿ ಸುತ್ತಿದ್ದಾರೆ.ಪ್ರತಿ 5 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡಲಾಗುತ್ತದೆ. ಬೆಲೆ ಏರಿಕೆ, ಕೇಂದ್ರ ಮತ್ತು ಬೇರೆ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ ಮತ್ತಿತರ ಅಂಶಗಳನ್ನು ಪರಿಶೀಲಿಸಿ ಆಯೋಗವು ವೇತನ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ.

ಆದರೆ, ಹಿಂದೆಲ್ಲಾ ಆರೇಳು ವರ್ಷಗಳು ಕಳೆದರೂ ವೇತನ ಆಯೋಗಗಳು ರಚನೆಯಾಗುತ್ತಿರಲಿಲ್ಲ. ಆದರೆ, ಈ ಬಾರಿ 5 ವರ್ಷಗಳ ಮಿತಿಯೊಳಗೇ ಆಯೋಗ ರಚನೆಯಾಗುತ್ತಿದೆ.ಈ ಹಿಂದೆ 2018ರ ವಿಧಾನಸಭೆ ಚುನಾವಣೆಗೆ ಮುನ್ನ ಅಂದಿನ ಸಿಎಂ ಸಿದ್ದರಾಮಯ್ಯ ವೇತನ ಆಯೋಗದ ವರದಿ ಪಡೆದು,ಅನುಷ್ಠಾನ ಆದೇಶ ಹೊರಡಿಸಿದ್ದರು. ಈಗ ಹಾಲಿ ಸಿಎಂ ಬೊಮ್ಮಾಯಿ ಕೂಡ ನಿರೀಕ್ಷಿತ ಅವಧಿಯೊಳಗೆ ವೇತನ ಏರಿಕೆಯನ್ನು ಅನುಷ್ಠಾನ ಗೊಳಿಸಲು ಹೊರಟಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಒಟ್ಟಾರೆ ಶೀಘ್ರದಲ್ಲೇ ಈ ಒಂದು ಸಮಿತಿಯು ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿ ಜಾರಿಗ ಬಂದು ಇದರಿಂದಾಗಿ ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ಲಾಭವಾಗಲಿ ಎಂಬೊದು ಸುದ್ದಿ ಸಂತೆಯ ಆಶಯವಾಗಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು….

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.