ಡಿಸೆಂಬರ್ 19ರ ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಇರುವ ಗೊಂದಲಗಳಿಗೆ ಸ್ಪಷ್ಟನೆ ಅವರು ಹೀಗಂತಾರೆ, ಇವ್ರು ಹಂಗಂತಾರೆ, ತಲೆ ಕೆಡಿಸಿಕೊಳ್ಳದಿರಿ ಬನ್ನಿ ಪಾಲ್ಗೊಳ್ಳಿ ಶಕ್ತಿ ತುಂಬಿ

Suddi Sante Desk
ಡಿಸೆಂಬರ್ 19ರ ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಇರುವ ಗೊಂದಲಗಳಿಗೆ ಸ್ಪಷ್ಟನೆ ಅವರು ಹೀಗಂತಾರೆ, ಇವ್ರು ಹಂಗಂತಾರೆ, ತಲೆ ಕೆಡಿಸಿಕೊಳ್ಳದಿರಿ ಬನ್ನಿ ಪಾಲ್ಗೊಳ್ಳಿ ಶಕ್ತಿ ತುಂಬಿ

ಬೆಂಗಳೂರು

ಡಿಸೆಂಬರ್ 19ರ ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಇರುವ ಗೊಂದಲಗಳಿಗೆ KSGNPSEA BGK ಟೀಮ್ ನಿಂದ ಸ್ಪಷ್ಟನೆಯನ್ನು ರಾಜ್ಯದ NPS ನೌಕರರಿಗೆ ನೀಡಲಾಗಿದೆ ಹೌದು ಅವರು ಹೀಗಂತಾರೆ ಇವ್ರು ಹಂಗಂತಾರೆ, ತಲೆ ಕೆಡಿಸಿ ಕೊಳ್ಳದಿರಿ ಬನ್ನಿ ಪಾಲ್ಗೊಳ್ಳಿ ಶಕ್ತಿ ತುಂಬಿ ಎಂದು ಕರೆ ನೀಡಲಾಗಿದೆ

ಅನಿರ್ದಿಷ್ಟಾವಧಿ ಚಳುವಳಿಯಿದು ಹೌದು ಆತ್ಮೀಯರೇ ಡಿಸೆಂಬರ್ 19 ರಂದು ಬೆಂಗಳೂ ರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಮಾಡು ಇಲ್ಲವೇ ಮಡಿ ಹೋರಾಟ ಇದೊಂದು ಅನಿರ್ದಿಷ್ಟ ಅವಧಿಯ ಹೋರಾಟವಾಗಿದೆ. ಅಂದರೆ ಒಂದೋ ಸರ್ಕಾರ ಎನ್‌ಪಿಎಸ್ ರದ್ದು ಪಡಿಸಿದ ಬಗ್ಗೆ ಘೋಷಣೆ ಮಾಡಬೇಕು ಅಥವಾ ರಾಜ್ಯಸಂಘದ ಸ್ಪಷ್ಟ ನಿರ್ದೇಶನ ಬರುವತನಕ ಈ ಹೋರಾಟ ನಿರಂತರವಾಗಿರುತ್ತದೆ. ಒಂದು ಅಥವಾ ಎರಡು ದಿನಕ್ಕೆ ಸೀಮಿತವಾದ ಹೋರಾಟವಲ್ಲ

ನಮ್ಮ ಭವಿಷ್ಯಕ್ಕಾಗಿರೋ ಹೋರಾಟಕ್ಕೆ ಯಾವ ಬಗೆಯ ರಜೆಯನ್ನಾದರೂ ಹಾಕೋಣ ರಜೆ ವ್ಯವಸ್ಥೆಯನ್ನು ಈಗಲೇ ಮಾಡಿಕೊಳ್ಳಿ CLಲ್ಲಿದ್ದರೆ CL ಇಲ್ಲದಿದ್ದರೆ EL ಹಾಕಿ EL ಹಾಕಿದ್ರಿ ಸುಮ್ಮನೆ ವೇಸ್ಟ್ ಎಂಬ ಭಾವನೆ ದಯವಿಟ್ಟು ಬೇಡ ಈಗ ಖರ್ಚು ಮಾಡುವ ನಮ್ಮ ರಜೆಗಳು ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಲಿವೆ.

ಮಹಿಳಾ ನೌಕರರೇ ಈ ಹೋರಾಟದ ಕೇಂದ್ರ ಬಿಂದು ಹೌದು ಮಹಿಳಾ ನೌಕರರು ಹೋರಾಟ ನಡೆದಷ್ಟು ದಿನ ಇರುವುದು ಹೇಗೆ ಎಂಬ ಗೊಂದಲ ನಿಮ್ಮಲ್ಲಿ ಇದ್ದೇ ಇದೆ.ಇದಕ್ಕಾಗಿ ರಾಜ್ಯ ಸಂಘದಿಂದ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ನಾವು ಕೂಡ ಸಿದ್ಧತೆಯಲ್ಲಿ ಇರಬೇಕಾಗು ತ್ತದೆ‌.

ಈಗ ಬಂದಿರುವ ಮಾಹಿತಿ ಪ್ರಕಾರ ರಾಜ್ಯದ ವಿವಿಧ ಭಾಗಗಳಿಂದ ಮಹಿಳಾ ನೌಕರರು ಕುಟುಂಬ ಸಮೇತರಾಗಿ ಪಾಲ್ಗೊಳ್ಳುತ್ತಿದ್ದಾರೆ. ನೀವು ಕೂಡ ಕುಟುಂಬ ಸಮೇತರಾಗಿ ಪಾಲ್ಗೊಳ್ಳಿ ನಿಮ್ಮ ಮನೆಯವರನ್ನು ಒಪ್ಪಿಸಿಕೊಂಡು ಕರೆ ತನ್ನಿ.ಏಕೆಂದರೆ ನಿಮ್ಮ ಉಪಸ್ಥಿತಿ ಖಚಿತವಾಗಿ ಈ ಹೋರಾಟವನ್ನು ಅಂತಿಮ ಘಟ್ಟಕ್ಕೆ ಕೊಂಡಯ್ಯು ತ್ತದೆ ಪರಾವಲಂಬಿಯಾಗದಿರೋಣ

ನೀರಿನ ಬಾಟಲ್,ಲಘು ಹಾಸಿಗೆ,ಖಡಕ್ ರೊಟ್ಟಿ, ಶೇಂಗಾ ಚಟ್ನಿ,ವಾರದವರೆಗೆ ಶೇಖರಿಸುವ ಸ್ನಾಕ್ಸ್ ಬಾಚಣಿಕೆ,ಕೊಬ್ಬರಿ ಎಣ್ಣೆ,ಪೇಸ್ಟ್, ಬ್ರಷ್,ನೇಲ್ ಕಟರ್ ಕಿರು ಕನ್ನಡಿ ಹೀಗೆ ಮುಂತಾದ ಅಗತ್ಯ ಸಾಮಾನುಗಳು ನಿಮ್ಮ ಬ್ಯಾಗಿನಲ್ಲಿರಲಿ.

ಎನ್‌ಪಿಎಸ್ ರದ್ದತಿ ನನ್ನ ಭಾಗವಹಿಸುವಿಕೆಯಿಂ ದಲೇ ಸಾಧ್ಯ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಲಿ.ಯಾರೋ ಬಂದು ಎನ್ ಪಿ ಎಸ್ ರದ್ದು ಮಾಡಲ್ಲ ನಾವು ಧರಿಸುವ “ಗಾಂಧಿ ಟೋಪಿ” ನಮ್ಮ ಶಕ್ತಿಯ ಕುರುಹು.ಸ್ವಾತಂತ್ರ್ಯ ಕಾಲದ ನಂತರ,ಅಣ್ಣ ಹಜಾರೆಯವರ ಯಶಸ್ವಿ ಚಳುವಳಿ ಗಳ ನಂತರ ಗಾಂಧಿ ಟೋಪಿಯನ್ನು ಪರೀಕ್ಷಿಸುವ ಕಾಲ ಮತ್ತೊಮ್ಮೆ ಬಂದಿದೆ.ಅಹಿಂಸಾ ಮಾರ್ಗ, ಶಾಂತಿಯುತ ಚಳುವಳಿ ನಮ್ಮ ಶಕ್ತಿಗಳು, ಸೈಲೆಂಟಾಗಿ ಸನ್ನದ್ಧರಾಗೋಣ

ಕೊನೆಯ ಮಾತು ಅವರು ಹೀಗಂತಾರೆ ಇವ್ರು ಹಂಗಂತಾರೆ,ತಲೆ ಕೆಡಿಸಿಕೊಳ್ಳದಿರಿ ನಮ್ಮೆಲ್ಲರ ಅಂತಿಮ ಉದ್ದೇಶ ಒಂದೇ ಎನ್‌ಪಿಎಸ್ ಎಂಬ ಶವವನ್ನು ಶವ ಸಂಸ್ಕಾರ ಮಾಡಿಯೇ ಬರೋಣ

ಬನ್ನಿ ನಾನು ಬರುತ್ತಿದ್ದೇನೆ ನೀವು…..ಇದು ಫಾರ್ವರ್ಡ್ ಮೆಸೇಜ್ ಅಲ್ಲ,, ಸಮಸ್ತ ಬಾಗಲಕೋಟೆ ನೌಕರರ ತಾಕತ್ತು KSGNPSEA BGK ಟೀಮ್…..ನೆನಪು ಇದೆ ಅಲ್ವಾ ಡಿಸೆಂಬರ್ 19ರ ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಇರುವ ಗೊಂದಲಗಳಿಗೆ ಯಾವುದೇ ತಲೆ ಕೇಡಿಸಿ ಕೊಳ್ಳಬೇಡಿ…..

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.