ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೇರಿ ಮೂವರ ಅಮಾನತು ಜಿಲ್ಲಾ ಪಂಚಾಯತ CEO ಅಮಾನತು ಮಾಡಿ ಆದೇಶ‌…..

Suddi Sante Desk
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೇರಿ ಮೂವರ ಅಮಾನತು ಜಿಲ್ಲಾ ಪಂಚಾಯತ CEO ಅಮಾನತು ಮಾಡಿ ಆದೇಶ‌…..

ಕಲಬುರಗಿ

ಹೌದು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಕ್ಷರ‌ ದಾಸೋಹ ಯೋಜನೆ ಸಹಾಯಕ ನಿರ್ದೇಶಕ, ಮುಖ್ಯ ಶಿಕ್ಷಕ ಹಾಗೂ ಮುಖ್ಯ ಅಡುಗೆ ತಯಾರಕಿ ಯನ್ನು ವಜಾ ಮಾಡಿರುವ ಘಟನೆ ಕಲಬುರಗಿ ಯಲ್ಲಿ ನಡೆದಿದೆ.ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ್ ಡಿ.ಬದೋಲೆ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಅಡುಗೆ ತಯಾರಕಿ ಪತಿಯ ಹಸ್ತಕ್ಷೇಪ, ಬೇಜಾ ವಾಬ್ದಾರಿ ಯೊಂದಿಗೆ ಕರ್ತವ್ಯ ಲೋಪ ಹಾಗೂ ಮಕ್ಕಳಿಗೆ ಕೆನೆ ಭರಿತ ಹಾಲು ಪೂರೈಸುವಲ್ಲಿ ವಿಫಲವಾಗಿರುವ ಆರೋಪ.ಇನ್ನೂ ಜಗತ್ ವೃತ್ತದ ಸರ್ಕಾರಿ ಕನ್ಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ,ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಜಕುಮಾರ ರೆಡ್ಡಿ ಹಾಗೂ ಮುಖ್ಯ ಅಡುಗೆ ತಯಾರಕಿ ಸುಮಂಗಲಾ ದರ್ಗಿ ಅವರ ವಿರುದ್ಧ ದೂರು ದಾಖಲಿಸಲು ಸೂಚಿಸಿದ್ದಾರೆ

ಸಿಇಒ ಅವರು ಶಾಲೆಗೆ ಭೇಟಿ ನೀಡಿದ ವೇಳೆ ಮುಖ್ಯ ಅಡುಗೆ ತಯಾರಕಿ ಸುಮಂಗಲಾ ಶಾಲೆಯಲ್ಲಿ ಇರಲಿಲ್ಲ. ಹಾಜರಾತಿ ಪರಿಶೀಲಿಸಿ ದಾಗ ಡಿ.8 ರಿಂದ ಸತತ ಗೈರಾಗಿದ್ದರು.ತರಬೇತಿಗೆ ತೆರಳಿದ್ದ ಮುಖ್ಯಶಿಕ್ಷಕ ರಮೇಶ ಅವರನ್ನು ಕರೆದು ಈ ಬಗ್ಗೆ ವಿಚಾರಿಸಿದಾಗ ಅನಾರೋಗ್ಯದಿಂದಾಗಿ ಶಾಲೆಗೆ ಬರಲು ಆಗಲಿಲ್ಲ ಲಿಖಿತ ರೂಪದಲ್ಲಿ ಪತ್ರ ನೀಡಲು ಆಗರಲಿಲ್ಲ ಎಂದು ಸಮಜಾಯಿಷಿ ನೀಡಿದರು.

ಇದಾದ ಬಳಿಕ ಸಿಇಒ ಅವರು ಕೆಎಂಎಫ್‌ನಿಂದ ಸರಬರಾಜು ಆಗಿದ್ದ ಹಾಲಿನ ಪುಡಿ ಸ್ವೀಕೃತಿ ಎಲ್ಲಿ ಎಂದು ಪ್ರಶ್ನಿಸಿದರು.ಅಡುಗೆ ಸಹಾಯಕಿ ಶರಣಮ್ಮ  ಮುಖ್ಯ ಅಡುಗೆ ತಯಾರಕಿ ಮನೆ ಯಲ್ಲಿ ಇದೆ ಎಂದರು.ರಶೀದಿ ತರುವಂತೆ ಸೂಚಿ ಸಿದಾಗ ಸುಮಂಗಲಾ ಅವರ ಪತಿ ತೆಗೆದು ಕೊಂಡು ಬಂದರು.

ರಶೀದಿ ಪರಿಶೀಲಿಸಿದಾಗ ನ.21ರಂದು ಸುಮಂಗಲಾ ಅವರು ಮುಖ್ಯಶಿಕ್ಷಕರ ಅನುಪಸ್ಥಿ ತಿಯಲ್ಲಿ 70 ಕೆ.ಜಿ ಹಾಲಿನ ಪುಡಿ ಸ್ವೀಕರಿಸಿದ್ದಾಗಿ ರುಜು ಹಾಕಲಾಗಿದೆ.ಆದರೆ ಸುಮಂಗಲಾ ಡಿ.8 ರಿಂದ ರಜೆಯಲ್ಲಿ ಇರುವುದಾಗಿ ಮುಖ್ಯಶಿಕ್ಷಕ ಹೇಳಿದ್ದರು. ಜೊತೆಗೆ ಸ್ವೀಕರಿಸಿದ 70 ಕೆ.ಜಿ ಬದಲು ಕೇವಲ 30 ಕೆ.ಜಿ ಮಾತ್ರ ಹಾಲಿ ಪುಡಿ ಅಡುಗೆ ಕೇಂದ್ರದಲ್ಲಿ ಇರುವುದು ಕಂಡುಬಂದಿದೆ.

ಸುಮಂಗಲಾ ಅವರ ಗೈರಾದ ಅವಧಿಯಲ್ಲಿ ಆಕೆಯ ಪತಿ ರಾಜು ದರ್ಗಿ ಅವರು ತಮ್ಮ ದ್ವಿಚಕ್ರ ವಾಹನದ ಮೂಲಕ ಹಾಲಿನ ಪುಡಿ ಶಾಲೆ ತಲುಪಿ ಸಿದ್ದಾರೆ ಎಂದು ಅಡುಗೆ ಸಿಬ್ಬಂದಿ ಸಿಇಒ ಅವರಿಗೆ ಸ್ಪಷ್ಟನೆ ನೀಡಿದರು.

ನಾನು ಭೇಟಿ ನೀಡಿದ ವೇಳೆ ಮುಖ್ಯ ಅಡುಗೆ ತಯಾರಕಿ ಪತಿ ಅಡುಗೆ ಕೇಂದ್ರದಲ್ಲಿ ಅನಾವ ಶ್ಯಕವಾಗಿ ಹಸ್ತಕ್ಷೇಪ ಮಾಡಿದ್ದಾರೆ.ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿದ ದಾಸ್ತಾನು ಮಕ್ಕಳ ಹಾಜರಾತಿ, ನಿತ್ಯ ಖರ್ಚು ವಿವರ ಹಾಗೂ ಪುಸ್ತಕ ನಿರ್ವಹಿಸದೆ ಇರುವುದು ಕಂಡುಬಂದಿದೆ.ಜೊತೆಗೆ ಅಡುಗೆ ಸಹಾಯಕಿ ಭೀಮಾರತಿ ಗೈರಾಗಿದ್ದರು ಎಂದು ಸಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲೆಗೆ ಹಾಜರಾದ 136 ಮಕ್ಕಳ ಅನುಪಾತಕ್ಕೆ 2.4ಕೆ.ಜಿ ಕೆನೆ ಭರಿತ ಹಾಲಿನ ಪುಡಿ ಬಳಸಬೇಕಿತ್ತು ಆದರೆ, 1 ಕೆ.ಜಿ ಬಳಸಲಾಗಿದೆ. ಮುಖ್ಯಶಿಕ್ಷಕ ಡಿ.21ರ ರಜೆ ಮಂಜೂರಾತಿ ಪ್ರತಿ ಪ್ರಸ್ತುತಪಡಿ ಸಿಲ್ಲ ಜತೆಗೆ ಪ್ರಭಾರವನ್ನೂ ಯಾರಿಗೂ ವಹಿಸಿ ರಲಿಲ್ಲ. ಹಲವು ಲೋಪಗಳು ಕಂಡು ಬಂದರೂ ಸಮಂಜಸ ಉತ್ತರ ಗಳನ್ನು ನೀಡದಿರುವುದರ ಜತೆಗೆ ಕರ್ತವ್ಯ ನಿಲರ್ಕ್ಷ್ಯವೂ ಕಂಡುಬಂದಿದೆ ಎಂದಿದ್ದಾರೆ.

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶಾಲೆಗಳಿಗೆ ಭೇಟಿ ನೀಡಿ ಸರಿಯಾಗಿ ಮೇಲ್ವಿಚಾರಣೆ ಮಾಡಿಲ್ಲ.ಹೀಗಾಗಿ, ಈ ಮೂವ ರನ್ನು ಕರ್ತವ್ಯದಿಂದ ವಜಾ ಮಾಡಿ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.