ಬೆಳಗಾವಿ –
ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ವಿಭಾಗದ ಇನ್ಸ್ಪೆಕ್ಟರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಬಾಗಲ ಕೋಟೆಯ ಹೆಸ್ಕಾಂನಲ್ಲಿದ್ದ ಮಲ್ಲಿಕಾರ್ಜುನ ಎಸ್. ತುಳಸಿಗೇರಿ ಅವರನ್ನು ಮಾರ್ಕೆಟ್ ಠಾಣೆಗೆ ವರ್ಗಾ ಯಿಸಲಾಗಿದೆ.ಎಸಿಬಿ ಯಲ್ಲಿದ್ದ ಮಂಜುನಾಥ ಹಿರೇಮಠ- ಎಪಿಎಂಸಿ ಠಾಣೆಗೆ, ವಿನಾಯಕ ಬಡಿಗೇರ ಅವರನ್ನು ಟಿಳಕವಾಡಿಯಿಂದ ಶಹಾಪುರ ಠಾಣೆಗೆ, ರಾಘವೇಂದ್ರ ಹವಾಲ್ದಾರ- ಶಹಾಪುರ ದಿಂದ ಟಿಳಕವಾಡಿಗೆ, ಧೀರಜ್ ಬಿ. ಶಿಂಧೆ- ಖಡೇ ಬಜಾರ್‌ನಿಂದ ಉದ್ಯಮ ಬಾಗ್ ಠಾಣೆಗೆ, ದಿಲೀಪ ಪಿ. ನಿಂಬಾಳಕರ- ಡಿಸಿಆರ್‌ಇ ಯಿಂದ ಖಡೇ ಬಜಾರ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಇನ್ನೂ ಸುದರ್ಶನ ಕೆ. ಪಟ್ಟಣಕುಡೆ- ಎಸಿಬಿಯಿಂದ ಮಹಿಳಾ ಪೊಲೀಸ್ ಠಾಣೆಗೆ, ಜಾವೇದ್ ಎಫ್. ಮುಸಾಪುರಿ- ಎಪಿಎಂಸಿ ಠಾಣೆಯಿಂದ ಎಸಿಬಿಗೆ, ದಯಾನಂದ ಶೇಗುಣಸಿ- ಉದ್ಯಮಬಾಗ್ ನಿಂದ ಐಎಸ್‌ಡಿಗೆ, ಶ್ರೀದೇವಿ ಎ.ಪಾಟೀಲ-ಮಹಿಳಾ ಠಾಣೆಯಿಂದ ಡಿಎಸ್‌ಬಿಗೆ ವರ್ಗಾಯಿಸಿ ಆದೇಶ ವನ್ನು ಮಾಡಲಾಗಿದೆ