ಬೆಂಗಳೂರು –
ಕೇಂದ್ರ ಸರ್ಕಾರ ಸಾರ್ವಜನಿಕರ ಮೇಲೆ ವಸ್ತುವಿನ ಬೆಲೆ ಏರಿಕೆಯನ್ನು ಮಾಡಿ ಬರೆ ಹಾಕಿದಂತಾಗಿದೆ. ಹೌದು ತೈಲ ಮಾರುಕಟ್ಟೆ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಬೆಲೆ ಹೆಚ್ಚಿಸುವ ಮೂಲಕ ಬೆಲೆ ಏರಿಕೆ ಯಿಂದ ಈಗಾಗಲೇ ತತ್ತರಿಸಿರುವ ಜನತೆಗೆ ಮತ್ತೊಂ ದು ಬಿಗ್ ಶಾಕ್ ನೀಡಿವೆ.ಹೌದು ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ಎಲ್ ಪಿಜಿಜಿ ಸಿಲಿಂಡರ್ ಬೆಲೆ ಯನ್ನು 25.50 ರೂ.ಗೆ ಹೆಚ್ಚಳ ಮಾಡಲಾಗಿದೆ.
14.2 ಕೆಜಿ ತೂಕದ ಸಿಲಿಂಡರ್ ಗೆ ದೆಹಲಿಯಲ್ಲಿ 834.5ರೂ.ಗೆ ಏರಿಕೆಯಾಗಿದೆ. 19 ಕೆಜಿ ಸಿಲಿಂಡರ್ ಬೆಲೆಯನ್ನೂ ಸಹ 76ರೂ. ಹೆಚ್ಚಿಸಲಾಗಿದೆ. ದೆಹಲಿ ಯಲ್ಲಿ ಇದರ ದರ 1550ರೂ.ಗೆ ಏರಿಕೆಯಾಗಿದೆ. ಎಲ್ಪಿ ಜಿಯ ಅಂತಾರಾಷ್ಟ್ರೀಯ ಮಾನದಂಡ ದರ ಯುಎಸ್ ಡಾಲರ್ ಮತ್ತು ರೂಪಾಯಿ ವಿನಿಮಯ ದರ ಆಧರಿಸಿ ಎಲ್ಪಿೆಜಿ ಸಿಲಿಂಡರ್ ದರಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸಲಾಗುತ್ತದೆ.ಸರ್ಕಾರ ಗ್ರಾಹಕರನ್ನು ಆಯ್ಕೆ ಮಾಡಲು ಸಣ್ಣ ಸಹಾಯ ಧನ ನೀಡುತ್ತಿತ್ತು. ಕಳೆದ ಎರಡು ವರ್ಷಗಳಿಂದ ಬೆಲೆ ಹೆಚ್ಚಳದ ಮೂಲಕ ಮಹಾನಗರಗಳು ಮತ್ತು ಪ್ರಮುಖ ನಗರಗಳಲ್ಲಿ ಈ ಸಬ್ಸಿಡಿಯನ್ನು ಕೂಡ ತೆಗೆದುಹಾಕಲಾಗಿದೆ.
ಮೇ 2020 ರಿಂದ ಗ್ರಾಹಕರಿಗೆ ಯಾವುದೇ ಸಬ್ಸಿಡಿ ನೀಡಲಾಗುತ್ತಿಲ್ಲ.ಎಲ್ಲ ಎಲ್ ಪಿಜಿ ಬಳಕೆದಾರರು ಮಾರುಕಟ್ಟೆ ಬೆಲೆಯನ್ನು ಪಾವತಿ ಮಾಡಿ ಸಿಲಿಂಡರ್ ಪಡೆಯಬೇಕು. ಪ್ರಸ್ತುತ ದರ 834.50ರೂ ಆಗಿದ್ದು ಇದರೊಂದಿಗೆ ಮತ್ತೊಂದ ಬೆಲೆ ಏರಿಕೆಯ ಬಿಸಿಯ ನ್ನು ಸಾರ್ವಜನಿಕರು ಅನುಭವಿಸುವಂತಾಗಿದೆ.