NPS ಮತ್ತು ಹೋರಾಟ ಕುರಿತಂತೆ ರಚನೆಗೊಂಡಿತು ಕವನ – ಪಿಂಚಣಿ ಬದುಕು ಹೋರಾಟ ಕುರಿತಂತೆ ಕವನದಲ್ಲಿ ಚಿತ್ರಣ ತೆರೆದಿಟ್ಟ ಶಿಕ್ಷಕ ಮುತ್ತು ಬಳ್ಳಾ…..

Suddi Sante Desk
NPS ಮತ್ತು ಹೋರಾಟ ಕುರಿತಂತೆ ರಚನೆಗೊಂಡಿತು ಕವನ – ಪಿಂಚಣಿ ಬದುಕು ಹೋರಾಟ ಕುರಿತಂತೆ ಕವನದಲ್ಲಿ ಚಿತ್ರಣ ತೆರೆದಿಟ್ಟ ಶಿಕ್ಷಕ ಮುತ್ತು ಬಳ್ಳಾ…..

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಮರಣ ಶಾಸನ ವಾಗಿರುವ ಹೊಸ ಪಿಂಚಣಿ ವಿರುದ್ದ ಸಧ್ಯ ಮಾಡು ಇಲ್ಲವೆ ಮಡಿ ಹೋರಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಈ ಒಂದು ಹೋರಾಟ ನಡೆಯುತ್ತಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಎನ್ ಪಿಎಸ್ ನೌಕರರು ಪಾಲ್ಗೊಂಡು ಹಳೆ ಪಿಂಚಣಿ ವ್ಯವಸ್ಥೆಗಾಗಿ ಬೇಡಿಕೆಯನ್ನು ಇಟ್ಟು ಹೋರಾಟವನ್ನು ಮಾಡುತ್ತಿದ್ದಾರೆ.

ಇನ್ನೂ ಈ ಪಿಂಚಣಿ ವ್ಯವಸ್ಥೆ ಮತ್ತು ಹೋರಾಟ ಕುರಿತಂತೆ ಶಿಕ್ಷಕರೊಬ್ಬರು ಕವನದ ರೂಪದಲ್ಲಿ ಸಂಪೂರ್ಣ ಚಿತ್ರಣವನ್ನು ತೆರೆದಿಟ್ಟಿದ್ದಾರೆ.ಹೌದು ವೃತ್ತಿಯಲ್ಲಿ ಶಿಕ್ಷಕರಾಗಿರುವ ಮುತ್ತು ಬಳ್ಳಾ ಕಮತ ಪುರ ಶಿಕ್ಷಕರು ಈ ಒಂದು ಕವನವನ್ನು ರಚನೆ ಮಾಡಿದ್ದಾರೆ.ಬಾಗಲಕೊಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಕ್ಕರಗುಂದಿಯಲ್ಲಿ ಕರ್ತವ್ಯ ವನ್ನು ಮಾಡುತ್ತಿರುವ ಇವರು ಈ ಪಿಂಚಣಿ ಮತ್ತು ಹೋರಾಟ ಕುರಿತಂತೆ ಕವನವನ್ನು ಬರೆದಿದ್ದಾರೆ.

 

ಯಾರಿಗೆ ಬೇಕು ಏತಕೆ ಬಂತು

NPS ಹೋರಾಟ ಹೋರಾಟ

ಮುಪ್ಪಿನ ಕಾಲದಲಿ ನೆಮ್ಮದಿಗೆ

ಹೆಂಡತಿ ಮಕ್ಕಳ ಬಾಳ ಬುತ್ತಿಗೆ

ಯಾರಿಗೆ ಬೇಕು ಏತಕೆ ಬೇಕು

NPS ಹೋರಾಟ ಹೋರಾಟ..

ಮಲ್ಟಿ ನ್ಯಾಷನಲ್ ಕಂಪನಿಗೆ…

ಬೊಕ್ಕಸ ತುಂಬಿದೆ ಸರ್ಕಾರ.

ಬಡ ನೌಕರರಿಗೆ ಸಂತಸವಿಲ್ಲ

ಸಂಧ್ಯಾಕಾಲದ ಆಸರೆವಿಲ್ಲ ..

ಗೋಳಿನ ಕಥೆ ಕೇಳುವವರಿಲ್ಲ

ಜೀವನ ಕುಸುಮ ಹಾಡಲಿಲ್ಲ

ದುಡ್ಡು ಇದ್ದವರ ಗಮ್ಮತ್ತು

ಕತ್ತಲೆ ಬದುಕು ಯಾವತ್ತೂ

ಕೋಣದ ಕುಣಿತದ NPSuu..

ಕೋಟ್ಯಾಧೀಶನಾಗುವ ಆಮಿಷ

ಮೋಜಿನ ಕುದುರೆಗೆ ತಳ್ಳಿದರು.

ಆಳುವ ವರ್ಗಕೆ ಏಕಿಲ್ಲ NPSuu..

ಸಮತೆಯ ಸಂವಿಧಾನ ಓದಿ ಒಮ್ಮೆ..

ಅಂಬಾನಿ ಅದಾನಿ ಜೇಬಿಗೆ

ಕಾರ್ಪೋರೆಟ್ ಕಂಪನಿ ಪ್ರಾಜೆಕ್ಟು

ಪಾಪ ಪ್ರಜ್ಞೆವಿಲ್ಲದ ಶ್ರೀಮಂತರಿಗೆ

ಸಂಪತ್ತಿನ ಕ್ರೋಢೀಕರಣದ ಆಶೆಗೆ…

ಪಾರ್ಲಿಮೆಂಟಿನಲಿ ಚರ್ಚೆವಿಲ್ಲದೆ

ಪಾಸ್ ಆಯಿತು ಬಿಲ್ಲು NPSuu

ನೌಕರರ ನಿಟ್ಟುಸಿರ ರಕ್ತದ ಮೇಲೆ…..

ಸುವರ್ಣ ಯುಗವು ಕಾಣಲಿಲ್ಲ ..

ಯಾರಿಗೆ ಬೇಕು ಏತಕೆ ಬೇಕು

NPS ಹೋರಾಟ ಹೋರಾಟ..

ಮುತ್ತು ಬಳ್ಳಾ ಕಮತಪುರ…..

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.