ಹುಬ್ಬಳ್ಳಿ –
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ನಡೆದಿದೆ.ಬೈಕ್ ಮೇಲೆ ಹುಬ್ಬಳ್ಳಿ ಯಿಂದ ಊರಿಗೆ ಹೊರಟಿದ್ದ ಸಮಯದಲ್ಲಿ ವಾಹನವೊಂದು ಬೈಕ್ ಗೆ ಗುದ್ದಿಕೊಂಡು ಹೋಗಿದೆ

ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ತುಂಬಾ ದೂರ ಹೋಗಿ ಬಿದ್ದಿದ್ದು ಬೈಕ್ ನಲ್ಲಿದ್ದ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ

ಈ ಒಂದು ಆಕ್ಸಿಡೆಂಟ್ ದೇವಿಕೊಪ್ಪ ದಿಂದ ಕಲಘಟಗಿ ಮಾರ್ಗ ಮಧ್ಯೆ ಆಗಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ 108 ಸಿಬ್ಬಂದಿ ಗಳು ಶಿಪ್ಟ್ ಮಾಡಿದ್ದಾರೆ.ಇನ್ನೂ ಮಹಾಬಲೇಶ್ವರ ಕೈ ಗಾಯವಾಗಿದ್ದು ಕಾಲು ತುಂಡಾಗಿದೆ.ಇನ್ನೊಬ್ಬ ರಿಗೂ ಒಳಪೆಟ್ಟು ಆಗಿದ್ದು ಕಲಘಟಗಿಯ 108 ಸಿಬ್ಬಂದಿ ಗಳಾದ ಮಹಾಂತೇಶ್ ಮತ್ತು ಗಜಾನನ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು ಇನ್ನೂ ಒರ್ವ ಕೃಷ್ಣ ಹಾಲಿನ ಫ್ಯಾಕ್ಟರಿ ಹಾಗೇ ಇನ್ನೊರ್ವ ರು ಸಾರಿಗೆ ನಿರ್ವಾಹಕ ಎಂಬುವರಾಗಿ ದ್ದಾರೆ