ಡಿಸೆಂಬರ್ 25 ರಂದು ಕೋಳಿವಾಡದಲ್ಲಿ ಉಚಿತ ಬೃಹತ್ ನೇತ್ರ ತಪಾಸಣಾ ಶಿಬಿರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಯಿಂದ ಕಾರ್ಯಕ್ರಮ

Suddi Sante Desk
ಡಿಸೆಂಬರ್ 25 ರಂದು ಕೋಳಿವಾಡದಲ್ಲಿ ಉಚಿತ ಬೃಹತ್ ನೇತ್ರ ತಪಾಸಣಾ ಶಿಬಿರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಯಿಂದ ಕಾರ್ಯಕ್ರಮ

ಹುಬ್ಬಳ್ಳಿ

ಡಿಸೆಂಬರ್ 25 ರಂದು ಕೋಳಿವಾಡದಲ್ಲಿ ಉಚಿತ ಬೃಹತ್ ನೇತ್ರ ತಪಾಸಣಾ ಶಿಬಿರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಯಿಂದ ಕಾರ್ಯಕ್ರಮ  (ರಿ) ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಿಶ್ವ ಮಧ್ವ ಮಹಾ ಪರಿಷತ್, ಗುರು ಮಹಿಪತಿರಾಜ ನೇತ್ರ ಸೇವಾಸಂಸ್ಥೆ ಹಾಗೂ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ದಿ. 25-12-2022 ರಂದು  ಈ ಒಂದು ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1-00 ರವರೆಗೆ ನಡೆಯುವ ಈ ಶಿಬಿರವನ್ನು ಮಾನ್ಯ ಸಭಾಪತಿಗಳಾದ  ಬಸವರಾಜ ಹೊರಟ್ಟಿ  ಉದ್ಘಾಟಿಸುವರು. ಸಕ್ಕರೆ ಹಾಗೂ ಜವಳಿ ಖಾತೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸುವರು ಕೋಳಿವಾಡ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಶಾಂತವ್ವ ದೇವನೂರು, ಗ್ರಾ. ಪಂ. ಉಪಾಧ್ಯಕ್ಷ  ಎಸ್. ಎಮ್. ಗುಂಜಾಲ, ಕ್ಷಮತಾ ಸಂಚಾಲಕರಾದ  ಗೋವಿಂದ ಜೋಶಿ, ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಶ್ರೀನಿವಾಸ ಜೋಶಿ ಹಾಗೂ, ಧಾರವಾಡ ಜಿಲ್ಲಾ ದಿಶಾ ಕಮಿಟಿ ಸದಸ್ಯ ಶ್ರೀ ಹನುಮಂತಪ್ಪ ಬೂದಿಹಾಳ ಉಪಸ್ಥಿತರಿರುವರು.

ಡಾ. ಎಂ.ಎಂ ಜೋಶಿ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರ ತಂಡ ಕಣ್ಣಿನ ತಪಾಸಣೆ ನಡೆಸಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಜನರನ್ನು ಆಯ್ಕೆ ಮಾಡಲಿ ದ್ದಾರೆ. ಹೀಗೆ ಆಯ್ಕೆಯಾದ ಕಣ್ಣಿನ ಪೊರೆಬಂದಿ ರುವ ರೋಗಿಗಳನ್ನು ಹುಬ್ಬಳ್ಳಿ ಗೋಕುಲ ರಸ್ತೆ ಯಲ್ಲಿರುವ ಡಾ. ಎಂ.ಎಂ ಜೋಶಿ ಆಸ್ಪತ್ರೆಗೆ ಕರೆತಂದು ಅತ್ಯಾದುನಿಕ ಪದ್ದತಿ ಐ.ಓ.ಎಲ್. ಇಂಪ್ಲಾಂಟೇಷನ್ ಸಲುವಾಗಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.

ಕಾರಣ ಕೋಳಿವಾಡ ಸುತ್ತಮುತ್ತಲಿನ ಹಳ್ಳಿಗ ಳಾದ ಉಮಚಗಿ, ಮಲ್ಲಿಗವಾಡ, ಬಂಡಿವಾಡ, ನಲವಡಿ, ಬದ್ರಾಪೂರ, ರೊಟ್ಟಿಗವಾಡ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಕ್ಕೆ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿಬಿರಾರ್ಥಿಗಳ ನೋಂದಣಿ ಕಾರ್ಯ ಬೆಳಿಗ್ಗೆ 9ರಿಂದ ಆರಂಭವಾ ಗುವುದು. ಶಿಬಿರಕ್ಕೆ ಆಗಮಿಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವವರು ಹಾಗೂ ತಪಾಸಣೆಗೊಳಪಡು ವವರು ತಮ್ಮ ಆಧಾರ ಅಥವಾ ಇತರ ಗುರುತಿನ ಚೀಟಿ ತರಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಹೆಚ್ಚಿನ ಮಾಹಿತಿಗಾಗಿ ಮೊ- 8147270008, 9242134654, 6361188433 ಹಾಗೂ 9448559997 ಅಥವಾ ಸಚಿವರ ಕಛೇರಿ ಸಂಖ್ಯೆ 0836-2251055 ಇಲ್ಲಿ ಸಂಪರ್ಕಿಸ ಬಹುದಾಗಿದೆ ಎಂದು ಕ್ಷಮತಾ ಸಂಸ್ಥೆ ಪರವಾಗಿ ಚಂದ್ರಶೇಖರ ಬೆಳವಾಡಿ ಪ್ರಕಟಣೆ ಯಲ್ಲಿ ಕೋರಿ ದ್ದಾರೆ‌.

ವರದಿ ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.