ರಾಜ್ಯದಲ್ಲಿ ಹೊಸದೊಂದು ಅಭಿಯಾನ ಆರಂಭ ಮಾಡಿದ NPS ನೌಕರರು – ಈ ಬಾರಿ ನನ್ನ ಮತ್ತು ಕುಟುಂಬದ ಮತ ಹಳೆ ಪಿಂಚಣಿಗೆ ಎನ್ನುತ್ತಿರುವ ಸರ್ಕಾರಿ ನೌಕರರು

Suddi Sante Desk
ರಾಜ್ಯದಲ್ಲಿ ಹೊಸದೊಂದು ಅಭಿಯಾನ ಆರಂಭ ಮಾಡಿದ NPS ನೌಕರರು – ಈ ಬಾರಿ ನನ್ನ ಮತ್ತು ಕುಟುಂಬದ ಮತ ಹಳೆ ಪಿಂಚಣಿಗೆ ಎನ್ನುತ್ತಿರುವ ಸರ್ಕಾರಿ ನೌಕರರು

ಬೆಂಗಳೂರು

ರಾಜ್ಯದಲ್ಲಿ ರಾಜಕಾರಣಿಗಳಿಗೆ ಒಂದು ಕಾನೂನು ಸರ್ಕಾರಿ ನೌಕರರಿಗೆ ಇನ್ನೊಂದು ಕಾನೂನು ಇದನ್ನು ಮಾಡುವವರು ಅವರೇ ಮುರಿಯು ವವರು ಅವರೇ.ರಾಜಕಾರಣಿಗಳು ತಮಗೆ ಏನು ಬೇಕು ಅದನ್ನು ಸರಿಯಾಗಿ ವ್ಯವಸ್ಥಿತವಾಗಿ ಮಾಡಿ ಕೊಳ್ಳುತ್ತಾರೆ ಇದಕ್ಕೆ ಒಂದು ಎರಡು ಉದಾಹರ ಣೆಗಳು ಸಾಕಷ್ಟು ಸಾಲು ಸಾಲು ನಮ್ಮ ಮುಂದೆ ಕಂಡು ಬರುತ್ತಿದ್ದು ಇದಕ್ಕೆ ತಾಜಾ ಉದಾಹರಣೆ ಸಾಕ್ಷಿ ಪಿಂಚಣಿ ಯೋಜನೆ.

ಹೌದು ಸಧ್ಯ ರಾಜ್ಯದಲ್ಲಿ ಯಾರೇ ಹೊಸದಾಗಿ ಸರ್ಕಾರಿ ನೌಕರರಿಗೆ ಸೇರಿಕೊಂಡರೆ ಅವರಿಗೆ ಹೊಸ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿದ್ದು 2007 ರಲ್ಲೀ ಈ ಒಂದು ಪಿಂಚಣಿ ಯೋಜನೆ ಜಾರಿಗೆ ಬಂದಾಗಿನಿಂದ ಈವರೆಗ ನಿರಂತರವಾಗಿ ಹೋರಾಟ ಪ್ರತಿಭಟನೆ ಮಾಡಿಕೊಂಡು ಬರುತ್ತಿ ದ್ದರು ಕೂಡಾ ಯಾರು ಕೂಡಾ ಸ್ಪಂದಿಸುತ್ತಿಲ್ಲ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡುತ್ತಿಲ್ಲ

ಹೀಗಾಗಿ ಬೇಸತ್ತಿರುವ ಸರ್ಕಾರಿ ನೌಕರರು ಸಧ್ಯ ಕಳೆದ 11 ದಿನಗಳಿಂದ ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡುತ್ತಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಎನ್ ಪಿಎಸ್ ನೌಕರರು ಹಗಲು ರಾತ್ರಿ ಎನ್ನದೇ ನಿರಂತರವಾಗಿ ಹೋರಾಟ ಪ್ರತಿಭಟನೆಯನ್ನು ಮಾಡಿಕೊಂಡು ಬರುತ್ತಿದ್ದರು ಕಾಂಗ್ರೇಸ್ ಪಕ್ಷದ ನಾಯಕರನ್ನು ಬಿಟ್ಟರೇ ಈವರೆಗೆ ಬಿಜೆಪಿ ಯಿಂದ ಒಂದಿಬ್ಬರು ಶಾಸಕ ರನ್ನು ಬಿಟ್ಟರೇ ಆಡಳಿತರೂಢ ರಾಜ್ಯ ಸರ್ಕಾರ ದಿಂದ ಯಾರು ಬಂದಿಲ್ಲ ಹೋರಾಟಗಾರರ ಸಮಸ್ಯೆಯನ್ನು ಆಲಿಸಿಲ್ಲ

ಹೀಗಾಗಿ ಬೇಸತ್ತಿರುವ ಎನ್ ಪಿಎಸ್ ನೌಕರರು ಸಧ್ಯ ಬರುತ್ತಿರುವ ರಾಜ್ಯದಲ್ಲಿನ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಮತ್ತು ನಮ್ಮ ಕುಟುಂಬದ ಮತ ಈ ಬಾರಿ ಹಳೆ ಪಿಂಚಣಿ ಯೋಜನೆಗಾಗಿ ಎಂಬ ಒಂದು ಸಂದೇಶ ದೊಂದಿಗೆ ಬರುವ ಚುನಾವಣೆಯನ್ನು ಯಾರು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಮುಂದಾಗುತ್ತಾರೆಯೇ ಅವರಿಗೆ ಎಂಬ ತೀರ್ಮಾ ನವನ್ನು ಕೈಗೊಂಡಿದ್ದು

ಹೀಗಾಗಿ ರಾಜಕೀಯ ಪಕ್ಷದವರಿಗೆ ಇದೊಂದು ಅಭಿಯಾನ ಸಂದೇಶ ದೊಡ್ಡ ಆತಂಕವನ್ನು ತಂದಿಟ್ಟಿದ್ದು ದಿನದಿಂದ ದಿನಕ್ಕೆ ಈ ಒಂದು ಅಭಿ ಯಾನದ ಹೋರಾಟ ಜೋರಾಗುತ್ತಿದ್ದು ರಾಜ್ಯ ಸರ್ಕಾರ ಇಲ್ಲವೇ ಎರಡು ಪಕ್ಷದವರು ಯಾವ ನಿರ್ಧಾರ ತೀರ್ಮಾ ನವನ್ನು  ಕೈಗೊಂಡು ಹೇಗೆ ಸ್ಪಂದಿಸುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.