ಕರವೇ ಘಟಕಗಳನ್ನು ವಿಸ್ತರಣೆಗೆ ಅಣ್ಣಿಗೇರಿಯಲ್ಲಿ ವಿಶೇಷ ಸಭೆ ಮಾಡಿದ ಗೌರವ ಅಧ್ಯಕ್ಷ ಕುಮಾರ ಪಾಟೀಲ – ಜಿಲ್ಲೆಗಳಲ್ಲಿ ಕರವೇ ಗ್ರಾಮ ಘಟಕಗಳ ರಚನೆಗೆ ನಡೆಯಿತು ವಿಶೇಷ ಸಭೆ

Suddi Sante Desk
ಕರವೇ ಘಟಕಗಳನ್ನು ವಿಸ್ತರಣೆಗೆ ಅಣ್ಣಿಗೇರಿಯಲ್ಲಿ ವಿಶೇಷ ಸಭೆ ಮಾಡಿದ ಗೌರವ ಅಧ್ಯಕ್ಷ ಕುಮಾರ ಪಾಟೀಲ – ಜಿಲ್ಲೆಗಳಲ್ಲಿ ಕರವೇ ಗ್ರಾಮ ಘಟಕಗಳ ರಚನೆಗೆ ನಡೆಯಿತು ವಿಶೇಷ ಸಭೆ

ಅಣ್ಣಿಗೇರಿ

ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯನ್ನು ಧಾರವಾಡ ಜಿಲ್ಲೆಯಲ್ಲಿ ಮತ್ತಷ್ಟು ವಿಸ್ತರಣೆ ಮಾಡಿ ಗ್ರಾಮ ಮಟ್ಟದಲ್ಲೂ ಬಲವರ್ಧನೆ ಮಾಡಲು ಜಿಲ್ಲಾ ಗೌರವ ಅಧ್ಯಕ್ಷ ಕುಮಾರ ಪಾಟೀಲ ಮುಂದಾಗಿದ್ದಾರೆ.ಹೌದು ಈಗಾಗಲೇ ಸಂಘಟನೆಯ ರಾಜ್ಯಾಧ್ಯಕ್ಷರಾಗಿರುವ ನಾರಾಯಣಗೌಡರ ಮಾರ್ಗದರ್ಶನದಲ್ಲಿ ವಿಶೇಷ ಕೆಲಸ ಕಾರ್ಯಗಳೊಂದಿಗೆ ನಾಡು ನುಡಿ ವಿಚಾರದಲ್ಲಿ ಸದಾ ಉತ್ಸಾಹದಿಂದ ಒಳ್ಳೊಳ್ಳೇಯ ಕೆಲಸಗಳನ್ನು ಮಾಡುತ್ತಿರುವ ಧಾರವಾಡ ಜಿಲ್ಲಾ ಗೌರವ ಅಧ್ಯಕ್ಷ ಕುಮಾರ ಪಾಟೀಲ ಈಗ ಸಂಘಟನೆಯನ್ನು ಜಿಲ್ಲೆಯ ಗ್ರಾಮ ಮಟ್ಟದಲ್ಲೂ ವಿಸ್ತರಣೆ ಮಾಡಲು ಮುಂದಾಗಿದ್ದಾರೆ.

ಈ ಒಂದು ಹಿನ್ನಲೆಯಲ್ಲಿ ಅಣ್ಣಿಗೇರಿಯಲ್ಲಿ ವಿಶೇಷ ಸಭೆಯನ್ನು ಮಾಡಿದರು.ಕರವೇ ಅಣ್ಣಿಗೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕರವೇ ಗ್ರಾಮ ಘಟಕಗಳ ರಚನೆ ಕುರಿತಂತೆ ಹಾಗೇ ಮುಂದಿನ ಕೆಲವೊಂದಿಷ್ಟು ಯೋಜನೆಗಳ ಬಗ್ಗೆ  ಉದ್ಘಾಟನೆ ಮಾಡುವ ಕುರಿತು ಕಾರ್ಯ ಕರ್ತರ ಗೌರವ ಅಧ್ಯಕ್ಷರು ಚರ್ಚೆಯನ್ನು ಮಾಡಿದರು.

ಕುಮಾರ ಪಾಟೀಲ ನೇತ್ರತ್ವದಲ್ಲಿ ನಡೆದ ಈ ಒಂದು ಸಭೆಯಲ್ಲಿ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಮಹತ್ವದ ನಿರ್ಣಯವನ್ನು  ತಗೆದು ಕೊಳ್ಳಲಾಯಿತು.ಇನ್ನೂ ಇದೇ ವೇಳೆ ಗೌರವ ಅಧ್ಯಕ್ಷರಿಗೆ ಈ ಒಂದು ಸಮಯದಲ್ಲಿ ಆತ್ಮೀಯ ವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ನವಲಗುಂದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್ ಹಳ್ಳಿಕೇರಿ,ಪ್ರಧಾನ ಕಾರ್ಯದರ್ಶಿ ಆನಂದ ಚೌವಡಿ,ಅಣ್ಣಿಗೇರಿ ಪಟ್ಟಣದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಅಣ್ಣಿಗೇರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.