ಬೆಂಗಳೂರು –

$$$ಇದ್ಯಾವ ನ್ಯಾಯ$$$
ಕಲಿಯದ ಮಗುವಿಗೂ ಮುಂಬಡ್ತಿ
ಕಲಿಸಿದ ಗುರುವಿಗೆ ಹಿಂಬಡ್ತಿ
ಇದ್ಯಾವ ನ್ಯಾಯ?ಇದ್ಯಾವ ನಡ್ತಿ?
ಗುಮಾಸ್ತ ತಹಶೀಲ್ದಾರನಾಗಬಹುದು
ಕಾನೂನು ತಜ್ಞನ ದೃಷ್ಟಿಯಲಿ
ಜ್ಞಾನಿಗಳನು ರೂಪಿಸಿ ಜ್ಞಾನ
ನೀಡುವವರು ಅಜ್ಞಾನಿಗಳಾಗಿಬಿಟ್ಟರು ಕಾನುನೂ ತಜ್ಞನ ತಲೆಯಲಿ

ಮುಂದಕ್ಕೊಗುವದು ಜಗದ
ಬದಲಾವಣೆಯ ನಿಯಮ
ಮುಂದಿದ್ದವರನ್ನ ಹಿಂದಕ್ಕೆಳೆದು
ಅಂಗನವಾಡಿಗೆ ತಳ್ಳುವದು
ಅತಿಬುದ್ದಿವಂತರ C&R ನಿಯಮ
ಒಂದು ವರುಷ ಸೇವೆ ಮಾಡಿದ ಪ್ರಜಾನಾಯಕನಿಗೆ ಪಿಂಚಣಿ ಬೆನ್ನುಬಾಗುವವರೆಗೂ ಸೇವೆ
ಮಾಡೊ ನೌಕರನಿಗೆ ಲಟಗುಣಿ
ಕೆಲವೆಡೆ ಬೇಡವೆಂದರು ಪದೆಪದೆ
ಶಿಕ್ಷೆಯ ವರ್ಗಾವಣೆ
ನಿರಾಧಾಯದ ಶಿಕ್ಷಕರಿಗೆ ಭರವಸೆ ನಿರಾಶೆಯ ವಿಜೃಂಭಣೆ
✍ನೊಂದಕೊಂಡ ಶಿಕ್ಷಕ ಬಂಧು