ಮಂಗಳೂರು –
ಇಂದಿನಿಂದ ಅಂದರೆ ಸೋಮವಾರದಿಂದ ರಾಜ್ಯಾ ದ್ಯಂತ ದೇಗುಲಗಳು ಬಾಗಿಲು ತೆರೆಯಲಿವೆ.ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳೂ ಭಕ್ತರಿಗೆ ದೇವರ ದರ್ಶನದ ವ್ಯವಸ್ಥೆ ಮಾಡಿವೆ. ಪ್ರಮುಖ ವಾಗಿ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳಾರತಿ ಸೇವೆಯನ್ನು ಹೊರತುಪಡಿಸಿ ಉಳಿದ ಯಾವುದೇ ಸೇವೆಗಳ ವ್ಯವಸ್ಥೆ ಇಲ್ಲ.ಪ್ರತಿ 15 ನಿಮಿಷಕ್ಕೊಮ್ಮೆ ಭಕ್ತಾಧಿ ಗಳಿಗಾಗಿ ದೇವರಿಗೆ ಮಂಗಳಾರತಿ ಸೇವೆ ಮಾಡಲಾ ಗುತ್ತದೆ.ಕೋವಿಡ್‌ನ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ದರ್ಶನ ಪಡೆಯಬೇಕು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಷೇತ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.ದೇವಸ್ಥಾನದ ಹೊರಾಂದೇವರ ದರ್ಶನದ ಸಮಯದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30ವರೆಗೆ ದರ್ಶನದ ವ್ಯವಸ್ಥೆ ಮಾಡ ಲಾಗಿದೆ.ಬಳಿಕ ಮಧ್ಯಾಹ್ನ 2.30 ರಿಂದ ರಾತ್ರಿ 7 ಗಂಟೆವರೆಗೆ ಭಕ್ತರು ದೇವರ ದರ್ಶನ ಪಡೆಯ ಬಹುದು.ಗಣ ಹಾಗೂ ಒಳಾಂಗಣದಲ್ಲಿ ಸಾಮಾಜಿಕ ಅಂತರದ ಗುರುತುಗಳನ್ನು ಮಾಡಲಾಗಿದೆ.
ಭಕ್ತಾಧಿಗಳು ಕೋವಿಡ್ ಮಾರ್ಗಸೂಚಿ ಚಾಚೂ ತಪ್ಪದೆ ಪಾಲಿಸಲು ಮನವಿ ಮಾಡಲಾಗಿದ್ದು ದೇವ ಸ್ಥಾನದ ಎಲ್ಲಾ ಸಿಬ್ಬಂದಿಗಳಿಗೆ ಈ ಕುರಿತ ಸೂಚನೆ ನೀಡಲಾಗಿದೆ.
ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ.ಈ ಹಿನ್ನಲೆ ಯಲ್ಲಿ ದೇಗುಲವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.ಅನ್ನದಾನ,ದೇವರ ದರ್ಶನದ ವ್ಯವ ಸ್ಥೆ ಮಾಡಲಾಗಿದ್ದು,ಸೇವೆಗಳನ್ನು ಆರಂಭಿಸುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಇನ್ನೂ ನಿರ್ಧಾರ ಕೈಗೊಂಡಿಲ್ಲ.