ಬಂದೇ ಬಿಟ್ಟಿತು ಆ ಕ್ಷಣ… ಮನೆ ಮಾಡಿತು ಸಂಭ್ರಮ… 2022ಕ್ಕೆ ವಿದಾಯ 2023 ಕ್ಕೆ ಸ್ವಾಗತ… ಇದು ಬರೀ ದಿನವಲ್ಲ, ಹೊಸ ಉಲ್ಲಾಸ, ಹೊಸ ವಿಶ್ವಾಸ, ಹೊಸ ಚೈತನ್ಯ ತರುವ ಶುಭ ಗಳಿಗೆ…

Suddi Sante Desk
ಬಂದೇ ಬಿಟ್ಟಿತು ಆ ಕ್ಷಣ… ಮನೆ ಮಾಡಿತು ಸಂಭ್ರಮ… 2022ಕ್ಕೆ ವಿದಾಯ 2023 ಕ್ಕೆ ಸ್ವಾಗತ… ಇದು ಬರೀ ದಿನವಲ್ಲ, ಹೊಸ ಉಲ್ಲಾಸ, ಹೊಸ ವಿಶ್ವಾಸ, ಹೊಸ ಚೈತನ್ಯ ತರುವ ಶುಭ ಗಳಿಗೆ…

ಧಾರವಾಡ

ಬಂದೇ ಬಿಟ್ಟಿತು ಆ ಕ್ಷಣ… ಮನೆ ಮಾಡಿತು ಸಂಭ್ರಮ… 2022ಕ್ಕೆ ವಿದಾಯ 2023 ಕ್ಕೆ ಸ್ವಾಗತ… ಇದು ಬರೀ ದಿನವಲ್ಲ, ಹೊಸ ಉಲ್ಲಾಸ, ಹೊಸ ವಿಶ್ವಾಸ, ಹೊಸ ಚೈತನ್ಯ ತರುವ ಶುಭ ಗಳಿಗೆ…ಮುಗೀತು 2022…

ಇನ್ನೆಂದೂ ಇದು ಸಿಗದು..ಒಂಥರಾ ಭಾವುಕ, ಭಾವನಾತ್ಮಕ ಕ್ಷಣವಿದು. ಯಾಕೆಂದರೆ ಸಮಯ ಎಂಬುದು ಅದ್ಭುತ ಮತ್ತು ಅಮೂಲ್ಯ ಈ ದೃಷ್ಟಿ ಯಿಂದ ನೋಡಿದರೆ ಪ್ರತೀ ವರ್ಷವೂ ಸರಿಯುವ ಕ್ಷಣ ಮನಸಿನಲ್ಲೇನೋ ನೋವು ತರುತ್ತವೆ. ಹಾಗಂತ ಜಾಸ್ತಿ ನೊಂದು ಕುಳಿತುಕೊಳ್ಳ ಬೇಕಾ ಗಿಲ್ಲ.

ಯಾಕೆಂದರೆ ನಮ್ಮ ಬದುಕಿನ ಅದ್ಯಾಯದ ಹೊಸ ಪುಟ ತೆರೆಯಲು,ಹೊಸ ಉಲ್ಲಾಸ,ಹೊಸ ಚೈತನ್ಯ,ಹೊಸ ವಿಶ್ವಾಸ ತುಂಬಲು ಹೊಸ ವರ್ಷ ಕಾದಿರುತ್ತದೆ. ಹಾಗೆಯೇ,ಈಗ ನಾವು ಹೊಸ ವರ್ಷದ ಸ್ವಾಗತದ ಸಂಭ್ರಮದಲ್ಲಿದ್ದೇವೆ.ಹೊಸ ವರ್ಷ ಬಂದೇ ಬಿಟ್ಟಿದೆ.

ಇದು ಬರೀ ಹೊಸ ಕ್ಯಾಲೆಂಡರ್ ತಂದು ಗೋಡೆಯಲ್ಲಿ ನೇತು ಹಾಕುವ ಹೊತ್ತಲ್ಲ.ಹೊಸ ದಿನಗಳನ್ನು ಸದ್ವಿನಿಯೋಗ ಮಾಡುವ ಕ್ಷಣ.

2022.. ಇದು ನಮ್ಮ ಬದುಕನ್ನು ಸಿಂಹಾವ ಲೋಕನ ಮಾಡುವ ಹೊತ್ತು. ಕಳೆದ ವರ್ಷ ಏನು ಮಾಡಿದ್ದೇವು, ಕಳೆದ ವರ್ಷದ ಅನುಭವಗ ಳೇನು? ಒಳ್ಳೆಯದೇನು, ಕೆಟ್ಟದೇನು ಎಂಬ ವಿಮರ್ಶೆಯ ಜೊತೆಗೆ ಮುಂದಿನ ವರ್ಷ ನಾವೇನು ಮಾಡಬೇಕು,ನಾವೇನು ಮಾಡ ಬಾರದು ಎಂಬುದನ್ನು ನಿರ್ಧರಿಸುವ ಕ್ಷಣಗಳಿವು.

ಯಾಕೆಂದರೆ, ಕಳೆದ ವರ್ಷದ ಅನುಭವ ಹಾಗೂ ಭವಿಷ್ಯದ ಗುರಿಯನ್ನು ನಿರ್ಧರಿಸಿ ಮುನ್ನಡೆದರೆ ಬದುಕು ಇನ್ನಷ್ಟು ಖುಷಿಯಾಗಿರುತ್ತದೆ.ಸದ್ಯ 2022ಕ್ಕೆ ವಿದಾಯ ಹೇಳಲೇಬೇಕಾಗಿದೆ. ಆದರೆ, ಈ ಒಂದು ವರ್ಷದಲ್ಲಿ ಪಡೆದ ಅನುಭವವನ್ನು ನಾವು ವಿಮರ್ಶೆಯ ತಕ್ಕಡಿಗೆ ಹಾಕಿ ಒಳಿತು ಕೆಡುಕುಗಳನ್ನು ತೂಗಬೇಕಾಗಿದೆ. ಕೆಟ್ಟದ್ದನ್ನು ಅಲ್ಲೇ ಬಿಟ್ಟು, ಒಳ್ಳೆಯದನ್ನು ಬದುಕಿನಲ್ಲಿ ಅನುಸರಿಸಿಕೊಂಡು ಹೋಗಬೇಕಾಗಿದೆ. ಹಾಗಂತ

ನಮ್ಮಲ್ಲಿ ತುಂಬಾ ಸಮಯವಿಲ್ಲ. ಸಮಯ ಕಣ್ಣ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಸರಿದಿರುತ್ತದೆ. ನಮ್ಮ ಬದುಕಿನಲ್ಲಿ ಪ್ರತಿಕ್ಷಣವೂ ಅಮೂಲ್ಯ. ಅದಕ್ಕೇ ಹೇಳುವುದು ಕಳೆದು ಹೋದ ಸಮಯ ಮತ್ತೆ ಸಿಗದು ಎಂದು.ಸಮಯ ಉತ್ಕೃಷ್ಟ. ಆದರೆ ಹೊಸ ವರ್ಷದ ಹೊಸ ಜೋಶ್‌ನಲ್ಲಿ ಒಳ್ಳೆಯ ನಿರ್ಧಾರಗಳನ್ನು ಕೈಗೊಂಡು ಮತ್ತೆ ಮರೆತರೆ ಫಲವಿಲ್ಲ. ಪ್ರತಿಕ್ಷಣವನ್ನು ಪ್ರೀತಿಸಬೇಕು. ಪ್ರತಿ ಕ್ಷಣವನ್ನೂ ಪ್ರೀತಿಸದೇ ಇದ್ದರೆ ಇವತ್ತಿಗೂ ನಾಳೆಗೂ ಏನೂ ವ್ಯತ್ಯಾಸ ಕಾಣದು

ಆಗ  ರಾತ್ರಿ 12 ಗಂಟೆ ಆಗಿದೆ, ತಾರೀಕಷ್ಟೇ ಬದಲಾಗಿದೆ. ಬಾಕಿ ಎಲ್ಲಾ ನಿನ್ನೆಯ ರೀತಿಯೇ ಇದೆ’ ಎಂದೆನಿಸಲು ಶುರುವಾಗುತ್ತದೆ. ಹೀಗಾಗ ಬಾರದು. ನಮಗೆ ಪ್ರತಿಕ್ಷಣ, ಪ್ರತಿದಿನವೂ ಹೊಸ ದಾಗಿರಬೇಕು. ಹೊಸ ಹುಮ್ಮಸ್ಸಿರಬೇಕು. ಹೊಸ ತನದ ಹುಡುಕಾಟ ಸಾಧಿಸುವ ಛಲದೊಂದಿಗೆ ನಮ್ಮ ದಿನದ ಪಯಣ ಸಾಗಬೇಕು.ಅದಕ್ಕೆ ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ಇರ ಬೇಕು. ನಮ್ಮತನವನ್ನು ನಾವು ಬೆಳೆಸಿಕೊಳ್ಳಬೇ ಕು. ಆಗ ಜೀವನದ ಸವಿಯೇ ಬೇರೆ… ಆ ಸವಿ ಈ ವರ್ಷ ನಿಮ್ಮದಾಗಲಿ…ಹೊಸ ವರ್ಷದ ಶುಭಾಶಯಗಳು…ಹೊಸ ತಿಂಗಳು, ಹೊಸ ಆರಂಭ, ಹೊಸ ಸಂಭ್ರಮ, ಹೊಸ ಗುರಿ, ಹೊಸ ಉಲ್ಲಾಸ, ಹೊಸ ಅಧ್ಯಾಯ… ಈ ವರ್ಷ ನಿಮ್ಮ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ…..2023 ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಸಡಗರ, ಯಶಸ್ಸು, ಸಮೃದ್ಧಿ ದಯಪಾಲಿಸಲಿ.

ಹೊಸ ವರ್ಷ ಎಲ್ಲರ ಬಾಳಿನಲ್ಲಿ ಹೊಸ ಹರುಷವನ್ನು ತರಲಿ.ಹೊಸ ವರ್ಷದ ಶುಭಾ ಶಯಗಳು.ಈ ವರ್ಷ ನಿಮ್ಮ ಕಷ್ಟ ದೂರವಾಗಲಿ, ಖುಷಿ ನೆಲೆಯಾಗಲಿ…ಸಮಯ ಅಮೂಲ್ಯ, ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ.ಜೀವನದ ಎಲ್ಲಾ ಖುಷಿ ನಿಮ್ಮದಾಗಲಿ….ನಿಮ್ಮ ಪ್ರತಿಯೊಂದು ಹೆಜ್ಜೆಯೂ ಸುಖಕರವಾಗಿರಲಿ. ಕನಸುಗಳು ಈಡೇರಲಿ, ಹೊಸ ವರ್ಷ ನಿಮ್ಮ ಜೀವನದಲ್ಲಿ ನವೋಲ್ಲಾಸ ತುಂಬಲಿ…2023 ನಿಮ್ಮ ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಹೊಸ ಚೈತನ್ಯ ತುಂಬಲಿ…

ಮಲ್ಲಿಕಾರ್ಜುನ ಚಿಕ್ಕಮಠ …..ಧಾರವಾಡ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.