7ನೇ ವೇತನ ಆಯೋಗ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಹೊರಬಿತ್ತು ಮತ್ತೊಂದು ಆದೇಶ – ಆಯೋಗಕ್ಕೆ ಮತ್ತಷ್ಟು ಸಿಬ್ಬಂದಿಗಳ ನಿಯೋಜನೆ ಕುರಿತ ಹೊರಬಿತ್ತು ಮತ್ತೊಂದು ಆದೇಶ

Suddi Sante Desk
7ನೇ ವೇತನ ಆಯೋಗ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಹೊರಬಿತ್ತು ಮತ್ತೊಂದು ಆದೇಶ – ಆಯೋಗಕ್ಕೆ ಮತ್ತಷ್ಟು  ಸಿಬ್ಬಂದಿಗಳ ನಿಯೋಜನೆ ಕುರಿತ ಹೊರಬಿತ್ತು ಮತ್ತೊಂದು ಆದೇಶ

ಬೆಂಗಳೂರು

7ನೇ ವೇತನ ಆಯೋಗದ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೆಲವೊಂದಿಷ್ಟು ಆದೇಶಗಳಾಗಿದ್ದು ಇತ್ತ ಸಮಿತಿ ಕೂಡಾ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದು ಇದರ ನಡುವೆ ರಾಜ್ಯ ಸರ್ಕಾರ ಸಮಿತಿಗೆ ಮತ್ತಷ್ಟು ಸಿಬ್ಬಂದಿ ಗಳನ್ನು ನೇಮಕ ಮಾಡಿ ಆದೇಶವನ್ನು ಮಾಡಿದೆ

 

ಹೌದು ಆಯೋಗಕ್ಕೆ ಅಧಿಕಾರಿ.ಸಿಬ್ಬಂದಿಗಳನ್ನು ನಿಯೋಜಿಸಿ ಆದೇಶವನ್ನು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಈಗಾಗಲೇ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಒಳಗೊಂಡ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿದೆ.7ನೇ ರಾಜ್ಯ ವೇತನ ಆಯೋಗಕ್ಕೆ 44 ಹುದ್ದೆಗಳನ್ನು ಆಯೋಗದ ಅವಧಿಯವರೆಗೆ ತಾತ್ಕಾಲಿಕವಾಗಿ ಸೃಜನೆ ಮಾಡಲಾಗಿದ್ದು,ಸದರಿ ಹುದ್ದೆಗಳನ್ನು ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆ ಯಿಂದ ಅಥವಾ ಸರ್ಕಾರದ ಇನ್ನಿತರೆ ಇಲಾಖೆ ಗಳಿಂದ ನಿಯೋಜನೆ ಮೂಲಕ ಭರ್ತಿ ಮಾಡಲು ಆದೇಶಿಸಲಾಗಿರುತ್ತದೆ.

ಇನ್ನೂ ಪ್ರಮುಖವಾಗಿ ಆಯೋಗದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ನುರಿತ ಅಧಿಕಾರಿ ಸಿಬ್ಬಂದಿಗಳ ಅಗತ್ಯತೆ ಇರುವುದರಿಂದ ಕರ್ನಾಟಕ ಸರ್ಕಾರ ಸಚಿವಾಲಯದ ವಿವಿಧ ವೃಂದಗಳ ನುರಿತ ಹಾಗೂ ದಕ್ಷ ಅಧಿಕಾರಿ ನೌಕರ ರನ್ನು ನೇಮಕ ಮಾಡಿದೆ.ಈ ಹಿಂದೆ ನೇಮಕ ಮಾಡಲಾಗಿದ್ದು ನೌಕರರಲ್ಲಿ ಸಧ್ಯ  24 ಅಧಿಕಾರಿ ನೌಕರರುಗಳ ಪೈಕಿ ಈ ಕೆಳಕಂಡ 4 ನೌಕರರುಗಳ ನಿಯೋಜನಾ ಆದೇಶವನ್ನು ಆಡಳಿತಾತ್ಮಕ ಹಿತ ದೃಷ್ಟಿಯಿಂದ ರದ್ದುಗೊಳಿಸಿ.

ಹಾಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಲ್ಲಿಯೇ ಮುಂದುವರೆಸುವಂತೆ ಸೂಚನೆ ನೀಡಲಾ ಗಿದೆ. ಬದಲಿಗೆ ಕರ್ನಾಟಕ ಸರ್ಕಾರ ಸಚಿವಾಲ ಯದ ಗ್ರೂಪ್-ಸಿ ವೃಂದದ ಈ ಕೆಳಕಂಡ 4 ನೌಕರರುಗಳನ್ನು ನಿಯೋಜನೆ ಮೇರೆಗೆ ತಕ್ಷಣ ದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ 7ನೇ ರಾಜ್ಯ ವೇತನ ಆಯೋಗಕ್ಕೆ ನಿಯೋಜಿಸಿದೆ.

ಹೊಸದಾಗಿ ನಿಯೋಜನೆಗೊಂಡ ಅಧಿಕಾರಿಗಳು ಈ ಕೆಳಗಿನಂತೆ ಇದ್ದಾರೆ.

ಗಂಗಪ್ಪ ಹಾನಗಲ್ (ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ (ಎಸ್‌-3) ಹಿರಿಯ ಸಹಾಯಕ ಹುದ್ದೆ.ಕಿರಣ್ ಕೋಣಿ (ಸಿ. ಆ. ಸು. ಇ. (ರಜಾ ಮೀಸಲಾತಿ). ಶೀಘ್ರಲಿಪಿಗಾರ ಹುದ್ದೆ.ವಿನೋದ್ ಟಿ. ಎಂ. ನಗರಾಭಿವೃದ್ಧಿ ಇಲಾಖೆ (ಬೆಂಗಳೂರು-1). ದತ್ತಾಂಶ ನಮೂದು ಸಹಾಯಕರು ಸುರೇಂದ್ರ ಜಿ. ಲೋಕೋಪಯೋಗಿ ಇಲಾಖೆ. ಗ್ರೂಪ್-ಡಿ (ಹೊರಗುತ್ತಿಗೆ ನೌಕರ)

ಇನ್ನೂ ಇತ್ತ ಸಮಿತಿ ಕೂಡಾ ಕೆಲವೊಂದಿಷ್ಟು ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದು ಈ ಸಿಬ್ಬಂದಿಗಳ ನೇಮಕಾತಿಯಿಂದಾಗಿ ಮತ್ತಷ್ಟು ಕಾರ್ಯ ಚಟುವಟಿಕೆಗಳು ಚುರುಕುಗೊಳ್ಳಲಿವೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.