ರಾಜ್ಯದ 221 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪೈನಲ್ – ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟ ಮಾಡಿದ ರಾಜ್ಯ ಚುನಾವಣಾ ಆಯೋಗ…..

Suddi Sante Desk
ರಾಜ್ಯದ 221 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪೈನಲ್ – ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟ ಮಾಡಿದ ರಾಜ್ಯ ಚುನಾವಣಾ ಆಯೋಗ…..

ಬೆಂಗಳೂರು –

ಇನ್ನೇನು ರಾಜ್ಯದ ವಿಧಾನ ಸಭಾ ಚುನಾವಣೆಗೆ ಮಹೂರ್ತ ಸಮೀಪಿಸುತ್ತಿದ್ದು ಯಾವ ಸಮಯ ದಲ್ಲಿ ದಿನಾಂಕ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಜನರು ಎಲ್ಲಾ ಪಕ್ಷದವರು ಇದ್ದಾರೆ.ಹೀಗಿರುವಾಗ ಇವೇಲ್ಲದರ ನಡುವೆ ಸಧ್ಯ ರಾಜ್ಯ ಚುನಾವಣಾ ಆಯೋಗವು ರಾಜ್ಯದ 221 ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಯನ್ನು ಪೈನಲ್ ಮಾಡಿ ಬಿಡುಗಡೆ ಮಾಡಿದೆ.

ಹೌದು ರಾಜ್ಯದ ಒಟ್ಟು ಮತದಾರರ ಸಂಖ್ಯೆ 5.05 ಕೋಟಿ ಆಗಿದ್ದಿ ಪರಿಷ್ಕ್ರರಣೆಯನ್ನು ಮಾಡಿರುವ ರಾಜ್ಯ ಚುನಾವಣಾ ಆಯೋಗವು ಇದನ್ನು ಹೊಸದಾಗಿ ಬಿಡುಗಡೆಯನ್ನು ಮಾಡಿದೆ. ಮತದಾ ರರ ಗೌಪ್ಯ ಮಾಹಿತಿಯನ್ನು ಅಕ್ರಮವಾಗಿ ಸಂಗ್ರ ಹಿಸಿದ ಆರೋಪ ಕೇಳಿ ಬಂದು ವಿಚಾರಣಾ ಹಂತ ದಲ್ಲಿರುವ ಬೆಂಗಳೂರು ನಗರ ವ್ಯಾಪ್ತಿಯ ಶಿವಾಜಿ ನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಬಾಕಿ ಇಟ್ಟುಕೊಂಡಿರುವ ಆಯೋಗವು ತಿದ್ದುಪಡಿ ಯನ್ನು ಮಾಡಿದ್ದು ಈ ಮೂರು ಕ್ಷೇತ್ರಗಳ ಪಟ್ಟಿ ಯನ್ನು ಜನೆವರಿ15 ರಂದು ಪ್ರಕಟಿಸಲು ಆಯೋ ಗವು ತಿರ್ಮಾನವನ್ನು ಕೈಗೊಂಡಿದ್ದು

ಸಧ್ಯ ರಾಜ್ಯದ 221 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಯೊಂದಿಗೆ ಬಿಡಗಡೆಯಾಗಿದ್ದು 3 ಬಾಕಿ ಉಳಿದಿವೆ.ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಮಾತನಾಡಿ ಸಧ್ಯ 221 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಪೈನಲ್ ಮಾಡಿ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಈ ಹಿಂದೆ ನವಂಬರ್ 9 ರಂದು ಪ್ರಕಟಿಸಲಾಗಿತ್ತು ಕರಡು ಪಟ್ಟಿಯಲ್ಲಿ 221 ವಿಧಾನಸಭಾ ಕ್ಷೇತ್ರಗಳಲ್ಲಿ 4.99 ಕೋಟಿ ಮತದಾರರು ಇದ್ದರು.

ನ.9ರಿಂದ ಡಿ.8ರವರೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ನ.11 ಮತ್ತು 20 ಹಾಗೂ ಡಿ.3-4 ಈ ದಿನಗಳಂದು ವಿಶೇಷ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಡಿ.26ರಂದು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾ ಯಿತು ಜ.5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿ ಸಲಾಗಿದೆ.ಈ ಅವಧಿಯಲ್ಲಿ 18.32 ಲಕ್ಷ ಅರ್ಜಿ ಗಳನ್ನು ಸ್ವೀಕರಿಸಲಾಗಿತ್ತು.12.31 ಲಕ್ಷ ಹೊಸ ಸೇರ್ಪಡೆಗಳು ಆಗಿದ್ದು, 6.18 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಕರಡು ಮತದಾರರ ಪಟ್ಟಿ ಯಿಂದ ಅಂತಿಮ ಮತದಾರರ ಪಟ್ಟಿಯಲ್ಲಿ ಸರಾಸರಿ 6.13 ಲಕ್ಷ ಸೇರ್ಪಡೆ ಆಗಿದೆ ಎಂದು ಮೀನಾ ಮಾಹಿತಿ ನೀಡಿದರು.

ಇನ್ನೂ ಎಲ್ಲಾ 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಆಯಾ ಜಿಲ್ಲಾಧಿ ಕಾರಿಗಳ ಕಚೇರಿ, ಮತದಾರರ ನೋಂದಣಾ ಧಿಕಾರಿಗಳ ಕಚೇರಿ,ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವ್ಯಾಪ್ತಿ ಯಲ್ಲಿ ಬರುವ ಎಲ್ಲಾ ಮತಗಟ್ಟೆಗಳಲ್ಲಿ ಸಾರ್ವ ಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಪ್ರತಿ ಯೊಬ್ಬರು ತಮ್ಮ ಹೆಸರು ಮತದಾರರ ಪಟ್ಟಿ ಯಲ್ಲಿ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು.

ಹೆಸರು ಬಿಟ್ಟು ಹೋಗಿದ್ದರೆ, ತಪ್ಪಾಗಿದ್ದರೆ ಅಥವಾ ಇತರ ಬದಲಾವಣೆಗಳಿದ್ದರೆ ಆನ್‌ ಲೈನ್‌ ನಲ್ಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳಬೇಕು. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದಿಂದ 10 ದಿನ ಮುಂಚೆಯ ತನಕ ಸೇರ್ಪಡೆ,ತಿದ್ದುಪಡಿಗಳಿಗೆ ಅವಕಾಶವಿರುತ್ತದೆ ಎಂದು ಮನೋಜ್‌ ಕುಮಾರ್‌ ಮೀನಾ ಮನವಿ ಮಾಡಿದರು.

ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಆರ್‌. ವೆಂಕಟೇಶ್‌ ಕುಮಾರ್‌,ಪಿ.ರಾಜೇಂದ್ರ ಚೋಳನ್‌, ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್‌. ಯೋಗೇಶ್ವರ್‌,ನಿರ್ಗಮಿತ ಜಂಟಿ ಮುಖ್ಯ ಚುನಾವಣಾಧಿಕಾರಿ ಶಂಭು ಭಟ್‌ ಮತ್ತಿತರರು ಇದ್ದರು

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.