ಶಿಕ್ಷಕರ ವರ್ಗಾವಣೆಗೆ ಮಹತ್ವದ ನಿರ್ಧಾರ ಕೈಗೊಂಡ ಇಲಾಖೆಯ ಆಯುಕ್ತರು ಮೂರು ವರ್ಷಗಳ ಸೇವೆ ಸಲ್ಲಿಸಿದವರ‌ನ್ನು ವರ್ಗಾವಣೆ ಗೆ ಪರಿಗಣಿಸಲು ಸೂಚನೆ ನೀಡಿದ ಆಯುಕ್ತರು

Suddi Sante Desk
ಶಿಕ್ಷಕರ ವರ್ಗಾವಣೆಗೆ ಮಹತ್ವದ ನಿರ್ಧಾರ ಕೈಗೊಂಡ ಇಲಾಖೆಯ ಆಯುಕ್ತರು ಮೂರು ವರ್ಷಗಳ ಸೇವೆ ಸಲ್ಲಿಸಿದವರ‌ನ್ನು ವರ್ಗಾವಣೆ ಗೆ ಪರಿಗಣಿಸಲು ಸೂಚನೆ ನೀಡಿದ ಆಯುಕ್ತರು

ಬೆಂಗಳೂರು

ಶಿಕ್ಷಕರ ವರ್ಗಾವಣೆ ಇಲಾಖೆಯ ಆಯುಕ್ತರು ಮಹತ್ವದ ನಿರ್ಧಾರ ವನ್ನು ಕೈಗೊಂಡಿದ್ದಾರೆ ಹೌದು ಮೂರು ವರ್ಷ ಸೇವೆ ಸಲ್ಲಿಸಿದವರನ್ನು ವರ್ಗಾವಣೆ ಯಲ್ಲಿ ಪರಿಗಣನೆಗೆ ಮಾಡಲು ಇಲಾಖೆಯ ಆಯುಕ್ತರು ತೀರ್ಮಾನ ವನ್ನು ಕೈಗೊಂಡು ನಿರ್ಧಾರ ತೆಗೆದುಕೊಂಡಿದ್ದಾರೆ.

ಹೌದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಘಟಕ,ವಿಭಾಗದ ಹೊರಗೆ ಪರಸ್ಪರ ವರ್ಗಾವಣೆಗೆ ಸೇವಾವಧಿ ವೃಂದದಲ್ಲಿ ಕನಿಷ್ಠ 5 ವರ್ಷಗಳ ಸೇವೆ ಪೂರ್ಣಗೊಂಡಿರ ಬೇಕು ಜೊತೆಗೆ ಕರ್ತವ್ಯನಿರತ ಸ್ಥಳದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವ ಪ್ರಕರಣಗಳನ್ನು ಮಾತ್ರ ಪರಿಗಣಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯಕ್ತರು ನಿರ್ದೇಶನ ನೀಡಿದ್ದಾರೆ.

2022-23ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸಂಬಂಧ ವರ್ಗಾವಣ ಪ್ರಾಧಿಕಾರಗಳು ಕೆಲವು ಅಂಶಗಳ ಬಗ್ಗೆ ಮಾರ್ಗದರ್ಶನ ಕೋರಿದ ಹಿನ್ನೆಲೆಯಲ್ಲಿ ಆಯುಕ್ತರು ಈ ಮಾಹಿತಿ ನೀಡಿ ದ್ದಾರೆ.ಸೇವಾವಧಿಯಲ್ಲಿ ಒಮ್ಮೆ ಆದ್ಯತೆಯ ಮೇಲೆ ವರ್ಗಾವಣೆ ಪಡೆಯಬಹುದು ಇದು ಹೆಚ್ಚುವರಿ ವರ್ಗಾವಣೆಗೆ ಅನ್ವಯವಾಗದು ಎಂದಿದ್ದಾರೆ.

ಪತಿ-ಪತ್ನಿ ಪ್ರಕರಣದಲ್ಲಿ ಒಬ್ಬರು ಒಂದು ಜಿಲ್ಲೆ ಯಿಂದ ಹೊರಗೆ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅಂಥವರಿಗೆ ಹೆಚ್ಚುವರಿಯಲ್ಲಿ ಆದ್ಯತೆ ಕೊಡಬ ಹುದು.ಜಿಪಿಟಿ ಹಾಗೂ ಪಿಎಸ್‌ಟಿ ಶಿಕ್ಷಕರಿಗೆ ಅವರ ನೇಮಕ ಆದೇಶದಲ್ಲಿ 5 ವರ್ಷ ಅಥವಾ 10 ವರ್ಷ ಅದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿ ಸುವ ಷರತ್ತು ವಿಧಿಸಿದ್ದಲ್ಲಿ ನೇಮಕ ಆದೇಶದಲ್ಲಿ ರುವ ಷರತ್ತಿನ ಅನ್ವಯ ಪರಿಗಣಿಸಬೇಕು ಎಂಬ ಸೂಚನೆ ಯನ್ನು ನೀಡಿದ್ದಾರೆ.

ಸೇವಾ ಹಿರಿತನದ ಮೇಲೆ ಪರಿಗಣಿಸುವುದಾದರೆ ಶಿಕ್ಷಕರು ಒಂದೇ ದಿನ ಕರ್ತವ್ಯಕ್ಕೆ ಹಾಜರಾಗಿದ್ದಲ್ಲಿ ಜನ್ಮ ದಿನಾಂಕವನ್ನು ಪರಿಗಣಿಸಿ ಹೆಚ್ಚುವರಿ ಶಿಕ್ಷಕ ರನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.