ಅಕ್ರಮ ವಿದ್ಯುತ್ ಸಂಪರ್ಕ ಪಡೆದವರಿಗೆ ಶಾಕ್ ನೀಡಿದ ಹೆಸ್ಕಾಂ ಜಾಗೃತ ದಳ – ಕಾರ್ಯಾಚರಣೆ ನಡೆಸಿ ಅಕ್ರಮ ವಿದ್ಯುತ್ ಸಂಪರ್ಕ ಪತ್ತೆ ಮಾಡಿದ ಟೀಮ್ ದೂರು ದಾಖಲು

Suddi Sante Desk
ಅಕ್ರಮ ವಿದ್ಯುತ್ ಸಂಪರ್ಕ ಪಡೆದವರಿಗೆ ಶಾಕ್ ನೀಡಿದ ಹೆಸ್ಕಾಂ ಜಾಗೃತ ದಳ – ಕಾರ್ಯಾಚರಣೆ ನಡೆಸಿ ಅಕ್ರಮ ವಿದ್ಯುತ್ ಸಂಪರ್ಕ ಪತ್ತೆ ಮಾಡಿದ ಟೀಮ್ ದೂರು ದಾಖಲು

ಧಾರವಾಡ

ಹೆಸ್ಕಾಂ ಜಾಗೃತ ದಳದ ಪೊಲೀಸ್ ಅಧಿಕ್ಷಕರಾದ ಚನ್ನಬಸವಣ್ಣ ಎಸ್.ಎಲ್. ಎಪಿಎ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ, ಗದಗ, ಹಾವೇರಿ, ಕಾರವಾರ, ಬಾಗಲ ಕೋಟ, ವಿಜಯಪುರ, ಜಾಗೃತ ದಳದ ಪೊಲೀಸ್ ಠಾಣೆಗಳ ಪಿಐ, ಎಇಇ, ಎಇ, ಪಿಎಸ್‍ಐ ಮತ್ತು ಸಿಬ್ಬಂದಿಗಳು 2021-22 ನೇ ವರ್ಷದಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದ, ಬೈಪಾಸ್ ಮಾಡಿ ಕೊಂಡ ಮತ್ತು ಮೀಟರ್ ಟ್ಯಾಂಪರಿಂಗ್ ಮಾಡಿ ಕೊಂಡ ಜನರ ಮೇಲೆ ವಿಶೇಷ ಕಾರ್ಯಚರಣೆ ನಡೆಸಿ ಹಲವಾರು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ

ಅಕ್ರಮ ವಿದ್ಯುತ್ ಸಂಪರ್ಕ ಪಡೆಯಲು ಬಳಸಿದ ವಿದ್ಯುತ್ಉಪಕರಣಗಳನ್ನು ಜಾಗೃತದಳದ ತಂಡ ವಶಪಡಿಸಿಕೊಂಡು11 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ವಿದ್ಯುತ್ ಕಂಬದಿಂದ ನೇರವಾಗಿ ಮನೆಗೆ ಸಂಪರ್ಕ ಪಡೆದಿರುವುದು ಬೈಪಾಸ್ ಸಂಪರ್ಕ ಮಾಡಿಕೊಂಡಿರುವುದು,ಮಿಟರ್ ಟ್ಯಾಂಪರಿಂಗ್ ಮಾಡಿಕೊಂಡಿರುವದು,ವಿದ್ಯುತ್ ಶುಲ್ಕ ಪಾವತಿ ಸದೆ ಸಂಪರ್ಕ ಕಡಿತವಾಗಿದ್ದರೂ ಸಹ ಅಕ್ರಮ ವಾಗಿ ಸಂಪರ್ಕ ಪಡೆದಿರುವುದು ಹೀಗೆ ಹಲವಾರು ರೀತಿಯಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಪ್ರಕರಣ ಗಳು ಪತ್ತೆಯಾಗಿವೆ.

ಜಾಗೃತ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳಿಂದ ಹೆಚ್ಚು ವಿದ್ಯುತ್ ಪೋಲಾಗುತ್ತಿರುವ ಹಳ್ಳಿ ಗಳಿಗೆ ಬೇಟಿ ನೀಡಿ ವಿದ್ಯುತ್ ಕಳ್ಳತನ ಹಾಗೂ ಮೂಡಿಸಲಾಗುತ್ತಿರುತ್ತದೆ. ದುರುಪಯೋಗದ ಬಗ್ಗೆ ಜನಜಾಗೃತಿ ಸಭೆಗಳನ್ನು ನಡೆಸಿ ಜನರಲ್ಲಿ ಅರಿವು ಮೂಡಿಸಲಾಗುತ್ತದೆ.

ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಿದ್ಯುತ್ ಉಪಕರಣಗಳನ್ನು ಪೋಲೀಸ್ ಆಧೀಕ್ಷಕರಾದ ಚನ್ನಬಸವಣ್ಣ, ಎಸ್.ಎಲ್. ಎ.ಎಸ್ ವರ ನೇತೃತ್ವದಲ್ಲಿ ಪ್ರದರ್ಶಿಸಲಾಯಿತು. ಈ ವೇಳೆಯಲ್ಲಿ ಎಲ್ಲ ಎಂಟು ಜಾಗೃತದಳದ ಪೋಲೀಸ್ ಠಾಣೆಯ ಪಿ.ಐ ಹಾಗೂ ಎ.ಇ.ಇ., ರವರು ಮತ್ತು ಪೋಲೀಸ್ ಸಿಬ್ಬಂದಿ ಹಾಗೂ ಕಛೇರಿ ಸಿಬ್ಬಂದಿರವರು ಹಾಜರಿದ್ದರು ಅವರ ಈ ಕಾರ್ಯಕ್ಕೆ ಮಾನ್ಯ ಪೋಲೀಸ್ ಅಧೀಕ್ಷಕರು, ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.