ವರಕವಿ ದ ರಾ ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ ಪ್ರಕಟ – ಪ್ರಶಸ್ತಿಗೆ ಭಾಜನರಾದ ಇಬ್ಬರು ಗಣ್ಯ ಸಾಹಿತಿಗಳು…..

Suddi Sante Desk
ವರಕವಿ ದ ರಾ ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ ಪ್ರಕಟ – ಪ್ರಶಸ್ತಿಗೆ ಭಾಜನರಾದ ಇಬ್ಬರು ಗಣ್ಯ ಸಾಹಿತಿಗಳು…..

ಧಾರವಾಡ

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಕವಿತ್ವದ ಹಿರಿಯ ಸಾಹಿತಿ ಡಾ. ಜಿನದತ್ತ ದೇಸಾಯಿ ಮತ್ತು ಹಿರಿಯ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅವರಿಗೆ ಪ್ರಸಕ್ತ ಸಾಲಿನ ಅಂಬಿಕಾತನದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ*

ಹೌದು ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜ.31 ರಂದು ವರಕವಿ ಡಾ.ದ.ರಾ.ಬೇಂದ್ರೆ ಅವರ 127 ನೇ ಹುಟ್ಟು ಹಬ್ಬದ ನಿಮಿತ್ಯ ಪ್ರತಿ ವರ್ಷದಂತೆ ಕನ್ನಡ ಸಾಹಿತ್ಯ ಕ್ಷೇತ್ರದ ಇಬ್ಬರು ದಿಗ್ಗಜರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ತಿಳಿಸಿದರು.

2023ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ನಿವೃತ್ತ ನ್ಯಾಯಾಧೀ ಶರಾದ ಬೆಳಗಾವಿಯ ಕವಿ ಡಾ. ಜೀನದತ್ತ ದೇಸಾಯಿ ಹಾಗೂ ಕನ್ನಡದ ಹಿರಿಯ ವಿಮರ್ಶಕ ಶಿವಮೊಗ್ಗದ ಡಾ. ರಾಜೇಂದ್ರ ಚೆನ್ನಿ ಅವರಿಗೆ ನೀಡಲಾಗುತ್ತಿದೆ. ರೂ.1 ಲಕ್ಷ ಮೊತ್ತದ ಪ್ರಶಸ್ತಿ ಯನ್ನು ಇಬ್ಬರು ಮಹನೀಯರಿಗೆ ಹಂಚಿಕೆ ಮಾಡಲಾಗಿದೆ.

ವರಕವಿ ಡಾ: ದ.ರಾ. ಬೇಂದ್ರೆ ಅವರ ಜನ್ಮದಿನ ವಾದ ಜ.31 ರಂದು ಸಂಜೆ 4-30 ಗಂಟೆಗೆ ಬೇಂದ್ರೆ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾ ಗುವುದು.ಪ್ರಶಸ್ತಿಯು ತಲಾ ರೂ.50 ಸಾವಿರ ನಗದು,ಪ್ರಶಸ್ತಿ ಫಲಕ, ಫಲಪುಷ್ಪದೊಂದಿಗೆ ನೀಡಿ ಗೌರವಿಸಲಾಗುವುದೆಂದು ಟ್ರಸ್ಟ್ ಅಧ್ಯಕ್ಷ ಡಾ ಡಿ.ಎಂ. ಹಿರೇಮಠ ಹೇಳಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ: ಡಿ.ಎಂ. ಹಿರೇಮಠ ವಹಿಸಲಿದ್ದು, ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ರಾದ ಹೆಚ್. ವಿಶ್ವನಾಥ ಅವರು ಅಂಬಿಕಾತನ ಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.ಶಾಸಕ ಅರವಿಂದ ಬೆಲ್ಲದ,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿನಿರ್ದೇಶಕ ಬಸವರಾಜ ಹೂಗಾರ ಮುಖ್ಯ ಅತಿಥಿಗಳಾ ಗಿದ್ದಾರೆ

ಪ್ರಶಸ್ತಿ ಪುರಸ್ಕøತರಾದ ನಿವೃತ್ತ ನ್ಯಾಯಾಧೀ ಶರಾದ ಬೆಳಗಾವಿಯ ಕವಿ ಡಾ. ಜೀನದತ್ತ ದೇಸಾಯಿ ಅವರ ಕುರಿತು ಧಾರವಾಡದ ಹಿರಿಯ ಸಾಹಿತಿ ಡಾ.ಶಾಂತಾ ಇಮ್ರಾಪೂರ ಹಾಗೂ ಡಾ: ರಾಜೇಂದ್ರ ಚೆನ್ನಿ ಅವರ ಕುರಿತು ಕುಮಟಾದ ಸಾಹಿತಿ ಡಾ: ಎಂ.ಜಿ. ಹೆಗಡೆ ಅವರು ಅಭಿನಂದ ನಾಪರ ನುಡಿಗಳನ್ನಾಡಲಿದ್ದಾರೆ.ಇದೇ ಸಂದರ್ಭ ದಲ್ಲಿ ಶಿರಸಿಯ ಪ್ರೊ ಎಚ್.ಆರ್. ಅಮರನಾಥ ಅವರು ಸಂಪಾದಿಸಿರುವ ಪ್ರೊ ಬೇಂದ್ರ ಮಾಸ್ತ ರರ ಅಮರವಾಣಿ ಕೈಪಿಡಿಯು ಬಿಡುಗಡೆಗೊ ಳ್ಳಲಿದೆ ಎಂದು ಡಾ.ಡಿ.ಎಂ. ಹಿರೇಮಠ ತಿಳಿಸಿದರು

ಟ್ರಸ್ಟ್ ಸದಸ್ಯರಾದ ಹಾಗೂ ಕವಿವಿ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ರಾದ ಡಾ.ಎನ್.ವೈ. ಮಟ್ಟಿಹಾಳ ಅವರು ಮಾತನಾಡಿ ಪ್ರತಿ ವರ್ಷದಂತೆ ವರಕವಿ ಬೇಂದ್ರೆ ಅವರ ಜನ್ಮದಿನದ ನಿಮಿತ್ಯ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋ ಜಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಅಂಬಿಕಾತ ನಯದತ್ತ ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಮಿತಿ ಯನ್ನು ಹಿರಿಯ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಾ.ಶಾಂತಿನಾಥ ದಿಬ್ಬದ ಮತ್ತು ಕೃಷ್ಣಮೂರ್ತಿ ಬಿಳಿಗೆರೆ ಅವರ ಸದಸ್ಯತ್ವದ ಸಮಿತಿ ರಚಿಸ ಲಾಗಿತ್ತು.ಆಯ್ಕೆ ಸಮಿತಿಯು ಅಂತಿಮವಾಗಿ ಇಬ್ಬರು ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿ ಟ್ರಸ್ಟ್‍ಗೆ ಶಿಫಾರಸ್ಸು ಮಾಡಿತ್ತು. ಧಾರವಾಡ ಜಿಲ್ಲೆಯವರಾದ ಡಾ. ಜೀನದತ್ತ ದೇಸಾಯಿ ಅವರು ನ್ಯಾಯಾಂಗ ಸೇವೆಯಲ್ಲಿದ್ದರೂ ಕನ್ನಡದ ಬಗ್ಗೆ ಅತೀವ ಪ್ರೀತಿ, ಪ್ರೇಮದಿಂದ ಅನೇಕ ಕವಿತೆ ಗಳನ್ನು ಬರೆದಿದ್ದಾರೆ.

ಚುಟುಕುಗಳನ್ನು ರಚಿಸಿದ್ದಾರೆ.ಈಗಾಗಲೇ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರಾಗಿ ಗೌರವ ಸ್ವೀಕರಿಸಿರುವ ಡಾ.ಜೀನದತ್ತ ದೇಸಾಯಿ ಅವರಿಗೆ ಪ್ರಸಕ್ತ ಸಾಲಿನ ಪ್ರಶಸ್ತಿ ಯನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಇನ್ನೊರ್ವ ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರು ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಮುಂಚೂಣಿಯಲ್ಲಿರುವ ವಿಮರ್ಶಕರಾಗಿದ್ದಾರೆ.

ಅವರ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಡಾ.ದ.ರಾ. ಬೇಂದ್ರೆ ಟ್ರಸ್ಟ್‍ದಿಂದ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಡಾ.ದ.ರಾ. ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯ ದರ್ಶಿಯಾಗಿರುವ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.