ಶೇ 31 ತುಟ್ಟಿಭತ್ಯೆ ವಿಲೀನ ಶೇ 40 ಫಿಟ್‌ಮೆಂಟ್‌ ನೀಡುವಂತೆ ಬೇಡಿಕೆ – 7ನೇ ವೇತನ ಆಯೋಗದ ಮುಂದೆ ಹೊಸದೊಂದು ಬೇಡಿಕೆ ಇಟ್ಟ ರಾಜ್ಯ ಸರ್ಕಾರಿ ನೌಕರರ ಸಂಘಟನೆ

Suddi Sante Desk
ಶೇ 31 ತುಟ್ಟಿಭತ್ಯೆ ವಿಲೀನ ಶೇ 40 ಫಿಟ್‌ಮೆಂಟ್‌ ನೀಡುವಂತೆ ಬೇಡಿಕೆ – 7ನೇ ವೇತನ ಆಯೋಗದ ಮುಂದೆ ಹೊಸದೊಂದು ಬೇಡಿಕೆ ಇಟ್ಟ ರಾಜ್ಯ ಸರ್ಕಾರಿ ನೌಕರರ ಸಂಘಟನೆ

ಬೆಂಗಳೂರು

ಸಮಾನ ಕೆಲಸಕ್ಕೆ ಸಮಾನ ವೇತನ ಕಚೇರಿ ವೇಳೆ ಹೆಚ್ಚಿಸಿ ಕರ್ತವ್ಯದ ದಿನಗಳನ್ನು ಕಡಿಮೆ ಮಾಡು ವುದೂ ಸೇರಿ ಹಲವು ಸಲಹೆಗಳನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ 7 ನೇ ವೇತನ ಆಯೋಗಕ್ಕೆ ನೀಡಿದೆ.ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಆಯೋಗದ ಅಧ್ಯಕ್ಷ ಸುಧಾಕರ್‌ ರಾವ್‌ ಅವರನ್ನು ಭೇಟಿ ಮಾಡಿ ಆಯೋಗ ಬಿಡುಗಡೆ ಮಾಡಿದ್ದ ಪ್ರಶ್ನಾವಳಿಗಳಿಗೆ ಸಲಹೆಗಳ ರೂಪದಲ್ಲಿ ಉತ್ತರ ನೀಡಿ ಹೊಸದಾಗಿ ಕೆಲವೊಂದಿಷ್ಟು ಪ್ರಮುಖ ಸಲಹೆಗಳೊಂದಿಗೆ ಬೇಡಿಕೆ ಗಳನ್ನು ಇಟ್ಟಿದ್ದಾರೆ.

6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಚಾಲ್ತಿಯಲ್ಲಿರುವ ಶೇ 31 ರಷ್ಟು ತುಟ್ಟಿ ಭತ್ಯೆ ಯನ್ನು ವಿಲೀನಗೊಳಿಸಿ ಶೇ 40 ರಷ್ಟು ಫಿಟ್‌ ಮೆಂಟ್‌ ಸೌಲಭ್ಯವನ್ನು 01.07.2022 ರಿಂದ ಅನ್ವಯವಾಗುವಂತೆ ಜಾರಿ ಮಾಡಬೇಕು ಎಂದು ರಾಜ್ಯದ ಸರ್ಕಾರಿ ನೌಕರರ ಪರವಾಗಿ ಸಂಘಟನೆ ಆಯೋಗದ ಮುಂದೆ ಬೇಡಿಕೆ ಇಟ್ಟಿದೆ.

ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು, ಆಡಳಿತದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿಸಬೇಕು ನೌಕರರಲ್ಲಿ ದಕ್ಷತೆ ಮತ್ತು ನೈಪುಣ್ಯ ಕ್ರಿಯಾಶೀಲತೆ ಹೆಚ್ಚಿಸಲು ತರಬೇತಿ ನೀಡಬೇಕು.ಈಗ ಇರುವ 25 ಮಾಸ್ಟರ್‌ ವೇತನ ಶ್ರೇಣಿ ಮತ್ತು 92 ವೇತನ ಹಂತಗಳನ್ನು ಮುಂದುವರೆಸುವುದು. ಹೊಸ ವೇತನ ಶ್ರೇಣಿಗಳನ್ನು 2022 ನೇ ಸಾಲಿನ ಬೆಲೆ ಸೂಚ್ಯಂಕದ 12 ತಿಂಗಳ ಸರಾಸರಿ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿ ಪಡಿಸಬೇಕು ಎಂದು ಒತ್ತಾಯವನ್ನು ಮಾಡಿದೆ.

 

 

ಒಬ್ಬ ಸರ್ಕಾರಿ ನೌಕರನಿಗೆ ಸೇವಾ ವಧಿಯಲ್ಲಿ ಕನಿಷ್ಠ 3 ರಿಂದ 4 ಮುಂಬಡ್ತಿ ಅವಕಾಶಗಳು ಲಭ್ಯವಾಗುವಂತೆ ಶಿಫಾರಸು ಮಾಡುವುದು. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಯಲ್ಲಿ ಲಭ್ಯವಿರುವ 2021ರ ಜನಸಂಖ್ಯೆಯ ಮಾಹಿತಿ ಯನ್ನು ಆಧರಿಸಿ ನಗರ ಮತ್ತು ಪಟ್ಟಣ ಪ್ರದೇಶ ಗಳನ್ನು ಪುನರ್‌ವರ್ಗೀಕರಿಸುವುದು,ಬಿಬಿಎಂಪಿ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಗಡಿ ವ್ಯಾಪ್ತಿಗೆ ವಿಸ್ತರಿಸುವಂತೆ ಒತ್ತಾಯವನ್ನು ಮಾಡಿದೆ.

ಹೀಗಾಗಿ ಈ ಎಲ್ಲಾ ವಿಚಾರ ಗಳ ಕುರಿತು ಸಧ್ಯ ರಾಜ್ಯಾಧ್ಯಕ್ಷ ಷಡಾಕ್ಷರಿ ನೇತೃತ್ವದಲ್ಲಿನ ಟೀಮ್ ವರದಿಯೊಂದಿಗೆ ಬೇಡಿಕೆ ಗಳ ಪಟ್ಟಿಯನ್ನು ನೀಡಿದ್ದು ಈ ಒಂದು ಬೇಡಿಕೆ ಗಳ‌ ಕುರಿತು ಆಯೋಗ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎಂಬೊದನ್ನು ಕಾದು ನೋಡಬೇಕಿದೆ‌.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.