ಆಟೋ ಚಾಲಕರ ಕಷ್ಟವನ್ನು ಆಲಿಸಿ ಸಮಸ್ಯೆಗಳಿಗೆ ಧ್ವನಿಯಾದ ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ – ಸಮಸ್ಯೆ ಆಲಿಸಿ ಬರುವ ದಿನಗಳಲ್ಲಿ ನಿಮ್ಮ ಧ್ವನಿಯಾಗಿ ಹೋರಾಟ ಮಾಡುವ ಭರವಸೆ ನೀಡಿದ ರಜತ್ ಉಳ್ಳಾಗಡ್ಡಿಮಠ

Suddi Sante Desk
ಆಟೋ ಚಾಲಕರ ಕಷ್ಟವನ್ನು ಆಲಿಸಿ ಸಮಸ್ಯೆಗಳಿಗೆ ಧ್ವನಿಯಾದ ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ – ಸಮಸ್ಯೆ ಆಲಿಸಿ ಬರುವ ದಿನಗಳಲ್ಲಿ ನಿಮ್ಮ ಧ್ವನಿಯಾಗಿ ಹೋರಾಟ ಮಾಡುವ ಭರವಸೆ ನೀಡಿದ ರಜತ್ ಉಳ್ಳಾಗಡ್ಡಿಮಠ

ಹುಬ್ಬಳ್ಳಿ –

ಸದಾ ಒಂದಿಲ್ಲೊಂದು ವಿಶೇಷ ಕೆಲಸ ಕಾರ್ಯಗಳ ಮೂಲಕ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ, ಹೌದು ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರದಲ್ಲಿ ಪ್ರತಿಯೊಬ್ಬರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸುತ್ತಾ ಜನರಿಗೆ ತುಂಬಾ ಹತ್ತಿರುವಾಗಿರು ರಜತ್ ಉಳ್ಳಾಗಡ್ಡಿಮಠ ಈಗ ಪ್ರತಿನಿತ್ಯ ಸಾರ್ವ ಜನಿಕರ ವಲಯದಲ್ಲಿ ಸಾರಿಗೆಗೆ ಪ್ರಮುಖ ವ್ಯವಸ್ಥೆಯಾಗಿರುವ ಆಟೋ ಚಾಲಕರ ಸಮಸ್ಯೆಗಳನ್ನು ಆಲಿಸಿದರು.

ಹೌದು ಹುಬ್ಬಳ್ಳಿ ನಗರದ ಸಾರಿಗೆಯ ಪ್ರಮುಖ ಭಾಗವಾದ ಅಟೋ ರಿಕ್ಷಾ ಚಾಲಕರನ್ನು ರಜತ್ ಉಳ್ಳಾಗಡ್ಡಿಮಠ ಅವರು ಬಿಡುವಿಲ್ಲದ ಕೆಲಸ ಕಾರ್ಯದ ನಡುವೆಯೂ ಕೂಡಾ ಭೇಟಿ ಮಾಡಿ ಅವರೆಲ್ಲರ ಕಷ್ಟ ಸುಖಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ಅವರೆಲ್ಲರ ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.ಈ ಹಿಂದೆ ಕ್ಷೇತ್ರದಲ್ಲಿನ ಆಟೋ ಚಾಲಕರನ್ನು ಭೇಟಿ ಯಾಗಿದ್ದ ರಜತ್ ಉಳ್ಳಾಗಡ್ಡಿ ಅವರು ಕುಕ್ಕರ್ ಸೇರಿದಂತೆ ಹಲವಾರು ವಸ್ತುಗಳನ್ನು ನೀಡಿ ನೆರ ವಾಗಿದ್ದರು.

ಈಗ ಮತ್ತೆ ಆಟೋ ಚಾಲಕರನ್ನು ಭೇಟಿಯಾಗಿ ಸಮಸ್ಯೆ ಸಂಕಷ್ಟ ಗಳನ್ನು ಆಲಿಸಿ ಬರುವ ದಿನ ಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನಾನು ನಿಮ್ಮೊಂದಿಗೆ ಇರುತ್ತೇನೆ ಎಂಬ ಮಾತುಗಳನ್ನು ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.