ಹಾಡು ಹಗಲೇ ಶಿಕ್ಷಕಿಯ ಕೊಲೆ ತಬ್ಬಲಿಯಾಯಿತು 12 ವರ್ಷದ ಪುತ್ರಿ ಘಟನೆಯಿಂದ ಬೆಚ್ಚಿಬಿದ್ದ ಶಿಕ್ಷಣ ಇಲಾಖೆ

Suddi Sante Desk
ಹಾಡು ಹಗಲೇ ಶಿಕ್ಷಕಿಯ ಕೊಲೆ  ತಬ್ಬಲಿಯಾಯಿತು 12 ವರ್ಷದ ಪುತ್ರಿ ಘಟನೆಯಿಂದ ಬೆಚ್ಚಿಬಿದ್ದ ಶಿಕ್ಷಣ ಇಲಾಖೆ

ಬೆಂಗಳೂರು

ಶಿಕ್ಷಕಿಯೊಬ್ಬರ ಕತ್ತನ್ನು ಕೊಯ್ದು ಹಾಡು ಹಗಲೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ನಗರದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಕೌಸರ್ ಮುಬೀನಾ ಎಂಬುವ ರನ್ನೇ ಕತ್ತು ಕೊಯ್ದು ದುಷ್ಕರ್ಮಿಯೊಬ್ಬನು ಹತ್ಯೆ ಮಾಡಿದ್ದಾನೆ.ಅಶೋಕನಗರದ ನಂಜಪ್ಪ ಸರ್ಕಲ್ ನಿವಾಸಿಯಾಗಿದ್ದಾರೆ ಕೌಸರ್ ಮುಬೀನಾ (34) ಕೆಲವು ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದರು‌.

ಕೌಸರ್ ತನ್ನ ಪುತ್ರಿಯ ಜೊತೆ ನಂಜಪ್ಪ ಸರ್ಕಲ್ ಸಮೀಪದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿ ರುವ ಪುತ್ರಿ ಎಂದಿನಂತೆ ಶಾಲೆಗೆ ಹೋಗಿದ್ದಳು ಕೌಸರ್ ಸಹ ಆಗ ತಾನೇ ಶಾಲೆಯಿಂದ ಮನೆಗೆ ಬಂದಿದ್ದರು.ಮಧ್ಯಾಹ್ನ 3.30ರ ವೇಳೆ ವ್ಯಕ್ತಿ ಯೊಬ್ಬ ಕೌಸರ್ ಕುತ್ತಿಗೆಗೆ ಮೂರು ಬಾರಿ ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ

ಅಕ್ಕಪಕ್ಕದ ಮನೆಯವರು ಗಮನಿಸಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಸ್ಥಳಕ್ಕೆ ದೌಡಾ ಯಿಸಿದ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಸಹಾಯದಿಂದ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡು ಈ ಕುರಿತಂತೆ ಆರೋಪಿಯ ಬಂಧನಕ್ಕೆ ಜಾಲವನ್ನು ಬೀಸಿದ್ದಾರೆ.

ಮೇಲ್ನೋಟಕ್ಕೆ ಪರಿಚಿತ ವ್ಯಕ್ತಿಯಿಂದ ಈ ಒಂದು ಕೃತ್ಯ ನಡೆದಿರುವುದು ದೃಢವಾಗಿದೆ ಕೌಸರ್ ಮೈ ಮೇಲಿನ ಮತ್ತು ಮನೆಯಲ್ಲಿದ್ದ ಚಿನ್ನಾಭರಣ ಬೆಲೆ ಬಾಳುವ ವಸ್ತುಗಳು ಯಾವುದೂ ಕಳುವಾಗಿಲ್ಲ ಪರಿಚಿತ ವ್ಯಕ್ತಿ ವಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿ ರುವ ಸಾಧ್ಯತೆಗಳಿದ್ದು ಆರೋಪಿಯ ಸುಳಿವು ಲಭ್ಯವಾಗಿದ್ದು ಶೀಘ್ರದಲ್ಲಿಯೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದು ಅಶೋಕನಗರ ಠಾಣೆ ಯಲ್ಲಿ ಈ ಕುರಿತಂತೆ ಕೊಲೆ ಪ್ರಕರಣ ದಾಖಲಾ ಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.