ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಮಾರ್ಚ್ 31 ರ ಒಳಗಾಗಿ ಈ ಒಂದು ಕೆಲಸ ಮಾಡಿ -ಚರ,ಸ್ಥಿರಾಸ್ತಿ ವಿವರ ಸಲ್ಲಿಸಲು ಮಾರ್ಚ್ 31 ಕೊನೆ ದಿನ ಮಾಡಿ ಆದೇಶ ಮಾಡಿದ ರಾಜ್ಯ ಸರ್ಕಾರ

Suddi Sante Desk
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಮಾರ್ಚ್ 31 ರ ಒಳಗಾಗಿ ಈ ಒಂದು ಕೆಲಸ ಮಾಡಿ  -ಚರ,ಸ್ಥಿರಾಸ್ತಿ ವಿವರ ಸಲ್ಲಿಸಲು ಮಾರ್ಚ್ 31 ಕೊನೆ ದಿನ ಮಾಡಿ ಆದೇಶ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು –

ಇನ್ನೂ ಮುಂದೆ ರಾಜ್ಯದ ಸರ್ಕಾರಿ ನೌಕರರು ತಮ್ಮ ಚರ,ಸ್ಥಿರಾಸ್ತಿಯ ವಿವರವನ್ನು ಮಾರ್ಚ್ 31 ರ ಒಳಗಾಗಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ.ಇದನ್ನು ಸಲ್ಲಿಸೋದಕ್ಕೆ ಈವರೆಗೆ ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗುತ್ತಿತ್ತು ಇದೀಗ ಈ ಕೊನೆ ದಿನವನ್ನು ಬದಲಾವಣೆ ಮಾಡಲಾಗಿದೆ.ಹೀಗಾಗಿ ಇನ್ಮುಂದೆ ಮಾರ್ಚ್ 31 ಈ ಒಳಗಾಗಿ ಸರ್ಕಾರಿ ನೌಕರರು  ಆಸ್ತಿ ವಿವರ ಸಲ್ಲಿಸಲು ಕೊನೆಯ ದಿನವಾಗಿದೆ.ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು 2021ರ ನಿಯಮ 24ರ ಉಪ ನಿಯಮ (2)ಕ್ಕೆ ತಿದ್ದುಪಡಿಯನ್ನು ತರಲಾಗಿದೆ.ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲ ಯದ ಗ್ರೂಪ್ ಎ, ಬಿ, ಸಿ, ಡಿ ವರ್ಗದ ಎಲ್ಲಾ ಅಧಿಕಾರಿ,ನೌಕರರು ತಮ್ಮ ಚರ,ಸ್ಥಿರಾಸ್ತಿ ವಿವರ ಗಳ ಬಗ್ಗೆ ಪ್ರತಿ ವರ್ಷದ ಡಿಸೆಂಬರ್ 31ರ ಅಂತ್ಯಕ್ಕೆ ಇದ್ದಂತೆ ಸಲ್ಲಿಸುತ್ತಿದ್ದ ವಿವರಗಳನ್ನು ಇನ್ನೂ ಮುಂದೆ ಮಾರ್ಚ್ 31ರ ಅಂತ್ಯಕ್ಕೆ   (ಆರ್ಥಿಕ ವರ್ಷ) ಇದ್ದಂತೆ ನಿಗಧಿತ ನಮೂನೆ ಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ಮೇಲಾಧಿಕಾರಿಗಳ ಮುಖಾಂತರ ಸರ್ಕಾರದ ಅಧೀನ ಕಾರ್ಯದ ರ್ಶಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಆಸ್ತಿ ಹೊಣೆಗಾರಿಕೆ ತಖ್ತೆಗಳ ವಿವರಗಳನ್ನು ಒಂದು ಬಾರಿಯ ಕ್ರಮವಾಗಿ ದಿನಾಂಕ 01-01-2022ರಿಂದ 31-03-2023ರ ಅಂತ್ಯಕ್ಕೆ ಒಟ್ಟು 15 ತಿಂಗಳುಗಳ ವಿವರಗಳನ್ನು ಏಪ್ರಿಲ್ 2023 ರಲ್ಲಿ ಸಲ್ಲಿಸುವಂತೆ ಹಾಗೂ ಮುಂದಿನ ಸಾಲುಗಳ ಆಸ್ತಿಕ ಹೊಣೆಗಾರಿಕೆ ವಿವರಗಳನ್ನು ಪ್ರತಿ ಹನ್ನೆರಡು ತಿಂಗಳಿಗೊಮ್ಮೆ ಆಯಾ ಆರ್ಥಿಕ ವರ್ಷದ 1ನೇ ಏಪ್ರಿಲ್ ನಿಂದ ಮಾರ್ಚ್ 31ರ ಅಂತ್ಯಕ್ಕೆ ವಿಳಂಬವಿಲ್ಲದೇ ಸಕಾಲದಲ್ಲಿ ಸಲ್ಲಿಸುವಂತೆ ತಿಳಿಸಿದ್ದಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.