ಕಲಘಟಗಿ ಕ್ಷೇತ್ರದಲ್ಲಿ ಮತ್ತೆ ತಾಲೀಮು ಆರಂಭ ಮಾಡಿದ ಮಾಜಿ ಮೇಯರ್ ಶಿವು ಹಿರೇಮಠ – ರಂಗೇರುತ್ತಿದೆ ಚುನಾವಣೆಯ ಅಖಾಡ ಕ್ಷೇತ್ರದಲ್ಲಿ ಪ್ರವಾಸ ಆರಂಭ ಮಾಡುತ್ತಿರುವ ಶಿವು ಹಿರೇಮಠ

Suddi Sante Desk
ಕಲಘಟಗಿ ಕ್ಷೇತ್ರದಲ್ಲಿ ಮತ್ತೆ ತಾಲೀಮು ಆರಂಭ ಮಾಡಿದ ಮಾಜಿ ಮೇಯರ್ ಶಿವು ಹಿರೇಮಠ – ರಂಗೇರುತ್ತಿದೆ ಚುನಾವಣೆಯ ಅಖಾಡ ಕ್ಷೇತ್ರದಲ್ಲಿ ಪ್ರವಾಸ ಆರಂಭ ಮಾಡುತ್ತಿರುವ ಶಿವು ಹಿರೇಮಠ

ಕಲಘಟಗಿ

ಇನ್ನೇನು ಚುನಾವಣೆಗೆ ಕೆಲವೇ ಕೆಲ ದಿನಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷದವರು ಗೆಲ್ಲುವ ಕುದುರೆಗಳ ಆಯ್ಕೆಯಲ್ಲಿ ತೊಡಗಿದ್ದು ಇನ್ನೂ ರಾಜ್ಯದ ಹಲವೆಡೆ ಎಲ್ಲಾ ಪಕ್ಷದವರು ಭರ್ಜರಿಯಾಗಿ ಚುನಾವಣೆಯ ಸಿದ್ದತೆಯಲ್ಲಿ ತೊಡಗಿದ್ದಾರೆ.ಇದರ ನಡುವೆ ಇತ್ತ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಶಿವು ಹಿರೇಮಠ ಮತ್ತೆ  ಅಖಾಡಕ್ಕೆ ಇಳಿದಿದ್ದಾರೆ.

2018 ರಲ್ಲಿ ಬಿಜೆಪಿ ಪಕ್ಷದಿಂದ ಭರ್ಜರಿಯಾಗಿ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆ ಕಷ್ಟ ವನ್ನು ಆಲಿಸಿ ಟಿಕೇಟ್ ಸಿಕ್ಕಿದ್ದರೆ ಗೆಲ್ಲುವ ಕನಸಿನಲ್ಲಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವು ಹಿರೇಮಠ ಈಗ ಮತ್ತೆ ಕ್ಷೇತ್ರದಲ್ಲಿ ಪುನಃ ಒಡಾಟವನ್ನು ಆರಂಭ ಮಾಡಿದ್ದಾರೆ.ತಮ್ಮ ತಮ್ಮ ಬೆಂಬಲಿಗ ರೊಂದಿಗೆ ತಿರುಗಾಡುತ್ತಾ  ಕ್ಷೇತ್ರದಲ್ಲಿ ಪುಲ್  ಆಕ್ಟೀವ್ ಆಗಿದ್ದಾರೆ.

ನಿಮ್ಮೆಲ್ಲರ ಪ್ರೀತಿ ವಿಶ್ವಾಸದೊಂದಿಗೆ ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಬಣದೂರ ಗ್ರಾಮ ದಲ್ಲಿ ಭಾರತೀಯ ಜನತಾ ಪಕ್ಷದ ಪ್ರಭಲ ಆಕಾಂಕ್ಷಿ ಯಾಗಿ ಗುರು ಹಿರಿಯರನ್ನು ಹಾಗೂ ಮಹಿಳೆಯ ರನ್ನು ಮತ್ತು ಯುವಕರನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಭಾರತಿಯ ಜನತಾ ಪಕ್ಷವನ್ನು ಬೆಂಬಲಿಸಲು ಕೊರಲಾಯಿತು ಎನ್ನುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.