ಹುಬ್ಬಳ್ಳಿ –
ಹುಬ್ಬಳ್ಳಿಯ ಆರ್.ಎಸ್.ಎಸ್. ಕಛೇರಿಯಾಗಿರುವ ಕೇಶವ ಕುಂಜಕ್ಕೆ ಬಸವರಾಜ ಹೊರಟ್ಟಿ ಭೇಟಿ ನೀಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ ಬಿಜೆಪಿಯ ಹೈಕಮಾಂಡ್ ಎಂದು ಗುರುತಿಸಿಕೊಂಡಿ ರುವ ಈ ಒಂದು ಕೇಂದ್ರಕ್ಕೆ ಬಸವರಾಜ ಹೊರಟ್ಟಿ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದು ಕೇಶವ ಕುಂಜಕ್ಕೆ ಭೇಟಿ ನೀಡಿದ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹುಬ್ಬಳ್ಳಿ ಪ್ರವಾಸದಲ್ಲಿರುವ ಅವರ ಜೊತೆಗೆ ಕೇಶವ ಕುಂಜಕ್ಕೆ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿ ಸೇರ್ತಾರಾ ಅನ್ನೋ ಗುಮಾನಿಗೆ ಇಂಬು ನೀಡಿದಂತಾಗಿದೆ.
ಆದ್ರೆ ಅಶ್ವತ್ಥ ನಾರಾಯಣ ಬಂದಿದ್ದರಿಂದ ಅವರೊಂ ದಿಗೆ ಹೋಗಿದ್ದಾಗಿ ಹೊರಟ್ಟಿ ಸಮಜಾಯಿಷಿ ನೀಡಿ ದ್ದಾರೆ.ಆದ್ರೆ ರಾಜಕೀಯವಾಗಿ ಹಾಗೂ ಸೈದ್ದಾಂತಿಕ ವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದ ಕಡೆ ಹೊರಟ್ಟಿ ಹೆಜ್ಜೆ ಹಾಕಿದ್ದು ಅದರಲ್ಲೂ ವಿಧಾನ ಪರಿಷತ್ ಸಭಾಪತಿಯಾಗಿ ಆರ್ ಎಸ್ ಎಸ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದು ಅನುಮಾನಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.
ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಆರ್.ಎಸ್.ಎಸ್. ಪ್ರಮುಖ ಶ್ರೀಧರ್ ನಾಡಿಗೇರ, ಗೋವಿಂದಪ್ಪ ಮತ್ತಿತರರ ಉಪಸ್ಥಿತರಿದ್ದರು.