ಕಾರವಾರ –
ನಿರಂತರ ಧಾರಾಕಾರ ಮಳೆಯಿಂದಾಗಿ ರಾಜ್ಯದಲ್ಲಿನ ಬಹುತೇಕ ನದಿ ಹಳ್ಳ ಕೊಳ್ಳಗಳು ಜಲಾಶಯಗಳು ತುಂಬಿವೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿತುಂಬಿಕೊಂಡಿದ್ದು ಇತ್ತ ಕಾರವಾರ ವ್ಯಾಪ್ತಿಯಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ಜಿಲ್ಲೆಯ ಕದ್ರಾ ಜಲಾಶಯದಿಂದ ನೀರನ್ನು ಹೊರಗೆ ಬೀಡಲಾಯಿತು

ಕಾರವಾರದ ಕದ್ರಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬೀಡಲಾಯಿತು. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಜಲಾಶಯದಿಂದ ಕಾಳಿ ನದಿಗೆ 10 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಯಿತು.

ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀಟರ್ ಇದ್ದಿದ್ದು ಇವತ್ತಿನ ನೀರಿನ ಮಟ್ಟ 31.50 ತಲುಪಿದ ಹಿನ್ನಲೆ ಬಿಡುಗಡೆ ಮಾಡಲಾಯಿತು.ಜಲಾಶಯದ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಯಿಂದಾಗಿ ತುಂಬಿದೆ.ಮಳೆ ಹೆಚ್ಚಿದ್ದರಿಂದ ಜಲಾಶ ಯಕ್ಕೆ ನೀರಿನ ಹರಿವು ಹೆಚ್ಚಳವಾಗಿದೆ.

ನದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ ಕೆಪಿಸಿಎಲ್ ಅಧಿಕಾರಿಗಳು.ಮತ್ತೆ ಮಳೆ ಮುಂದುವ ರೆದಲ್ಲಿ ನೀರು ಬಿಡುವ ಸಾಧ್ಯತೆ ಎಂದಿದ್ದು ಜನತೆಗೆ ಮುಂಜಾಗೃತವಾಗಿ ಸೂಚನೆಯನ್ನು ನೀಡಿದ್ದಾರೆ.