ಬೆಂಗಳೂರು –
ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಭ್ರಷ್ಚ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಹೌದು ರಾಜ್ಯದ ಹಲವೆಡೆ ಎಸಿಬಿ ಅಧಿಕಾರಿಗಳು ಭ್ರಷ್ಚ ಆದಾಯಕ್ಕಿಂತ ಹೆಚ್ಚು ಆದಾಯವನ್ನು ಹೊಂದಿದ ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಇನ್ನೂ ರಾಜ್ಯದ ಎಲ್ಲೇಲ್ಲಿ ದಾಳಿಯಾಗಿದೆ ಅನ್ನೊದನ್ನು ನೋಡೊದಾದರೆ

ಮಂಡ್ಯದಲ್ಲಿ ಡಿಸಿಎಫ್ ಮನೆಯ ಮೇಲೆ ದಾಳಿ
ಮಂಡ್ಯದ ಡಿಸಿಎಫ್ ಟಿ ವೆಂಕಟೇಶ್ ಅವರ ನಿವಾಸದ ಮೇಲೆ ದಾಳಿ.ಮಂಡ್ಯದ ಸುಭಾಷ್ ನಗರದಲ್ಲಿರುವ ಟಿ ವೆಂಕಟೇಶ್ ಅವರ ಮನೆ ಮೇಲೆ ಹಾಗೂ ಇವರಿಗೆ ಸೇರಿದ ಬೆಂಗಳೂರಿನ 3 ಕಡೆ ದಾಳಿಯನ್ನು ಮಾಡಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳಿಂದ ಈ ಒಂದು ದಾಳಿಯಾಗಿದೆ.ಸಧ್ಯ ಮಂಡ್ಯದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿದ್ದಾರೆ ಟಿ ವೆಂಕಟೇಶ್. ಮಂಡ್ಯದ ಎಸಿಬಿ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವ ದಲ್ಲಿ ಈ ಒಂದು ದಾಳಿಯನ್ನು ಮಾಡಲಾಗಿದ್ದು ಅಧಿಕಾರಿಗಳಿಂದ ಖಡತಗಳ ಪರಿಶೀಲನೆ ನಡೆಯುತ್ತಿದೆ.
ಉಡುಪಿಯಲ್ಲೂ ಎಸಿಬಿ ಅಧಿಕಾರಿಗಳ ದಾಳಿ
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಅಧಿಕಾರಿ ಮನೆ ಮೇಲೂ ಕೂಡಾ ದಾಳಿಯನ್ನು ಮಾಡಲಾಗಿದೆ.ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಇಇ ಕೃಷ್ಣ.ಎಸ್ ಹೆಬ್ಸೂರು ಇವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿಯಾಗಿದ್ದು ದಾಖಲೆ ಹಾಗೂ ಆಸ್ತಿಪತ್ರಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಉಡುಪಿಯ ದೊಡ್ಡಣಗುಡ್ಡೆಯಲ್ಲಿ ಇರುವ ಕೃಷ್ಣ.ಎಸ್ ಹೆಬ್ಸೂರು ಮನೆ.ಎಸಿಬಿ ಅಧಿಕಾರಿ ಗಳಿಂದ ಮುಂದುವರಿದಿದೆ ದಾಖಲೆಗಳ ಪರಿಶೀಲನೆ ಕಾರ್ಯ

ತುಮಕೂರು ಜಿಲ್ಲೆಯಲ್ಲೂ ಎಸಿಬಿ ದಾಳಿ
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲೂ ಎಸಿಬಿ ಅಧಿಕಾರಿಗಳ ದಾಳಿಯಾಗಿದೆ.ಬೆಂಗಳೂರಿನ ಆರ್.ಟಿ.ಓ ಇನ್ಸೆಪೆಕ್ಟರ್ ಎ. ಕೃಷ್ಣಮೂರ್ತಿ ಫಾರಂ ಹೌಸ್ ಮೇಲೆ ಈ ಒಂದು ದಾಳಿಯಾಗಿದೆ. ಚಿಕ್ಕಬಳ್ಳಾಪುರದ 10 ಜನ ಎಸಿಬಿ ಅಧಿಕಾರಿಗಳಿಂದ ದಾಳಿಯಾಗಿದೆ.ಕೊರಟಗೆರೆ ತಾಲ್ಲೂಕಿನ ದೇವರಹಳ್ಳಿ ಫಾರಂ ಹೌಸ್ ಮೇಲೆ ದಾಳಿಯನ್ನು ಮಾಡಲಾಗಿದ್ದು ಕಡತಗಳ ಹಾಗೇ ಪತ್ರಗಳ ಪರಿಶೀಲನೆ ನಡೆಯುತ್ತಿದೆ ಕೃಷ್ಣಮೂರ್ತಿಯ ಬೆಂಗಳೂರು ಮನೆ ಹಾಗೂ ಕೊರಟಗೆರೆ ಫಾರಂ ಹೌಸ್ ಮೇಲೆ ಏಕ ಕಾಲದಲ್ಲಿ ದಾಳಿಯಾಗಿದೆ.

ಬೀದರ್ ನಲ್ಲಿಯೂ ಎಸಿಬಿ ಅಧಿಕಾರಿಗಳ ದಾಳಿ
ಬಸವಕಲ್ಯಾಣದ ಜಿಲ್ಲಾ ಪಂಚಾಯತನ ಜೆಇ ಸುರೇಶ್ ಮೋರೆ ಮನೆ ಕಚೇರಿ ಮೇಲೆ ದಾಳಿಯನ್ನು ಮಾಡಲಾಗಿದೆ.ಏಕ ಕಾಲಕ್ಕೆ ಎರಡು ಕಡೆ ದಾಳಿ ಮಾಡಿದ್ದಾರೆ ಎಸಿಬಿ ಅಧಿಕಾರಿಗಳು. ಬಸವಕಲ್ಯಾಣದ ಶಿವಾಜಿ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದು ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದೆ.ಭಾಲ್ಕಿ ತಾಲೂಕಿನ ಮೆಹಕರ್ ನಲ್ಲಿರುವ ಅವರ ಪೆಟ್ರೋಲ್ ಬಂಕ್ ಮತ್ತು ಮನೆಯ ಮೇಲು ದಾಳಿಯಾಗಿದೆ.ಅಕ್ರಮ ಆಸ್ತಿ ಗಳಿಕೆ ದೂರುಗಳ ಹಿನ್ನಲೆಯಲ್ಲಿ ಈ ಒಂದು ದಾಳಿ ಮಾಡಲಾಗಿದೆ.ಎಸಿಬಿ ಕಲಬುರಗಿ ಎಸ್ಪಿ ಮಹೇಶ್ ಮೆಗ್ಗಣವರ ಮಾರ್ಗದರ್ಶನದಲ್ಲಿ ಬೀದರ್ ಎಸಿಬಿ ಡಿಎಸ್ಪಿ ಹಣಮಂತರಾಯ ಮತ್ತವರ ತಂಡದಿಂದ ದಾಳಿಯನ್ನು ಮಾಡಲಾಗಿದೆ.ದಾಳಿಯಲ್ಲಿ ಅಕ್ರಮ ಆಸ್ತಿ ಮತ್ತೆ ಪರಿಶೀಲನೆ ನಡೆಸುತ್ತಿದ್ದಾರೆ ಎಸಿಬಿ ಅಧಿಕಾರಿಗಳು.ಇದರೊಂದಿಗೆ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ ಎಸಿಬಿ ಅಧಿಕಾರಿಗಳು.

ವಿಜಯಪುರದಲ್ಲಿ ಎಸಿಬಿ ಅಧಿಕಾರಿಗಳ ದಾಳಿ
ವಿಜಯಪುರ ಹೆಸ್ಕಾಂ ಎಇಇ ಮನೆಮೇಲೆ ಎಸಿಬಿ ಅಧಿಕಾರಿಗಳು ದಾಳಿಯನ್ನು ಮಾಡಿದ್ದಾರೆ.ಹೆಸ್ಕಾಂ ಕಚೇರಿಯಲ್ಲಿ ಎಇಇ ಆಗಿರುವ ಸಿದ್ದರಾಮ ಮಲ್ಲಿಕಾರ್ಜುನ್ ಬಿರಾದಾರ ಮನೆ ಮೇಲೆ ದಾಳಿ.ವಿಜಯಪುರ ನಗರದ ಸುಕೂನ್ ಲೇಔಟ್ ನಲ್ಲಿರುವ ಮನೆ ಮೇಲೆ ದಾಳಿ.ಮನೆಯಲ್ಲಿರುವ ದಾಖಲೆಗಳ ತಪಾಸಣೆ. ಬೆಳಗಿನ ಜಾವ ದಾಳಿ ನಡೆಸಿರುವ ಅಧಿಕಾರಿಗಳು.ಮನೆಯಲ್ಲೇ ಮುಂದುವರೆದ ತಪಾಸಣೆ.
ದಾವಣಗೆರೆ ಯಲ್ಲೂ ಎಸಿಬಿ ಅಧಿಕಾರಿಗಳ ದಾಳಿ
ಯೋಜನಾ ನಿರ್ದೇಶಕ ಎಚ್.ಆರ್.ಕೃಷ್ಣಪ್ಪ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿಯನ್ನು ಮಾಡಲಾಗಿದೆ.ದಾಖಲೆ ಹಾಗೂ ಆಸ್ತಿ ಪತ್ರಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.ಕೋಲಾರ ಜಿಲ್ಲೆಯ ಮಾಲೂರು ನಗರ ಸಭೆಯ ಯೋಜನಾ ನಿರ್ದೇಶಕ ಎಚ್ ಆರ್ ಕೃಷ್ಣಪ್ಪ.ಇವರ ಸ್ವ ಗ್ರಾಮವಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ, ಮಾಲೂರು ಮನೆ ಮತ್ತು ಕಚೇರಿ, ಶಿವಮೊಗ್ಗ ಮನೆ,ಬೆಂಗಳೂರಿನ ವಿಜಯನಗರದಲ್ಲಿ ಸೇರಿ ಐದು ಕಡೆ ಎಕ ಕಾಲಕ್ಕೆ ಎಸಿಬಿ ದಾಳಿ.ಅಡಿಕೆ ತೋಟ, ಬೇರೆ ಬೇರೆ ಕಡೆ ನಿರ್ಮಿಸಿದ್ದು ಮೇಲ್ನೋಟಕ್ಕೆ ಪತ್ತೆಯಾಗಿದ್ದು. ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತ್ರತ್ವ ದಲ್ಲಿನ ತಂಡದಿಂದ ದಾಳಿ ಮಾಡಲಾಗಿದ್ದು ಪರಿಶೀಲನೆ ನಡೆಯುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.