ಬೆಂಗಳೂರು –
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸುಮಾರು ವರ್ಷಗಳಿಂದ ಸುರುಳಿತವಾಗಿ ನಡೆಯುತ್ತಿಲ್ಲ ಇದು ರಾಜ್ಯದ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ ಹಲವು ಬಾರಿ ವರ್ಗಾವಣೆ ನಿಯಮ ಸರಳೀಕರಣ ಮಾಡಲು ಮನವಿ ಮಾಡಿದರೂ ಕೂಡಾ ಯಾವುದೇ ಬದಲಾವಣೆ ಮಾಡಿಲ್ಲ ಬೇರೆ ಇಲಾಖೆಯಲ್ಲಿ ಇಲ್ಲದ ವರ್ಗಾವಣೆ ನಿಯಮ ಶಿಕ್ಷಣ ಇಲಾಖೆಗೆ ಯಾಕೆ ಎಂದು ಶಿಕ್ಷಕರು ದೂರುತ್ತಿದ್ದಾರೆ ಶೇಕಡಾ 25 ಅವೈಜ್ಞಾನಿಕ ವರ್ಗಾವಣೆ ನಿಯಮ ಶಿಕ್ಷಕರಿಗೆ ಮಾರಕವಾಗಿದೆ ಈ ನಿಯಮ ರದ್ದು ಪಡಿಸಲು ವರ್ಗಾವಣೆಯನ್ನು ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸುವದು ಶಿಕ್ಷಕರು ಮಾನಸಿಕವಾಗಿ ದೈಹಿಕವಾಗಿ ಬೋಧನೆಯಲ್ಲಿ ತೊಡಗಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯವರು ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಿದ ಹಾಗೆ
ನಮ್ಮ ರಾಜ್ಯದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸೇವಾವಧಿಯಲ್ಲಿ ತಮ್ಮ ತವರು ಜಿಲ್ಲೆಗೆ ವರ್ಗಾವಣೆ ನೀಡುವುದು ಹೀಗೆ ಹಲವಾರು ಬೇಡಿಕೆ ಗಳನ್ನು ಸರ್ಕಾರದ ಗಮನಕ್ಕೆ ತರಲು ರಾಜ್ಯದ ಶಿಕ್ಷಕರು ಗೂಗಲ್ ಮೀಟ್ ಮುಖಾಂತರ ಸಂಘಟನೆ ಯಾಗಿ ವರ್ಗಾವಣೆ ಇಲ್ಲದೆ ಸುಮಾರುವರ್ಷಗಳಿಂದ ವಂಚಿತರಾಗುತ್ತಿರುವ ಶಿಕ್ಷಕರು ಹಾಗೂ ಗ್ರಾಮೀಣ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘಗಳು ಹಾಗೂ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ
ಪಶ್ಚಿಮ ಬಂಗಾಳದ ಶಿಕ್ಷಕರ ವರ್ಗಾವಣೆ ಮಾದರಿ ಯಲ್ಲಿ ನಮಗೂ ವರ್ಗಾವಣೆ ನೀಡಬೇಕು ಕಡ್ಡಾಯ ವರ್ಗಾವಣೆ ಆದವರಿಗೆ ಸುಗ್ರೀವಾಜ್ಞೆ ತಂದು ವರ್ಗಾವಣೆ ಮಾಡುವ ಹಾಗೆ ವಿಶೇಷ ಪ್ರಕರಣದ ಅಡಿಯಲ್ಲಿ ಸುಗ್ರೀವಾಜ್ಞೆ ತಂದು ತವರು ಜಿಲ್ಲೆಗೆ ಸೇವಾವಧಿಯಲ್ಲಿ ಒಮ್ಮೆ ವರ್ಗಾವಣೆ ನೀಡ ಬೇಕೆಂದು ಬೃಹತ್ ಪ್ರತಿಭಟನೆ ಬೆಂಗಳೂರು ಚಲೋ ಕಾರ್ಯಕ್ರಮ ಇದರ ನೇತೃತ್ವವನ್ನು ಹುಟ್ಟು ಹೋರಾಟಗಾರರು ಅನ್ಯಾಯದ ವಿರುದ್ಧ ಸಿಡಿದೇಳುವ ಹಿರಿಯರು ವಾಟಾಳ್ ನಾಗರಾಜ್ ಇವರ ನಾಯಕತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದೆಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಹೇಳಿದ್ದಾರೆ