ಬೆಂಗಳೂರು –
ಮಹಾಮಾರಿ ಕರೋನ ಸಾವು ನೋವಿನ ನಡುವೆ, ಹಾಗೇ ಅವೈಜ್ಞಾನಿಕ ವರ್ಗಾವಣೆಯ ನೀತಿಯಿಂದ ಕಂಗಾಲಾಗಿರುವ ನಾಡಿನ ಶಿಕ್ಷಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.ಹೌದು ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕ್ರಮವಾಗಿ ಅನೇಕ ಶಿಕ್ಷಕರು ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗೆ ರಜಾ ಅವಧಿಯಲ್ಲಿ ಕೋವಿಡ್-19 ಕಾರ್ಯಗಳಿಗೆ ನಿಯೋಜಿಸಿರುವ ಶಿಕ್ಷಕರುಗಳನ್ನು ಬಿಎಲ್‌ಓ ಗಳ ಮಾದರಿಯಲ್ಲಿ ಗಳಿಕೆ ರಜೆ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ
ಹೌದು ಈ ಕುರಿತಂತೆ ಪ್ರಾಥಮಿಕ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್ ಎಸ್ ಶಿವಕುಮಾರ್ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಗಳನ್ನು ರಜಾ ಅವಧಿಯಲ್ಲಿ ಕೋವಿಡ್-19 ಕಾರ್ಯಗಳಿಗೆ ನಿಯೋಜಿಸಿರುವ ಶಿಕ್ಷಕರುಗಳಿಗೆ ಕೆ ಸಿ ಎಸ್ ಆರ್ ನಿಯಮ 113(3)(ಎ)ರನ್ವಯ ಗಳಿಕೆ ರಜೆ ಮಂಜೂರು ಮಾಡಲು ಅವಕಾಶವಿರುತ್ತದೆ.ಈ ಹಿನ್ನಲೆಯಲ್ಲಿ ಕೋವಿಡ್-19 ಕಾರ್ಯಗಳಿಗೆ ನಿಯೋಜಿಸಿರುವ ಶಿಕ್ಷಕರುಗಳಿಗೆ ಗಳಿಕೆ ರಜೆ ಮಂಜೂರು ಮಾಡಲು ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.