ಬೆಂಗಳೂರು –

ಗೆ,
ಮಾನ್ಯ ಷಡಕ್ಷರಿ ಯವರು
ರಾಜ್ಯಾಧ್ಯಕ್ಷರು,
ಮಾನ್ಯ ಜಗದೀಶ್ ಗೌಡಪ್ಪ ಪಾಟೀಲ್ ರವರು
ಮಹಾಪ್ರಧಾನ ಕಾರ್ಯದರ್ಶಿಗಳು
ಕ.ರಾ.ಸ.ನೌಕರರ ಸಂಘ(ರಿ)ಬೆಂಗಳೂರು
ಮಾನ್ಯರೇ,
ಈ ಮೇಲಿನ ವಿಷಯವಾಗಿ ಸಮಸ್ತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ 2020 ಜನವರಿ,ಜುಲೈ2020,, ಹಾಗೂ ಜನವರಿ 2021 ರ ತಡೆಹಿಡಿದಿಂದ ಸರ್ಕಾರಿ ನೌಕರರ DA ಯನ್ನು ಮಂಜೂರು ಮಾಡಿರುತ್ತದೆ.ಹಾಗೇಯೇ ಕೇರಳ ರಾಜ್ಯ ಹಾಗೂ ರಾಜಸ್ತಾನ ರಾಜ್ಯಗಳು ಈಗಾಗಲೇ ತನ್ನ ನೌಕರರಿಗೆ ತಡೆಹಿಡಿದಿದ್ದ DA ಮಂಜೂರು ಮಾಡಿವೆ.ದಿನೇ ದಿನೇ ಎಲ್ಲಾ ರೀತಿಯ ವಸ್ತುಗಳ ಬೆಲೆ ಹೆಚ್ಚು ಹೆಚ್ಚು ಆಗುತ್ತಾ ಇದೆ.ಪೆಟ್ರೋಲ್. ಡೀಸಲ್,ಹಾಗೂ ಅಡುಗೆಎಣ್ಣೆ(ಒನ್ ಟೂ ಡಬಲ್) ಬೆಲೆ ಹೆಚ್ಚು ಆಗಿದೆ.ಹಾಗೇಯೇ ಕೋರೋನಾ ಸಂಕಷ್ಟಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಮನೆಯ ಇತರ ಸದಸ್ಯರ ಅನಾರೋಗ್ಯ ದಿಂದ ತುಂಬ ಖರ್ಚ ವೆಚ್ಚವಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ.ಮಕ್ಕಳ ವಿದ್ಯಾಭ್ಯಾಸ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಾ ಇದೆ.ಸರ್ಕಾರಿ ನೌಕರರು ಕೋರೋನಾ 1ನೇ ಅಲೆ ಹಾಗೂ 2ನೇ ಅಲೆಯಲ್ಲಿ ಸರ್ಕಾರ ವಹಿಸಿದ ಕೋರೋನಾ ನಿರ್ವಹಣೆಯ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಪ್ರತಿ ತಿಂಗಳ ಮನೆಬಾಡಿಗೆ ಹೆಚ್ಚಾಗಿದೆ. ಕರೋನ 2ನೇ ಅಲೆಯು ಈಗ ಕಡಿಮೆಯಾಗಿದೆ.ಹಾಗೂ 3ನೇ ಅಲೆಯು ಬರುವ ಮುನ್ಸೂಚನೆಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನೀಡಿದೆ.ಆದ್ದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಕರ್ನಾಟಕ ಘನ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿ ತಕ್ಷಣ ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 2020 ರಿಂದ ತಡೆಹಿಡಿದಿರುವ DA ಯನ್ನು ಮಂಜೂರು ಮಾಡಿಸಬೇಕೆಂದು ಕರ್ನಾಟಕ ರಾಜ್ಯ ಸಮಸ್ತ ಸರ್ಕಾರಿ ನೌಕರರು ಕೇಳಿಕೊಳ್ಳುತ್ತೇವೆ
ಇಂತಿ ತಮ್ಮ ಅಭಿಮಾನಿಗಳ ಬಳಗದ
ಮಹೇಶ ಬೂದನೂರು ಮಂಡ್ಯ
G.ರಂಗಸ್ವಾಮಿ ಮಧುಗಿರಿ
ಅರುಣ್ ಹುಡೇದ್ ಗೌಡ್ರು(ಉತ್ತರ ಕರ್ನಾಟಕ)
ಮಹಾಂತ ಗೌಡ ಪಾಟೀಲ್
ಹಾಗೂ ಸಮಸ್ತ ಅಭಿಮಾನಿಗಳ ಬಳಗ.