ಪತಿಯ ಪರವಾಗಿ ಅಬ್ಬರದ ಪ್ರಚಾರ ಮಾಡುತ್ತಿರುವ ಶಿವಲೀಲಾ ಕುಲಕರ್ಣಿ – ಕಾರ್ಯಕರ್ತರ ಪಡೆಯೊಂದಿಗೆ ಮತಯಾಚನೆ ಹೋದಲೇಲ್ಲ ಈ ಬಾರಿ ಕಂಡು ಬರುತ್ತಿದೆ ಜನ ಬೆಂಬಲ‌…..

Suddi Sante Desk
ಪತಿಯ ಪರವಾಗಿ ಅಬ್ಬರದ ಪ್ರಚಾರ ಮಾಡುತ್ತಿರುವ ಶಿವಲೀಲಾ ಕುಲಕರ್ಣಿ – ಕಾರ್ಯಕರ್ತರ ಪಡೆಯೊಂದಿಗೆ ಮತಯಾಚನೆ ಹೋದಲೇಲ್ಲ ಈ ಬಾರಿ ಕಂಡು ಬರುತ್ತಿದೆ ಜನ ಬೆಂಬಲ‌…..

ಧಾರವಾಡ

ಪತಿಯ ಪರವಾಗಿ ಧಾರವಾಡದ ವಕೀಲರ ಸಂಘದಲ್ಲಿ ವಿನಯ ಕುಲಕರ್ಣಿಯವರ ಪತ್ನಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಪ್ರಚಾರ ಮಾಡಿದರು ಹೌದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ವಿನಯ ಕುಲಕರ್ಣಿ ಪರವಾಗಿ ಅವರ ಧರ್ಮ ಪತ್ನಿ ಶ್ರೀಮತಿ ಶಿವಲೀಲಾ ಕುಲಕರ್ಣಿಯವರು ಮತಯಾಚಿಸಿದರು.

ಈ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾ ಡಿದ ವಕೀಲರ ಸಂಘದ ಪ್ರಧಾನಕಾರ್ಯದರ್ಶಿ ಎನ್ ಆರ್ ಮಟ್ಟಿ ಮಾತನಾಡಿ ಈ ಹಿಂದೆ ನಮ್ಮ ಬೇಡಿಕೆ ಅನ್ವಯ ವಿನಯ ಕುಲಕರ್ಣಿಯವರು ವಿಶೇಷವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಅವರು ಸಹೃದಯರು ಅಭಿವೃಧ್ಧಿ ಹರಿಕಾರರು ಎಂದರು

ನಂತರ ಮಾತನಾಡಿದ ಶಿವಲೀಲಾ ಕುಲಕರ್ಣಿ ಯವರು,ತಮಗೆಲ್ಲರಿಗೂ ವಿನಯ ಕುಲಕರ್ಣಿ ಯವರು ತಮಗೆಲ್ಲಾ ಚಿರಪರಿಚಿತರು.ಕೋರ್ಟ ಆವರಣಗಳಲ್ಲಿ ಮೂಲಭೂತ ಸೌಕರ್ಯ ಒದಗಿ ಸಲು ಸಾಕಷ್ಟು ಪ್ರಯತ್ನ ಮಾಡಿದ್ದರು.ಇವತ್ತು ಅವರು ಅನಿವಾರ್ಯ ಕಾರಣದಿಂದ ಜಿಲ್ಲೆಯ ಹೊರಗಿರಬಹುದು ಆದರೆ ಜನರ ಮನದಲ್ಲಿ ನೆಲೆಯೂರಿದ್ದಾರೆ.

ಐ ಐ ಟಿ ಗಾಗಿ ಜಮೀನು ಕೊಡಿಸಲು ರೈತರೊಂ ದಿಗೆ ನಿರಂತರವಾಗಿ ಮಾತನಾಡಿ ಶ್ರಮ ವಹಿಸಿ ಐ ಐ ಟಿ ತರಲು ಮಂಚೂನಿಯಲ್ಲದ್ದರು.ಅದೇ ರೀತಿ ಧಾರವಾಡ ಹೈಕೋರ್ಟ ಹೋರಾಟದ ನೇತೃತ್ವ ವಹಿಸಿದ ಕೀರ್ತಿ ಅವರಿಗಿದೆ,ಹಾಗೂ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಿಂದ ಸಾವಿರಾರು ರೈತ ರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ

ಧಾರವಾಡದ ಅಭಿವೃಧ್ಧಿಗೆ ಕಿರೀಟಪ್ರಾಯ ರಾಗಿದ್ದು ಅವರ ಮೇಲೆ ತಮ್ಮೆಲ್ಲರ ಆಶೀರ್ವಾದ ಇರಲಿ ಎಂದು ವಿನಂತಿಸಿಕೊಂಡರು.ಈ ಸಂಧರ್ಭ ದಲ್ಲಿ ಹಿರಿಯ ವಕೀಲರುಗಳಾದ ವಿ.ಡಿ ಕಾಮರೆಡ್ಡಿ, ಕೆ.ಎಲ್ ಪಾಟೀಲ,ಆರ್ ವಿ ಬೆಳ್ಳಕ್ಕಿ,ಜೆ ಎಲ್ ಜಾಧವ,ಸದಾನಂದ ಮುಂದಿನಮನಿ,ಪ್ರಕಾಶ ಸಿಂತ್ರಿ ರಜಿಯಾ ಬೇಗಂ ಸಂಗೊಳ್ಳಿ,ರೂಪಾ ಕರಂಗಾನೂರ,ರಾಜು ಕೋಟಿ,ಪ್ರಕಾಶ ಬಾವಿಕಟ್ಟಿ, ಎನ್ ತಾರಿಹಾಳ,ಮಂಜುನಾಥ ಮುಗ್ಗನವರ ಮುಂತಾದ ಹಿರಿಯ ಕಿರಿಯ ವಕೀಲರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.