ಹುಬ್ಬಳ್ಳಿ –
ಅವಳಿ ನಗರದ ಖಾಕಿ ಪಡೆಗೆ ಚುರುಕು ಮುಟ್ಟಿಸಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.ಹೌದು ಸಧ್ಯ ಸಾಮಾನ್ಯ ವರ್ಗವಾಣೆ ಆರಂಭಗೊಂಡಿದೆ ಹೀಗಾಗಿ ಒಂದೇ ಠಾಣೆಯಲ್ಲಿ ಕೆಲಸ ಮಾಡಿದವರ ಮಾಹಿತಿಯನ್ನು ಪೊಲೀಸ್ ಆಯುಕ್ತರು ಕೇಳಿದ್ದಾರೆ. ಪೊಲೀಸ್ ಆಯುಕ್ತರಾದ ಲಾಭೂರಾಮ್ ಅವರು ಅವಳಿ ನಗರದ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ಕೇಳಿದ್ದಾರೆ.ನಾಲ್ಕು ವರ್ಷದಿಂದ ಒಂದೇ ಠಾಣೆಯಲ್ಲಿ ಸೇವೆ ಮಾಡಿದವರ ಮಾಹಿತಿ,ಅವರ ಹಿನ್ನಲೆಯನ್ನು ಪೊಲೀಸ್ ಆಯುಕ್ತರು ಕೇಳಿದ್ದಾರೆ.
ಅವಳಿ ನಗರದ ಎಲ್ಲಾ ಠಾಣೆಗಳ ಇನ್ಸ್ಪೆಕ್ಟರ್, ಎಸಿಪಿ ಗಳಿಗೆ ಪತ್ರ ಮುಖೇಣ ಮೂಲಕ ಸೂಚನೆಯನ್ನು ಆಯುಕ್ತರು ನೀಡಿ ಕೇಳಿದ್ದಾರೆ.ನಿನ್ನೆಯೇ ಎಲ್ಲಾ ಠಾಣೆಗಳ ಸಿಬ್ಬಂದಿಯ ಮಾಹಿತಿ ನೀಡಲು ಗಡುವು ನೀಡಿದ್ದ ಕಮೀಷನರ್.ಜಿಡ್ಡುಗಟ್ಟಿದ್ದ ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸೊ ಕೆಲಸವನ್ನು ಈ ಮೂಲಕ ಇವರು ಮಾಡಲು ಮುಂದಾಗಿದ್ದಾರೆ. ಇನ್ನೂ ಪ್ರಮುಖವಾಗಿ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಾ ಅಕ್ರಮ ದಂಧೆಗಳಿಗೆ ಕುಮ್ಮಕ್ಕು ಮಾಡುತ್ತಿರುವ ಕೆಲ ಕೆಲಸ ಪೊಲೀಸ್ ಸಿಬ್ಬಂದಿ ಗಳಿಗೆ ಈ ಮೂಲಕ ಆಯುಕ್ತರು ಚುರುಕು ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.