ಬೆಂಗಳೂರು –
ಆತಂಕ ಭಯದ ನಡುವೆಯೂ ಕೂಡಾ ನಾಳೆ SSLC ಪರೀಕ್ಷೆ ನಡೆಯಲಿದೆ.ಇದಕ್ಕಾಗಿ ಈಗಾಗಲೇ ಎಲ್ಲಾ ವ್ಯವಸ್ಥೆಯನ್ನು ರಾಜ್ಯದ ತುಂಬೆಲ್ಲಾ ಇಲಾಖೆ ಮತ್ತು ಅಧಿಕಾರಿಗಳು ಸಿದ್ದತೆಯನ್ನು ಮಾಡಿದ್ದಾರೆ. ಇನ್ನೂ ಇದು ಒಂದೆಡೆಯಾದರೆ ಇನ್ನೂ ಪರೀಕ್ಷೆ ಬರೆಯಲಿರುವ 23 ವಿದ್ಯಾರ್ಥಿ ಗಳಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ.
ಕರ್ನಾಟಕದಲ್ಲಿ ನಾಳೆಯಿಂದ (ಜುಲೈ 19) ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಲಿದ್ದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.ಇನ್ನೂ ಇದರ ನಡುವೆ ಪರೀಕ್ಷೆ ಬರೆಯಬೇಕಿದ್ದ 23 ಮಕ್ಕಳಲ್ಲಿ ಸೋಂಕು ದೃಢಪ ಟ್ಟಿದೆ.
ಈ ಮಕ್ಕಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ಮಾಹಿತಿ ನೀಡಿದ್ದು ಆದರೂ ಕೂಡಾ ಇದೊಂದು ದೊಡ್ಡ ಆತಂಕಕಾರಿ ವಿಚಾರವಾಗಿದೆ