ಬಾಗಲಕೋಟೆ –
ಸರ್ಕಾರಿ ಶಾಲೆಯೊಂದರಲ್ಲಿ ಕಳ್ಳತನ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ಸರ್ಕಾರಿ ಮಾದರಿ ಕುವೆಂಪು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿನ ಒಟ್ಟು ನಾಲ್ಕು ಕಂಪ್ಯೂಟರ್ ಮತ್ತು ಒಂದು ಪ್ರಿಂಟರ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಕಂಪ್ಯೂಟರ್ ಎಜ್ಯು ಕೇಶನ್ ಕೊಠಡಿಯಲ್ಲಿದ್ದ ಒಟ್ಟು 11 ಕಂಪ್ಯೂಟರ್ ಗಳ ಪೈಕಿ ಮೂರು ಕಂಪ್ಯೂಟರ್,ಶಾಲೆ ಕಾರ್ಯಾಲ ಯದಲ್ಲಿದ್ದ ಒಂದು ಕಂಪ್ಯೂಟರ್,ಒಂದು ಪ್ರಿಂಟರ್ ಕಳ್ಳತನ ಮಾಡಿದ್ದಾರೆ.

ಶಾಲೆಯಲ್ಲಿನ ಕಚೇರಿ ಕೊಠಡಿಯಲ್ಲಿದ್ದ ಬೀಗ ಒಡೆದು ಇತರೆ ಕೊಠಡಿಗಳನ್ನು ಓಪನ್ ಮಾಡಿದ್ದಾರೆ. ಜೊತೆಗೆ ಶಾಲೆ ಕಾರ್ಯಾಲಯದ ಲಾಕರ್ ಮುರಿದು ವಸ್ತುಗಳನ್ನು ಕಿತ್ತಾಡಿದ್ದಾರೆ.ಮಾದರಿ ಹಾಗೂ ಶತ ಮಾನೋತ್ಸವ ಶಾಲೆಯಾಗಿದ್ದು ಶಾಲೆಯಲ್ಲಿ ಸಂಜೆ ಹೊರಗಡೆ ಲೈಟ್ ವ್ಯವಸ್ಥೆ ಇರಲಿಲ್ಲ ಎನ್ನುವ ಮಾಹಿತಿ ಇದೆ.ಜೊತೆಗೆ ಸಿಸಿಟಿವಿ ಕ್ಯಾಮರಾ ಕೂಡ ಇರಲಿಲ್ಲ. ಸದ್ಯ ಕಲಾದಗಿ ಪೊಲೀಸರು ಶ್ವಾನದಳ ಸಮೇತ ತನಿಖೆ ಮುಂದುವರಿಸಿದ್ದು ತನಿಖೆ ನಂತರ ಕಳ್ಳತನ ನಡೆಸಿದರು ಯಾರು ಎಂದು ತಿಳಿದು ಬರಲಿದೆ. ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ






















