ಬೆಳಗಾವಿ –
ಕೊರೊನ ಸಂಕಷ್ಟ ಬಂದಾಗಿನಿಂದ ಶಿಕ್ಷಣ ಎನ್ನುವುದೇ ಈಗ ಸವಾಲಿನ ಕಾರ್ಯ ಆಗಿದೆ, ಇನ್ನು ಶಿಕ್ಷಣವನ್ನು ಉದ್ಯಮವಾಗಿ ಬಳಸಿಕೊಳ್ಳುತ್ತಿರುವ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವುದು ಸವಾಲಿನ ಕೆಲಸವೇ ಸೈ, ಇಂತಹ ಸವಾಲನ್ನು ಸ್ವೀಕರಿಸಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಒಬ್ಬರು ಸರ್ಕಾರಿ ಶಾಲೆಯನ್ನ ಉಳಿಸಿ ಬೆಳೆಸಲು ಪ್ರಯತ್ನಿ ಸುತ್ತ ಯಶಸ್ವಿ ಕೂಡ ಆಗಿದ್ದಾರೆ.
ಬೆಳಗಾವಿಯ ಹೃದಯ ಭಾಗದಲ್ಲಿರುವ ಮಾರ್ಕೆಟ್ ದಲ್ಲಿರುವ ಪ್ರಾಥಮಿಕ ಶಾಲೆ ನಂಬರ್ 1 ಶಾಲೆಯ ಶಿಕ್ಷಕಿ ಶ್ರೀಮತಿ ವನಿತಾ. ವಿ. ಹಾಲಪ್ಪನವರ ಸದ್ಯ ತೆರೆಮರೆಯಲ್ಲಿ ಸರ್ಕಾರಿ ಕನ್ನಡ ಶಾಲೆಯ ಉಳಿವಿ ಗಾಗಿ ಹಾಗೂ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ತಮ್ಮ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ.ಇದರಲ್ಲಿ ವಿಶೇಷ ಏನು ಅಂದ್ರೆ ಶಿಕ್ಷಕಿ ವನಿತಾ ತಮ್ಮ ಸ್ವಂತ ಹಣವನ್ನೇ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಾಗಿ ಬಳಸುತ್ತಿರುವುದು
ಸರ್ಕಾರಿ ಶಾಲೆ ಸೇರುವ ಮಗುವಿಗೆ ಸಾವಿರ ರೂಪಾಯಿ ಪ್ರೋತ್ಸಾಹ ಧನ
ಹೌದು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಾರ್ಕೇಟ ನಂ. 1 ಶಾಲೆಯ ಪ್ರಥಮ ತರಗತಿ ಪ್ರವೇಶ ಪಡೆಯುವ ವಿದ್ಯಾರ್ಥಿ ಖಾತೆಗೆ ಒಂದು ಸಾವಿರ ರೂಪಾಯಿ ಹಣವನ್ನು ಮತ್ತು ಶಾಲಾ ಬ್ಯಾಗ್ ಮತ್ತು ನೋಟ್ ಬುಕ್ಸ್ ಗಳನ್ನು ವನಿತಾ ಹಾಲಪ್ಪನವರ ನೀಡುತ್ತಿದ್ದಾರೆ.ಇನ್ನು 2ನೆ ತರಗತಿ ಯಿಂದ 7ನೇ ತರಗತಿ ವರೆಗೆ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳ ನೋಟ್ ಬುಕ್, ಶಾಲಾ ಬ್ಯಾಗ್ ವೆಚ್ಚವನ್ನು ಕೂಡ ನೀಡುತ್ತಿದ್ದಾರೆ.ಅದಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮೇಲಾಧಿಕಾರಿ ಗಳಿಂದ ಆರ್ಥಿಕ ಸವಲತ್ತುಗಳನ್ನು ಕೂಡ ಕೊಡಿಸು ವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಇದೆ ರೀತಿ ಬಡ ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಸದಾ ಸೇವೆ ಸಲ್ಲಿಸುತ್ತಿ ರುವ ವನಿತಾ ಹಾಲಪ್ಪನವರ ಕಾರ್ಯ ಫಲಪ್ರಧವಾ ಗಿದೆ.ಈ ಹಿಂದೆಗಿಂತಲು ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಬರಲು ಆರಂಭಿಸಿದ್ದಾರೆ.ಇನ್ನು ಪ್ರಮುಖ ವಾಗಿ ಉಚಿತ ಟ್ಯೂಷನ್ ಕೂಡಾ, ಕಂಪ್ಯೂಟರ್ ಆಧರಿತ ಶಿಕ್ಷಣ ಹೀಗೆ ಒಬ್ಬ ವಿದ್ಯಾರ್ಥಿಗೆ ಬೇಕಾಗುವ ಎಲ್ಲಾ ರೀತಿಯ ಗುಣಮಟ್ಟದ ಶಿಕ್ಷಣದ ಜವಾಬ್ದಾರಿ ಯನ್ನ ತೆಗೆದು ಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗಾಗಿ ಪೋಷಕರು ಹೆಚ್ಚು ಹೆಚ್ವು ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ
ಈ ಒಂದು ಸೇವೆಗೆ ತಂದೆ-ತಾಯಿಯೇ ಸ್ಫೂರ್ತಿ
ವನಿತಾ ಹಾಲಪ್ಪನವರ ಮೂಲತಃ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಯವರು,ತಂದೆ ಶಿಕ್ಷಣ ಇಲಾಖೆ ಅಧಿಕಾರಿ ಆಗಿ ಕಾರ್ಯ ನಿರ್ವಹಿಸಿದ್ದಾರೆ ತಾಯಿ ಕೂಡ ಶಿಕ್ಷಕಿ ಆಗಿದ್ದವರು, ಈ ಹಿಂದೆ ತಮ್ಮ ತಂದೆ ತಾಯಿ ಅನೇಕ ಬಡ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದರು ನನಗೆ ಅದು ಸ್ಫೂರ್ತಿ ಆಗಿತ್ತು, ನಾನು ಕೂಡ ಕಷ್ಟಪಟ್ಟು ಓದಿ, ಬೆಳಗಾವಿ ಜಿಲ್ಲೆ ಹಾಗೂ ದೂರದ ಬೆಂಗಳೂರು ಪಟ್ಟಣಗಳಲ್ಲಿ ಓದಿ ಶಿಕ್ಷಕಿಯಾಗಿ ಬಂದವಳು ಸಾಧ್ಯವಾದಷ್ಟು ಮಕ್ಕಳಿಗೆ ಸಹಾಯ ಮಾಡಿ ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳೆಸುವುದೇ ನನ್ನ ಗುರಿ ಎಂದು ಸುದ್ದಿ ಸಂತೆ ಗೆ ಮಾಹಿತಿ ನೀಡಿದ್ದಾರೆ ಅಲ್ಲದೆ ವನಿತಾ ಗಡಿನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳಸುವ ಕಾರ್ಯಕ್ಕೂ ಪ್ರೋತ್ಸಾಹ ನೀಡುತ್ತಿದ್ದು ಭಾಷಾಭಿಮಾನ ಮೆರೆಯುತ್ತಾರೆ.
ಸದ್ಯ ಶಿಕ್ಷಕಿ ವನಿತಾ ಹಾಲಪ್ಪನವರ ಕಾರ್ಯಕ್ಕೆ ಅಧಿಕಾರಿಗಳು,ಪೋಷಕರು, ಸಮಾಜದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,ಇನ್ನು ಮುಂದಿನ ದಿನಗಳಲ್ಲಿ ವನಿತಾ ಹಾಲಪ್ಪನವರ ಅಂತೆ ವಿದ್ಯಾವಂತ ಅಧಿಕಾರಿಗಳು ಪ್ರೋತ್ಸಾಹ ನೀಡಿದರೆ ಕನ್ನಡ ಶಾಲೆಗಳು ಮಕ್ಕಳಿಂದ ತುಂಬಿ ತುಳುಕುವಲ್ಲಿ ಸಂದೇಹವೇ ಇಲ್ಲಾ.
ವರದಿ – ಗೋಪ್ಯಾ ಜೊತೆ ಮಂಜು ಸರ್ವಿ ಸುದ್ದಿ ಸಂತೆ ನ್ಯೂಸ್ ಬೆಳಗಾವಿ