ಮತ ಚಲಾಯಿಸಿದವರಿಗೆ ರೂ.100 ಉಚಿತ ರಿಚಾರ್ಜ್ ಪಡೆಯಿರಿ – ಮೇ 10 ರಂದು ತಪ್ಪದೇ ಮತ ಚಲಾಯಿಸಿ ವಿಶೇಷ ಆಫರ್ ಘೋಷಣೆ ಮಾಡಿದ ಸ್ಮಾರ್ಟ್ ಸಿಟಿ…..

Suddi Sante Desk
ಮತ ಚಲಾಯಿಸಿದವರಿಗೆ ರೂ.100 ಉಚಿತ ರಿಚಾರ್ಜ್ ಪಡೆಯಿರಿ – ಮೇ 10 ರಂದು ತಪ್ಪದೇ ಮತ ಚಲಾಯಿಸಿ ವಿಶೇಷ ಆಫರ್ ಘೋಷಣೆ ಮಾಡಿದ ಸ್ಮಾರ್ಟ್ ಸಿಟಿ…..

ಧಾರವಾಡ

ಮತ ಚಲಾಯಿಸಿದವರಿಗೆ ರೂ.100 ಉಚಿತ ಬೈಸಿಕಲ್ ರಿಚಾರ್ಜ್ ಹೌದು ಇಂತಹ ದೊಂದು ಆಫರ್ ಯೋಜನೆ ಯನ್ನು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ವತಿಯಿಂದ ನೀಡಲಾಗಿದೆ.ಮೇ 10 ರಂದು ಮತ ಚಲಾಯಿಸುವವರಿಗೆ ರೂ.100 ಉಚಿತ ಬೈಸಿಕಲ್ ರಿಚಾರ್ಜ್ ಪಡೆಯುವ ಸುವರ್ಣಾವಕಾಶವನ್ನು ನೀಡುತ್ತಿದೆ.

ಮತ ಚಲಾಯಿಸುವ ಮೂಲಕ ಸವಾರಿ ಸವಾರರ ಖಾತೆಗೆ ರೂ.100 ಗಳ ಉಚಿತ ರಿಚಾರ್ಜ್ ಪಡೆಯಬಹುದು.ಅಸ್ತಿತ್ವದಲ್ಲಿರುವ ಸವಾರಿ ಬಳಕೆದಾರರು ಮೇ 10 ರಂದು ಮತ ಚಲಾಯಿಸಿದ ನಂತರ ನಿಮ್ಮ ತೋರುಬೆರಳನ್ನು ಶಾಯಿಯಿಂದ ತೋರಿಸುವ ಸೆಲ್ಫಿ ತೆಗೆದು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 6363803942 ಸಂಖ್ಯೆಗೆ ವಾಟ್ಸಾಪ್ ಮಾಡ ಬೇಕು.

ಹೊಸ ಬಳಕೆದಾರರು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮೇ 10 ರೊಳಗೆ ಸವಾರಿ ಸ್ಮಾರ್ಟ್ ಕಾರ್ಡ್ ಪಡೆದು, ಅಸ್ತಿತ್ವದಲ್ಲಿ ರುವ ಸವಾರಿ ಬಳಕೆದಾರರ ಕಾರ್ಯವಿಧಾನ ವನ್ನು ಅನುಸರಿಸಬೇಕಾಗುತ್ತದೆ.

ಈ ಕೊಡುಗೆ ಮೇ 10 ರ ಮಧ್ಯರಾತ್ರಿಯವರೆಗೆ ಮಾತ್ರ ಚಾಲ್ತಿಯಲ್ಲಿರಲಿದ್ದು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 6363902155 ಸಂಪರ್ಕಿ ಸುವಂತೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.