ಹುಬ್ಬಳ್ಳಿ –
ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಯಾವುದು ಸ್ಪಷ್ಟತೆ ಇಲ್ಲ ಕಾದು ನೋಡಬೇಕಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸಿಎಂ ಬದಲಾವಣೆ ವಿಚಾರದಲ್ಲಿ ಈಗಾಗಲೇ ಸಿಎಂ ಹೇಳಿಕೆ ನೀಡಿದ್ದಾರೆ ಪಕ್ಷ, ಹಾಗೂ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ಸ್ಪಷ್ಟತೆ ಇಲ್ಲ ಈಗ ಕಾದು ನೋಡಬೇಕಷ್ಟೇ ಎಂದರು.

ನನಗೂ ಯಾವುದೇ ಮಾಹಿತಿ ಇಲ್ಲ ನಾನು ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರಲಿಲ್ಲ ಗುಜರಾತ್ ದೆಹಲಿ ಭೇಟಿ ಕೇವಲ ಇಲಾಖೆ ವಿಚಾರಕ್ಕೆ ಹೋಗಿದ್ದು ಎಂದರು.ಇನ್ನೂ ರಾಮನಾಥ ಸಿಂಗ್ ಭೇಟಿ ಮಾಡಿದ್ದು ಸಹ ಇಲಾಖೆ ಕೆಲಸಕ್ಕೆ ರಕ್ಷಣಾ ಇಲಾಖೆ ಕ್ಲಸ್ಟರ್ ನೀಡುವ ಕುರಿತು ಚರ್ಚಿಸಿದ್ದೇನೆ ಸಂಪುಟದಿಂದ ಜಗದೀಶ ಶೆಟ್ಟರ್ ಕೈಬಿಡುವ ವಿಚಾರ ನಳಿನ್ ಕುಮಾರ್ ಕಟಿಲ್ ಈಗಾಗಲೇ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಆಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ ಈಗಲೇ ನಾನು ಏನನ್ನೂ ಮಾತನಾಡುವುದಿಲ್ಲ ತನಿಖಾ ಹಂತದ ವಿಚಾರದ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲವೆಂದರು.