MR ಪಾಟೀಲ ಪರವಾಗಿ ರೋಡ್ ಶೋ ನಡೆಸಿದ ಕೇಂದ್ರವಸಚಿವ ಪ್ರಹ್ಲಾದ್ ಜೋಶಿ – ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮತಯಾಚನೆ…..

Suddi Sante Desk
MR ಪಾಟೀಲ ಪರವಾಗಿ ರೋಡ್ ಶೋ ನಡೆಸಿದ ಕೇಂದ್ರವಸಚಿವ ಪ್ರಹ್ಲಾದ್ ಜೋಶಿ – ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮತಯಾಚನೆ…..

ಕುಂದಗೋಳ

ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ಪರವಾಗಿ ಗುಡಗೇರಿ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ದೊಂದಿಗೆ ಮತಯಾಚನೆ ಮಾಡಿದರು

ಹೌದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾದ ಎಂ ಆರ್ ಪಾಟೀಲ್ ಅವರ ಪರವಾಗಿ ಬೃಹತ್ ರೋಡ್ ಶೋ ನಡೆಸಿ ಪ್ರಚಾರಾರ್ಥ ಸಭೆ ನಡೆಸಲಾಯಿತು.

ಗ್ರಾಮ ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪದೊಂ ದಿಗೆ ಕಾರ್ಯಕರ್ತರು ಬಹಳ ಉತ್ಸಾಹದಿಂದ ನಮ್ಮೊಂದಿಗೆ ಸಭೆಯಲ್ಲಿ ಪಾಲ್ಗೊಂಡರು.

ಕುಂದಗೋಳ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿಯೇ ಭರವಸೆ ಎಂಬುದನ್ನು ಜನತೆ ಮನಗಂಡಿದ್ದು, ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಲಿದೆ ಕುಂದಗೋಳ ಮತಕ್ಷೇತ್ರ ಎಂಬುದನ್ನು ತೋರಿಸಿಕೊಟ್ಟರು

ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ್ ಕುಂದಗೋಳಮಠ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.