ಬೆಂಗಳೂರು –
ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ನಾಡಿನ ಶಿಕ್ಷಕರಿಗೆ ಶಿಕ್ಷಣ ಇಲಾಖೆ ದೊಡ್ಡ ಶಾಕ್ ನೀಡಿದೆ.ಈಗಾಗಲೇ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭ ಮಾಡಿ ದಿನಾಂಕವನ್ನು ಪ್ರಕಟ ಮಾಡಲಾಗಿದ್ದು ಯಾರ ಯಾರ ವರ್ಗಾವಣೆ ಯಾವಾಗ ಎಂಬ ಕುರಿತಂತೆ ಸಮಗ್ರವಾದ ಯೋಜನೆಯನ್ನು ರೂಪಿಸಿ ಪ್ರಕಟ ವನ್ನು ಮಾಡಲಾಗಿದ್ದು ಇದೆಲ್ಲದರ ನಡುವೆ ಕೆಲವೊಂ ದಿಷ್ಟು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿದ ಶಿಕ್ಷಣ ಇಲಾಖೆ ಇವರನ್ನು ತಿಳಿದ ತಿಳಿದ ಸ್ಥಳಗಳಿಗೆ ವರ್ಗಾವಣೆ ಮಾಡಿ ಆದೇಶವನ್ನು ಮಾಡಿದೆ.ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲೆಗಳ ಲ್ಲಿ ಕರ್ತವ್ಯವನ್ನು ಮಾಡುತ್ತಿದ್ದು ಶಿಕ್ಷಕರನ್ನು ಕೂಡಲೇ ಜಾರಿಗೆ ಬರುವಂತೆ ಅವರು ಕೇಳಿದ ಸ್ಥಳಗಳಿಗೆ ವರ್ಗಾವಣೆಯನ್ನು ಮಾಡಿದೆ.ಸಾಮಾನ್ಯವಾಗಿ ಕಳೆದ ಹಲವಾರು ವರ್ಷಗಳಿಂದ ನಾಲ್ಕು ದಿಕ್ಕು ಗಳಲ್ಲಿ ಎಲ್ಲವನ್ನೂ ತ್ಯಾಗ ಮಾಡಿರುವ ಶಿಕ್ಷಕರು ಕೆಲಸವನ್ನು ಮಾಡ್ತಾ ಇದ್ದಾರೆ ಆದರೆ ಸಧ್ಯದ ವರ್ಗಾವಣೆಯ ಲಿಸ್ಟ್ ನ್ನು ನೋಡುತ್ತಿದ್ದರೆ ಈ ಒಂದು ನೀತಿಯಿಂದಾಗಿ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ನಾಡಿನ ಶಿಕ್ಷಕರು ಅಸಮಾಧಾನ ಗೊಂಡಿದ್ದಾರೆ.
ಬೇಕಾ ಬಿಟ್ಟಿಯಾಗಿ ವರ್ಗಾವಣೆಯನ್ನು ಮಾಡಿರುವ ವರಿಗೆ ಯಾರು ಹೇಳೊರು ಕೇಳೊರು ಇಲ್ಲ ಎಂಬ ಮಾತುಗಳು ರಾಜ್ಯದ ತುಂಬೆಲ್ಲಾ ನೊಂದುಕೊಂಡಿ ರುವ ಶಿಕ್ಷಕರಿಂದ ಕಣ್ಣೀರಿನ ಮೂಲಕ ಕೇಳಿ ಬರುತ್ತಿವೆ.ಎಲ್ಲವನ್ನೂ ಗಾಳಿಗೆ ತೂರಿ ವರ್ಗಾವಣೆ ಯನ್ನು ಮಾಡಲಾಗಿದ್ದು ದುರಂತವೇ ಸರಿ.ಇನ್ನೂ ಇವರಿಗೊಂದು ನ್ಯಾಯನಾ ನಮಗೊಂದು ನ್ಯಾಯನಾ ಎಂಬ ನೋವಿನ ಮಾತುಗಳು ರಾಜ್ಯದ ತುಂಬೆಲ್ಲಾ ಕೇಳಿ ಬರುತ್ತಿದ್ದು ಶಿಕ್ಷಕರು ಯಾರನ್ನು ಕೇಳಬೇಕು ಉತ್ತರಿಸುವವರು ಮೌನವಾಗಿದ್ದಾರೆ.