ಮೈಸೂರು –
ಸರ್ಕಾರಿ ಶಾಲೆಯೊಂದನ್ನು ಉಳಿಸುವ ನಿಟ್ಟಿನಲ್ಲಿ ಶಾಲೆ ಉಳಿಸಿ ಹೋರಾಟ ಮೈಸೂರಿನಲ್ಲಿ ಮುಂದುವರೆದಿದೆ.ವಿವಿಧ ಒಕ್ಕೂಟ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 25ನೇ ದಿನಕ್ಕೆ ಕಾಲಿಟ್ಟಿದ್ದು ಮೈಸೂರು ಸೆಂಟ್ರಲ್ ಲಯನ್ಸ್‌ಕ್ಲಬ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಶಾಲೆಯ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಕನ್ನಡ ಶಾಲೆಯನ್ನು ನಾಶಮಾಡುವುದು ಬೇಡ, ರಾಜವಂಶ ಸ್ಥರು ನಿರ್ಮಿಸಿದ ಬಾಲಕಿಯರ ಶಾಲೆ ಉಳಿಯಲಿ, ಕನ್ನಡ ಶಾಲೆ,ಕನ್ನಡ ಭಾಷೆ ಉಳಿಯಲಿ ಜಿಲ್ಲಾಧಿಕಾರಿ ವರದಿ ಜಾರಿಯಾಗಲಿ ಎಂದು ಒತ್ತಾಯವನ್ನು ಮಾಡಲಾಯಿತು
ಶಾಲೆ ಕೆಡವಿ ಯಾರದೋ ಗೋರಿ ಕಟ್ಟುವುದು ಬೇಡ ಘೋಷಣೆಗಳು ಮೊಳಗಿದವು.ಮೈಸೂರು ಸೆಂಟ್ರಲ್ ಲಯನ್ಸ್ ಕ್ಲಬ್ ಎನ್.ಟಿ.ಎಂ ಶಾಲೆಯನ್ನು ಹಲವು ವರ್ಷಗಳ ಕಾಲ ದತ್ತು ತೆಗದುಕೊಂಡು ಬಿಸಿಯೂಟ ವನ್ನು ನೀಡಿತ್ತು.ಇದು ಕನ್ನಡ ಶಾಲೆಯ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ.ರಾಮಕೃಷ್ಣ ಆಶ್ರಮವು ಕನ್ನಡ ಶಾಲೆಯ ಮೇಲೆ ಪ್ರೀತಿ ತೋರಿ ಶಾಲೆ ಉಳಿಸುವ ಕೆಲಸಮಾಡಲಿ ಎಂದುಮೈಸೂರು ಸೆಂಟ್ರಲ್ ಲಯನ್ಸ್ ಕ್ಲಬ್ ಸದಸ್ಯರು ಒತ್ತಾಯಿಸಿ ದರು.ಇನ್ನೂ ಈ ಒಂದು ಪ್ರತಿಭಟನೆಯಲ್ಲಿ ಇತಿಹಾಸ ತಜ್ಞ ಪ್ರೊ ಪಿ.ವಿ.ನಂಜರಾಜಅರಸ್,ಕನ್ನಡ ಕ್ರಿಯಾ ಸಮಿತಿಯ ಸ.ರ ಸುದರ್ಶನ,ಮಾಜಿ ಮೇಯರ್ ಪುರುಷೋತ್ತಮ್,ದಸಂಸ ಬೆಟ್ಟೆಯ್ಯ ಕೋಟೆ, ಸ್ವರಾಜ್ ಇಂಡಿಯಾದ ಉಗ್ರ ನರಸಿಂಗೇಗೌಡ, ಲಯನ್ಸ್ ಕ್ಲಬ್‌ನ ಸಿದ್ದೇಗೌಡ ಇತರರಿದ್ದರು.