ಶಿಕ್ಷಕರ ವರ್ಗಾವಣೆ ಮೂಲ ದಾಖಲೆಗಳ ಪರಿಶೀಲನೆಗೆ ವೇಳಾಪಟ್ಟಿ ಪ್ರಕಟ – ಶಿಕ್ಷಕರ ವರ್ಗಾವಣೆಯ ಈ ಕ್ಷಣದ ಅಪ್ಡೇಟ್…..

Suddi Sante Desk
ಶಿಕ್ಷಕರ ವರ್ಗಾವಣೆ ಮೂಲ ದಾಖಲೆಗಳ ಪರಿಶೀಲನೆಗೆ ವೇಳಾಪಟ್ಟಿ ಪ್ರಕಟ – ಶಿಕ್ಷಕರ ವರ್ಗಾವಣೆಯ ಈ ಕ್ಷಣದ ಅಪ್ಡೇಟ್…..

ಬೆಂಗಳೂರು

ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಮೂಲ ದಾಖಲೆಗಳ ಪರಿಶೀಲನೆಗೆ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಹೌದು ಮೂಲ ದಾಖಲೆ ಗಳ ಪರಿಶೀಲನೆ ನಿಗದಿತ ದಿನದಂದು ಬೆಳಿಗ್ಗೆ 10.30 ರಿಂದ ಸಂಜೆ 05 ಗಂಟೆಯವರಗೆ ನಡೆಯ ಲಿದೆ

ಜೂನ್ 12ರಂದು ಆಂಗ್ಲಭಾಷೆ (ಹೆಚ್.ಕೆ) ಹಾಗೂ ಜೀವಶಾಸ್ತ್ರ(ಹೆಚ್.ಕೆ) (ಆಯ್ಕೆ ಪಟ್ಟಿ ಕ್ರಮ 01 ರಿಂದ ಮುಕ್ತಾಯದವರೆಗೆ)ವಿಷಯದ ದಾಖಲೆ ಪರಿಶೀಲನೆ ನಡೆಯಲಿದೆ. ಜೂ 13ರಂದು ಸಮಾಜ ಪಾಠ, ಕನ್ನಡ ಮತ್ತು ಉರ್ದು (ಹೆಚ್.ಕೆ) (ಕ್ರಮ 01 ರಿಂದ ಮುಕ್ತಾಯದವರೆಗೆ) ವಿಷಯದ ದಾಖಲೆ ಪರಿಶೀಲನೆ

ಜೂ 14ರಂದು ಪಿಸಿಎಂ ಕನ್ನಡ (ಹೆಚ್.ಕೆ) (01 ರಿಂದ 119 ರವರಗೆ) ವಿಷಯದ ದಾಖಲೆ ಪರಿಶೀಲನೆ, ಜೂ 15ರಂದು ಪಿಸಿಎಂ ಕನ್ನಡ (ಹೆಚ್.ಕೆ) (120 ರಿಂದ ಮುಕ್ತಾಯದವರೆಗೆ) ವಿಷಯದ ದಾಖಲೆ ಪರಿಶೀಲನೆ, ಜೂ 16ರಂದು ಪಿಸಿಎಂ ಕನ್ನಡ ಮತ್ತು ಉರ್ದು (ಎನ್.ಹೆಚ್.ಕೆ), ಆಂಗ್ಲಭಾಷೆ (ಎನ್.ಹೆಚ್.ಕೆ), ಜೀವಶಾಸ್ತ್ರ (ಎನ್.ಹೆಚ್.ಕೆ), ಸಮಾಜ ಪಾಠ ಕನ್ನಡ ಮತ್ತು ಉರ್ದು (ಎನ್.ಹೆಚ್.ಕೆ) ವಿಷಯಗಳ (ಆಯ್ಕೆ ಪಟ್ಟಿ ಕ್ರಮ 01 ರಿಂದ ಮುಕ್ತಾಯದವರೆಗೆ) ದಾಖಲೆ ಪರಿಶೀಲನೆ ನಡೆಯಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.