ನಾಳೆಯಿಂದ PUC ಪರೀಕ್ಷೆಗಳು ಆರಂಭ – ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿ ನಿಮಗಾಗಿ…..

Suddi Sante Desk
ನಾಳೆಯಿಂದ PUC ಪರೀಕ್ಷೆಗಳು ಆರಂಭ – ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿ ನಿಮಗಾಗಿ…..

ಬೆಂಗಳೂರು –

ಮಾರ್ಚ್ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಗಳು ಆರಂಭವಾಗಲಿದ್ದು ಈಗಾಗಲೇ ಶಿಕ್ಷಣ ಇಲಾಖೆ ಸಕಲ ಸಿದ್ದ್ಧತೆಯನ್ನು ಮಾಡಿಕೊಂಡಿದ್ದು ಇನ್ನೂ ಈ ಪರೀಕ್ಷೆಗೆ ಹಿಜಾಬ್ ಸೇರಿದಂತೆ ಯಾವುದೇ ಧರ್ಮಧಾರಿತ ಉಡುಪು ಧರಿಸಿ ಬಂದರೆ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲ ಎಂದು ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸುಸೂತ್ರ ವಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ ಸಿದ್ಧತೆ ಕೈಗೊಂಡಿದೆ.1,109 ಕೇಂದ್ರಗ ಳಲ್ಲಿ ಪರೀಕ್ಷೆ ನಡೆಯಲಿದ್ದು 7,26,213 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂ ಡಿದ್ದಾರೆ. ಇದರಲ್ಲಿ ಹೊಸದಾಗಿ 6.29 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು 25,847 ಖಾಸಗಿ,70,586 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ.

3,62,509 ಬಾಲಕಿಯರು ಮತ್ತು 3,63,704 ಬಾಲಕರು ಸೇರಿದ್ದಾರೆ.ಕಲಾ ವಿಭಾಗದಿಂದ 2,34,815, ವಾಣಿಜ್ಯದಲ್ಲಿ 2,47,269 ಮತ್ತು ವಿಜ್ಞಾನ ವಿಭಾಗದಿಂದ 2,44,129 ವಿದ್ಯಾರ್ಥಿ ಗಳು ಪರೀಕ್ಷೆ ಎದುರಿಸಲಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ…..

ದ್ವಿತೀಯ ಪಿಯುಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇಲ್ಲ  ಮಾರ್ಚ್ 9 ರಿಂದ ಮಾರ್ಚ್ 29 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಎಸ್‌ಎಸ್ ಎಲ್ ಸಿ ಮಾದರಿಯಲ್ಲೇ ನಡೆಸಲಾಗುವುದು ರಾಜ್ಯದ ಶೇ. 90 ರಷ್ಟು ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಶೇ. 10 ರಷ್ಟು ಕಾಲೇಜುಗಳಲ್ಲಿ ಸಮವಸ್ತ್ರ ಇಲ್ಲ. ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಯಾವುದೇ ಧರ್ಮ ಸೂಚನೆ ವಸ್ತ್ರ ಧರಿಸಿ ಬರುವಂತಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವವರಿಗೆ KSRTC-BMTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ

ಮಾರ್ಚ್‌ 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಶುರುವಾಗಲಿದ್ದು ಈ ನಿಟ್ಟಿನಲ್ಲಿ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿ ನೀಡಿದ್ದ ಮನವಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಒಪ್ಪಿಗೆ ನೀಡಿ ಈಗಾಗಲೇ ಸುತ್ತೋಲೆ ಹೊರಡಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳ ಕೇಂದ್ರಗಳ ಹೊರತಾಗಿ ಬೇರೆ ಸ್ಥಳಗಳಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಸಂಚರಿಸಲು ವಿದ್ಯಾರ್ಥಿ ಗಳಿಗೆ ಉಚಿತ ಬಸ್ ಸೇವೆ ಲಭ್ಯವಾಗಲಿದೆ.

ಈ ಹಿಂದೆಯೇ ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯು ಉಚಿತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ದಿನಗ ಳಲ್ಲಿ ಉಚಿತ ಬಸ್ ಸೇವೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಿತ್ತು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಬಸ್ ಸೇವೆ ಲಭ್ಯವಾಗಲಿದೆ.

ಅಷ್ಟೇ ಅಲ್ಲದೆ ಪರೀಕ್ಷಾ ದಿನ ಸಂಚರಿಸುವಾಗಿ ಬಸ್ ನಿರ್ವಾಹಕರಿಗೆ ಪರೀಕ್ಷೆಯ ಪ್ರವೇಶ ಪತ್ರ ತೋರಿಸುವುದು ಕಡ್ಡಾಯ ಮಾಡಲಾಗಿದೆ. ಇನ್ನೂ ಈ ಕುರಿತಂತೆ ಚಾಲಕ ಮತ್ತು ನಿರ್ವಾಹಕರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ನಿಗಮ ಸಲಹೆ ಸೂಚನೆಯನ್ನು ನೀಡಲಾಗಿದೆ.ವಿದ್ಯಾರ್ಥಿಗಳೆ ಆಲ್ ದಿ ಬೆಸ್ಟ್ ಚನ್ನಾಗಿ ಪರೀಕ್ಷೆ ಬರೆದು ಜಯಶಾಲಿಯಾಗಿರಿ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.