ಅಂತಿಮಗೊಂಡ 120 ಜನರ ಕಾಂಗ್ರೇಸ್ ಪಕ್ಷದ ಮೊದಲ ಪಟ್ಟಿ – ಮಾರ್ಚ್ 10 ಇಲ್ಲವೇ 13 ರಂದು ಬಿಡುಗಡೆ ಎರಡನೇ ಪಟ್ಟಿ ಅಂತಿಮಗೊಳಿಸು ಆಯ್ಕೆ ಸಮಿತಿ ಕಸರತ್ತು

Suddi Sante Desk
ಅಂತಿಮಗೊಂಡ 120 ಜನರ ಕಾಂಗ್ರೇಸ್ ಪಕ್ಷದ ಮೊದಲ ಪಟ್ಟಿ – ಮಾರ್ಚ್ 10 ಇಲ್ಲವೇ 13 ರಂದು ಬಿಡುಗಡೆ ಎರಡನೇ ಪಟ್ಟಿ ಅಂತಿಮಗೊಳಿಸು ಆಯ್ಕೆ ಸಮಿತಿ ಕಸರತ್ತು

ಬೆಂಗಳೂರು

ರಾಜ್ಯದ ವಿಧಾನಸಭೆಗೆ ಇನ್ನೇನು ಕೆಲವೆ ದಿನಗಳು ಹತ್ತಿರುವಾಗಲೇ ಎಲ್ಲಾ ಪಕ್ಷದವರು ಅಭ್ಯರ್ಥಿಗಳ ಆಯ್ಕೆಗೆ ತೀವ್ರವಾದ ಕಸರತ್ತನ್ನು ನಡೆಸಿದ್ದು ಈಗಾಗಲೇ ಜೆಡಿಎಸ್ ಪಕ್ಷವು ತನ್ನ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದರೆ ಇತ್ತ ಕಾಂಗ್ರೇಸ್ ಪಕ್ಷವು ಈಗಾಗಲೇ 120 ಕ್ಷೇತ್ರ ಗಳ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿದ್ದು ಪಟ್ಟಿಯನ್ನು ಕೂಡಾ ಪೈನಲ್ ಮಾಡಿ ಹೈ ಕಮಾಂಡ್ ಗೆ ಕಳುಹಿಸಿಕೊಟ್ಟಿದೆ.

ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್,ಆಯ್ಕೆ ಸಮಿತಿ ಅಧ್ಯಕ್ಷರು ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತ್ರತ್ವದಲ್ಲಿನ ಆಯ್ಕೆ ಸಮಿತಿಯೂ ಈ ಒಂದು ಪಟ್ಟಿಯನ್ನು ಪೈನಲ್ ಮಾಡಿದೆ.ಇನ್ನೂ ಇದು ಒಂದು ವಿಚಾರವಾದರೆ ಇತ್ತ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಅಂತಿಮ ಗೊಳಿಸಲು ಆಯ್ಕೆ ಸಮಿತಿ ತೀವ್ರವಾದ ಕಸರ ತ್ತನ್ನು ಆರಂಭಿಸಿದೆ

ಇಂದು ನಡೆದ ಸಭೆಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಮೋಹನ್‌ ಪ್ರಕಾಶ್‌ ವಿಪಕ್ಷ ನಾಯಕ ಸಿದ್ದರಾ ಮಯ್ಯ,ಬಿ.ಕೆ. ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪರಮೇಶ್ವರ್‌ ಭಾಗವಹಿಸಿದ್ದರು.ಪ್ರಬಲ ಆಕಾಂಕ್ಷಿಗಳು ಇರುವ ಕಾರಣ ಹಲವು ಸುತ್ತಿನ ಸಮಾಲೋಚನೆ ನಡೆಸಲಾಯಿತು.ಮತ್ತೆ ಇನ್ನೊಮ್ಮೆ ಈ ಕುರಿತಂತೆ ಸಮಿತಿ ಸಭೆ ನಡೆಸಲಿದೆ

ಸಭೆಯಲ್ಲಿ ವಿ. ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಚರ್ಚೆಯನ್ನು ಮಾಡಲಾಗಿದ್ದು 4 ಹಾಗೂ 3 ಹೆಸರಿರುವ 85 ಕ್ಷೇತ್ರ ಗಳಲ್ಲಿ 2 ಹೆಸರು ಗಳಿಗೆ ಇಳಿಸಲು ಕಸರತ್ತು ನಡೆಸಲಾಗಿದೆ. ಪ್ರಮು ಖವಾಗಿ 25 ಕ್ಷೇತ್ರಗಳ ಕುರಿತಂತೆ ತಡರಾತ್ರಿಯ ವರೆಗೂ ಚರ್ಚೆಯನ್ನು ನಡೆಸಲಾಯಿತು ಹಾಲಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಪೈಕಿ 65 ಕ್ಷೇತ್ರಗಳಲ್ಲಿ ಒಂದೊಂದೇ ಹೆಸರು ಅಂತಿಮಗೊ ಳಿಸುವ ಕುರಿತಂತೆ ತೀರ್ಮಾನವನ್ನು ಕೈಗೊಳ್ಳಲಾ ಯಿತು.

ಒಟ್ಟಾರೆಯಾಗಿ ಈಗಾಗಲೇ ಕಾಂಗ್ರೇಸ್ ಪಕ್ಷದ ಮೊದಲ ಪಟ್ಟಿ ಹೈ ಕಮಾಂಡ್ ಅಂಗಳಕ್ಕೆ ಬಿದ್ದಿದ್ದು ಇನ್ನೂ ಇತ್ತ ಎರಡನೇಯ ಪಟ್ಟಿಗೆ ಆಯ್ಕೆ ಸಮಿತಿ ಅಂತಿಮ ಟಚ್ ನೀಡಲಾಗುತ್ತಿದ್ದು ಮಾರ್ಚ್ 10 ಇಲ್ಲವೇ 13 ರಂದು ಮೊದಲ ಪಟ್ಟಿ ಬಿಡುಗಡೆ ಯಾಗಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.